ಸಂಜೆಗೊಂದಿಷ್ಟು ರುಚಿಕಟ್ಟಾದ ಸ್ನಾಕ್ಸ್, ಬಾಯಿಚಪಲ ತೀರಿಸುವ ತಿಂಡಿ, ಜೊತೆಗೆ ಬಜೆಟ್ಗೆ ಸರಿ ಹೊಂದುವಂತಹ ಉಪಹಾರಗೃಹಗಳನ್ನು ಹುಡುಕಿಕೊಂಡು ನೀವು ಅಲೆಯುತ್ತಿದ್ದೀರೇ?

ಹಾಗಿದ್ದರೆ ಜಯನಗರ 4ನೇ ಹಂತದಲ್ಲಿರುವ ಶ್ರೀನಿವಾಸ ಶೆಟ್ಟಿ ಅವರ ಉಪಾಹಾರ ಗೃಹಕ್ಕೊಮ್ಮೆ ಭೇಟಿ ನೀಡಬಹುದು.
ಇಲ್ಲಿ ರುಚಿಕಟ್ಟಾದ, ಬಾಯಲ್ಲಿ ನೀರೂರೂವಂಥ, ಬಿಸಿಬಿಸಿ `ಮುಂಬೈ ವಡಾಪಾವ್~ ಸವಿಯಲು ಸಿದ್ಧವಾಗಿರುತ್ತವೆ. ಇದೇನಿದು `ಮುಂಬೈ ವಡಾಪಾವ್~ ಎಂದು ಅಚ್ಚರಿಯೇ? ಬೆಂಗಳೂರು ವಡಾಪಾವ್ಗಿಂತ ಮುಂಬೈ ವಡಾಪಾವ್ ರುಚಿಕಟ್ಟಾಗಿರುತ್ತದೆನ್ನುತ್ತಾರೆ ಶ್ರೀನಿವಾಸ ಶೆಟ್ಟಿ.

ಮುಂಬೈನಿಂದ ಬೆಂಗಳೂರಿಗೆ ಬಂದಾಗ ಅಲ್ಲಿಯ ವಡಾಪಾವ್ನಲ್ಲಿದ್ದಷ್ಟು ರುಚಿ ಇಲ್ಲಿರಲಿಲ್ಲ. ಬೆಂಗಳೂರಿಗರಿಗೂ ಆ ರುಚಿಯನ್ನು ಪರಿಚಯಿಸಬೇಕು ಎಂದು ನಿರ್ಧರಿಸಿ `ಮುಂಬೈ ವಡಾಪಾವ್~ ಸ್ಟಾಲನ್ನು ಜಯನಗರದಲ್ಲಿರುವ ವಿಜಯಾ ಕಾಲೇಜು ಬಳಿ ಇರುವ ಸಣ್ಣ ಓಣಿಯಲ್ಲಿ ತೆರೆದರು.

ಕಳೆದ 4 ವರ್ಷಗಳಿಂದ ಇವರ ವಡಾಪಾವ್ಗೆ ಎಲ್ಲಿಲ್ಲದ ಬೇಡಿಕೆ. ಪಾವ್ ನೇರವಾಗಿ ಬೇಯಿಸಿ ತಯಾರಿಸಿಕೊಳ್ಳುತ್ತೇನೆ. ಅದಕ್ಕೆ `ಬಾಂಬೆ ಬ್ರೆಡ್~ ಎಂದು ಕರೆಯುತ್ತಾರೆ. ಅದು ಇಲ್ಲಿ ದೊರೆಯುವ ಬ್ರೆಡ್ಗಿಂತ ಭಿನ್ನವಾಗಿರುತ್ತದೆ ಎಂದು ಬೆಂಗಳೂರು ವಡಾಪಾವ್ಗೂ ಮುಂಬೈ ವಡಾಪಾವ್ಗೂ ಇರುವ ವ್ಯತ್ಯಾಸವನ್ನು ತಮ್ಮದೇ ಶೈಲಿಯಲ್ಲಿ ವಿವರಿಸಲು ಶುರುವಿಟ್ಟರು ಶ್ರೀನಿವಾಸ ಶೆಟ್ಟಿ~.

