ಸೋಮವಾರ, ಜೂನ್ 14, 2021
27 °C

ಇದು ಗ್ರಂಥಾಲಯವಲ್ಲ, ಕಿಷ್ಕಿಂಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರಿದ್ದಾರೆ, ಆದರೆ ಕುಳಿತು ಓದಲು ಹೆಚ್ಚಿನ ಸ್ಥಳಾವಕಾಶವಿಲ್ಲ. ಸಾವಿರಾರು ಪುಸ್ತಕಗಳಿವೆ, ಅವನ್ನು ಜೋಡಿಸಿಡಲು ರ‌್ಯಾಕ್‌ಗಳಿಲ್ಲ. ಬೇಕಾದ ಪುಸ್ತಕವನ್ನು ಹುಡುಕಿ ಪಡೆಯಲು ಸಾಹಸವನ್ನೇ ಮಾಡಬೇಕು- ಇದು ಇಲ್ಲಿನ ನಗರ ಗ್ರಂಥಾಲಯದ ಸ್ಥಿತಿಗತಿ.1965ರಲ್ಲಿ ದೇವಾಂಗ ಬೀದಿಯ ಸಣ್ಣ ಕಟ್ಟಡದಲ್ಲಿ ಆರಂಭವಾದ ವಾಚನಾಲಯ ನಂತರ ಪುರಸಭಾ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಬಳಿಕ ನೇತಾಜಿ ಪಾರ್ಕ್‌ನ ಗಾಂಧಿ ಭವನದಲ್ಲಿ ಗ್ರಂಥಾಲಯ ಪ್ರಾರಂಭವಾಯಿತು.ಕಾಲ ಕ್ರಮೇಣ ಪಟ್ಟಣದ ಜನಸಂಖ್ಯೆ ಜತೆ ಓದುಗರ ಸಂಖ್ಯೆಯೂ ಹೆಚ್ಚಾಗಿದ್ದರಿಂದ 2002- 03ರ ಸಾಲಿನಲ್ಲಿ ನಗರ ಗ್ರಂಥಾಲಯವಾಗಿ ಮೇಲ್ದರ್ಜೆಗೆ ಏರಿತು. 2400ಕ್ಕೂ ಹೆಚ್ಚು ಅಜೀವ ಸದಸ್ಯರಿದ್ದಾರೆ. ವಿವಿಧ ಪ್ರಕಾರಗಳ  ಸುಮಾರು 35 ಸಾವಿರ ಪುಸ್ತಕಗಳಿವೆ. ಪ್ರತಿನಿತ್ಯ 150ಕ್ಕೂ ಹೆಚ್ಚು ಓದುಗರು ಬರುತ್ತಾರೆ. ಇಷ್ಟೆಲ್ಲ ಹೆಚ್ಚುಗಾರಿಕೆ ಇರುವ ಗ್ರಂಥಾಲಯದ ವಿಸ್ತೀರ್ಣ ಮಾತ್ರ ಬಹಳ ಚಿಕ್ಕದು. 600 ಚದರ ಅಡಿಗೂ ಕಡಿಮೆ ಜಾಗದಲ್ಲಿ ಗ್ರಂಥಾಲಯ ಕಾರ್ಯ ನಿರ್ವಹಿಸುತ್ತಿದೆ.ಈ ಗ್ರಂಥಾಲಯದಲ್ಲಿ ಪುಸ್ತಕಗಳು ಒಪ್ಪ ಓರಣವಾಗಿ ಜೋಡಿಸಿಡಲು ಸ್ಥಳಾವಕಾಶವಿಲ್ಲ. ಪರಿಣಾಮ ಪುಸ್ತಕಗಳು ಗೆದ್ದಲು ಹಿಡಿಯುವ ಹಾದಿಯಲ್ಲಿವೆ. ವಿದ್ಯುತ್ ಇದ್ದರೆ ಮಾತ್ರ ಇಲ್ಲಿ ಓದಲು ಸಾಧ್ಯ, ವಿದ್ಯುತ್ ಇಲ್ಲವೆಂದರೆ ಗ್ರಂಥಾಲಯ ತೆರೆದಿದ್ದೂ ಮುಚ್ಚಿದಂತೆ, ಗಾಳಿ ಬೆಳಕಿಗೂ ಇಲ್ಲಿ ಸ್ಥಳಾವಕಾಶವಿಲ್ಲ, ಕುಡಿಯುವ ನೀರು ಕೂಡ ಇಲ್ಲ.ಇಷ್ಟೆಲ್ಲ ಸಮಸ್ಯೆಗಳ ನಡುವೆ ನಿತ್ಯವೂ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ತೆಲುಗು, ತಮಿಳು ಇನ್ನಿತರ ಪತ್ರಿಕೆಗಳು ಓದಲು ಲಭ್ಯವಿರುವುದು .

 

ನೆಲಮಂಗಲದ ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡದ ಅಗತ್ಯವಿದೆ. ಆಗ ಸಹಾಯಕ ಗ್ರಂಥ ಪಾಲಕರಾಗಿದ್ದ ಪ್ರೇಮಮೂರ್ತಿ ಅವರ ಶ್ರಮದ ಪ್ರತಿಫಲವಾಗಿ ಪುರಸಭೆಯು ತನ್ನ ಕಾರ್ಯಾಲಯದ ಹಿಂಬದಿಯಲ್ಲಿ 40 ಮತ್ತು 102 ಅಡಿ ವಿಸ್ತೀರ್ಣದ ನಿವೇಶನವನ್ನು 8 ವರ್ಷಗಳ ಹಿಂದೆಯೇ ನೀಡಲಾಗಿದೆ.ಪುರಸಭೆಯು ತನ್ನ ವಾರ್ಷಿಕ ಆದಾಯದಲ್ಲಿ ಶೇ 6ರಷ್ಟನ್ನು ಸ್ಥಳೀಯ ಗ್ರಂಥಾಲಯ ನಿರ್ಮಾಣಕ್ಕೆ ಸಂದಾಯ ಮಾಡುತ್ತಿದ್ದರೂ, ಸುಸಜ್ಜಿತ ಗ್ರಂಥಾಲಯದ ಕನಸು ನನಸಾಗಿಲ್ಲ. ಬೆಂಗಳೂರು ಗ್ರಾಮಾಂತರ ಗ್ರಂಥಾಲಯ ಇಲಾಖೆ ಕಟ್ಟಡ ನಿರ್ಮಾಣಕ್ಕೆ ಯೋಜನೆ ಮತ್ತು ಅಂದಾಜು ವೆಚ್ಚ ತಯಾರಿಸಿ ಸಿದ್ಧತೆ ನಡೆಸಿದೆ, ಆದರೆ ಕಾರ್ಯಗತವಾಗಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.