ಇಲ್ಲಿನ ಬ್ರೆಡ್ ಮುಂಬೈನಲ್ಲಿ ಸಿಗುವ ಬ್ರೆಡ್ಗಿಂತ ಹೆಚ್ಚು ಸಿಹಿಯಾಗಿರುವುದರಿಂದ ವಡಾಪಾವ್ ಅಷ್ಟು ರುಚಿಯಾಗಿರುವುದಿಲ್ಲ. ಈ ಅಂಶವನ್ನು ಬೆಂಗಳೂರಿಗೆ ಬಂದ ಮೊದಲಲ್ಲೇ ಕಂಡುಕೊಂಡೆ. ಮುಂಬೈ ಬ್ರೆಡ್ ಸ್ವಲ್ಪ ಉಪ್ಪಿನಂಶದಿಂದ ಕೂಡಿರುತ್ತದೆ. ಇದು `ವಡ~ ತಯಾರಿಸಲು ಹೆಚ್ಚು ಸೂಕ್ತ. ಅದರಿಂದ ವಡಾಪಾವ್ ತಯಾರಿಸಿದರೆ ರುಚಿಕಟ್ಟಾಗಿರುತ್ತದೆ ಎನ್ನುತ್ತಾರೆ ಅವರು.

ಪ್ರತಿದಿನ ಬ್ರೆಡ್ನ್ನು ಹೊಸದಾಗಿ ತಯಾರು ಮಾಡಿಕೊಳ್ಳುವುದರಿಂದ ವಡಾಪಾವ್ ತಾಜಾ ಆಗಿರುತ್ತೆ. ಜೊತೆಗೆ ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಹಾಗಾಗಿಯೇ ಹೆಚ್ಚು ಗ್ರಾಹಕರು ಇದನ್ನು ಇಷ್ಟಪಟ್ಟು ತಿನ್ನುತ್ತಾರೆ ಎನ್ನುವ ಶ್ರೀನಿವಾಸ್ ಇದರ ಜೊತೆಗೆ ಯುವಜನತೆ ಇಷ್ಟಪಡುವ `ಡೆಲ್ಲಿ ಸ್ಯಾಂಡ್ವಿಚ್~ ಕೂಡ ತಯಾರಿಸುತ್ತೇನೆ ಎನ್ನುತ್ತಾರೆ.

ಬ್ರೆಡ್ನಲ್ಲಿ ತರಕಾರಿ ಮತ್ತು ಹಣ್ಣುಗಳನ್ನುಚೆನ್ನಾಗಿ ನಾದುವ ಮೂಲಕ ಗುಜರಾತ್ನ ಸಾಂಪ್ರದಾಯಿಕ ತಿನಿಸಾದ `ಕುಟ್ಚ್ ದಬೇಲಿ~ಯನ್ನು ತಯಾರು ಮಾಡುತ್ತಾರೆ. ಜೊತೆಗೆ ಸಮೋಸ, ಕಚೌರಿ, ಪಾವ್ಬಜಿಯನ್ನೂ ಅಷ್ಟೇ ರುಚಿಕಟ್ಟಾಗಿ ತಯಾರಿಸುತ್ತಾರಂತೆ.
`ಇಲ್ಲಿಗೆ ಹೆಚ್ಚಾಗಿ ಬರುವವರೆಲ್ಲಾ ವಿದ್ಯಾರ್ಥಿಗಳು, ಹಾಗಾಗಿ ಕಡಿಮೆ ಬೆಲೆಯನ್ನು ನಿಗದಿ ಮಾಡಲಾಗಿದೆ.

ಕೆಲವೊಮ್ಮೆ ಕಾಲೇಜು ಫೆಸ್ಟ್ಗಳಿಗೂ ಸ್ಯಾಂಡ್ವಿಚ್ಗಳನ್ನು ತಯಾರಿಸಲು ಆರ್ಡರ್ಗಳು ಬರುತ್ತವೆ~ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಶೆಟ್ಟಿ.ಪ್ರತಿದಿನ ಬೆಳಿಗ್ಗೆ 8ರಿಂದ ರಾತ್ರಿ 9.30ರವರೆಗೆ ಈ ಉಪಹಾರ ಗೃಹ ತೆರೆದಿರುತ್ತದೆ.
ನಿಮಗೂ ವಡಾಪಾವ್ ಸವಿಯಬೇಕೆಂಬ ಆಸೆ ಯಾಗುತ್ತಿದ್ದರೆ ಈ

ವಿಳಾಸವನ್ನು ಹುಡುಕಿಕೊಂಡು ಹೋಗಿ. 11ನೇ ಮುಖ್ಯರಸ್ತೆ, ವಿಜಯ ಕಾಲೇಜು ಎದುರು, ಜಯನಗರ 4ನೇ ಬ್ಲಾಕ್. ಮಾಹಿತಿಗೆ: 95903 77776.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.