ಬುಧವಾರ, ಏಪ್ರಿಲ್ 14, 2021
24 °C

ಇನ್ ಬಾಕ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿಗೆ ವಿದಾಯ ಹೇಳಬೇಕೆಂದು ಹೊರಟ ಅನೇಕರಿಗೆ  `ಬಂಗಾರದ ಮನುಷ್ಯ~  ಆಟೊ ನಾಗರಾಜ್ ಅವರ ಬದುಕು ಹೊಸ ದಾರಿಯನ್ನು ತೋರಿಸುತ್ತಿದೆ. ಸುದೇಶ್ ದೊಡ್ಡಪಾಳ್ಯ  ಅವರು ನಾಗರಾಜ್ ಅವರ ಬದುಕನ್ನು ರೂಪಿಸಿರುವ ಬಗೆಯೂ ಚೆನ್ನಾಗಿದೆ.  ಕಳೆದ ಹಲವಾರು ಸಂಚಿಕೆಗಳಲ್ಲಿ ಇಂತಹ ಲೇಖನಗಳು ಮೇಲಿಂದ ಮೇಲೆ ಮೂಡಿಬರುತ್ತಿರುವುದು ನಿಜಕ್ಕೂ ಶ್ಲಾಘನಾರ್ಹ. ಡಾ.ಆರ್.ಬಾಲಸುಬ್ರಹ್ಮಣ್ಯ ಅವರು ಬರೆಯುತ್ತಿರುವ ಲೇಖನಗಳು ನಿಜಕ್ಕೂ ಶ್ರೇಷ್ಠ ಮಟ್ಟದಲ್ಲಿದೆ. ಉಳಿದಂತೆ ನನ್ನಕಥೆ, ಗ್ಯಾಜೆಟ್ ಲೋಕ ಎಲ್ಲ ಕಾಮನಬಿಲ್ಲು ಓದುಗರಿಗೆ ಉತ್ತಮವಾದ ಮಾಹಿತಿಯನ್ನು ನೀಡುತ್ತಿದೆ. ಪುರವಣಿಯ ಕೊನೆಯ ಪುಟದಲ್ಲಿ ಪ್ರಕಟವಾಗುತ್ತಿರುವ ಕಿರು ವ್ಯಕ್ತಿ ಪರಿಚಯ ಬಹಳ ಪರಿಣಾಮಕಾರಿ ಮಾಹಿತಿಯನ್ನು ನಿಡುತ್ತಿದೆ.

- ಸಂಜಯ ನಾವಿ, ಬಾಗಲಕೋಟೆಆಟೋರಿಕ್ಷಾ ಓಡಿಸುತ್ತಿದ್ದ ನಾಗರಾಜ್ ನೇಗಿಲಯೋಗಿಯಾಗಿ ಮಾದರಿ ಕೃಷಿಕನಾದದ್ದನ್ನು ಓದಿ ಸಂತೋಷವಾಯಿತು. ಎಲ್ಲವನ್ನೂ ಮೆಟ್ಟಿ ಆತ್ಮಸ್ಥೈರ್ಯದಿಂದ ಭೂಮಿ ತಾಯಿಯನ್ನು ನಂಬಿ ಕೃಷಿ ಮಾಡಿ ಲಕ್ಷಾಂತರ ರೂಪಾಯಿ ದುಡಿಯುತ್ತಿರುವ ನಾಗರಾಜ್ ಅವರ ಬದುಕು ಉಳಿದವರಿಗೆ ಮಾದರಿಯಾಗಲಿ.

- ನ. ಮುನಿನಂಜಪ್ಪ ರೆಡ್ಡಿ, ಕೆಂಗೇರಿ ಉಪನಗರ, ಬೆಂಗಳೂರುಏರುತ್ತಿರುವ ಪೆಟ್ರೋಲ್ ದರದ ನಡುವೆಯೂ ಹೊಸ ಹೊಸ ವಾಹನಗಳು ರಸ್ತೆಗೆ ಇಳಿಯುತ್ತಲೇ ಇವೆ. ಈ ಹೊತ್ತಿನಲ್ಲಿ ಯಮಹಾ ಅಗ್ಗದ ಬೈಕ್ ತಯಾರಿಕೆಗೆ ಹೊರಟಿರುವುದು ಕುತೂಹಲಕರ. ಈ ವಾಹನ ಪೆಟ್ರೋಲ್‌ನಲ್ಲಿ ಕಳೆದುಕೊಳ್ಳುವುದನ್ನು ತನ್ನ ಬೆಲೆಯಲ್ಲಿ ತುಂಬಿಸಿಕೊಡಬಹುದಾದ ಒಂದು ಸಾಧ್ಯತೆ ಇದೆ-ಈ ವಾಹನದ ಮೈಲೇಜ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಹೆಚ್ಚಿದ್ದರೆ!

- ಸುರೇಶ ಕೊಂಡೆ, ಬೀದರ್ಆಟೋ ನಾಗರಾಜ್ ಕುರಿತ ಲೇಖನ ರೈತರಿಗೆ ಸ್ಫೂರ್ತಿ ತುಂಬುವಂಥದ್ದು. ನಿರಾಶೆಯಂಚಿಗೆ ತಲುಪಿದ ನಂತರವೂ ಹೊಸ ಬದುಕನ್ನು ನಾಗರಾಜ್ ಅವರಿಗೆ ಕಂಡುಕೊಳ್ಳಲು ಸಾಧ್ಯವಾಯಿತು. ಇದು ಎಲ್ಲಾ ರೈತರಿಗೆ ಆಗಲಿ ಎಂದು ಹಾರೈಸೋಣ.

- ರಾಜೇಶ್ ಎಂ.ಬಿ. ಮೊಗನೂರು (ಮಳವಳ್ಳಿ)ವಾಹನಗಳ ಕುರಿತಂತೆ ಅತ್ಯುತ್ತಮ ಮಾಹಿತಿಗಳನ್ನು `ಕಾಮನಬಿಲ್ಲು~ ನೀಡುತ್ತಿದೆ. ಪ್ರತೀವಾರ ಹೊಸತಾಗಿ ಬಿಡುಗಡೆಯಾಗಿರುವ ವಾಹನಗಳ ಬಗ್ಗೆ ಮಾಹಿತಿ ನೀಡುತ್ತಿದ್ದ `ಆನ್ ರೋಡ್~ ಅಂಕಣ ಇತ್ತೀಚೆಗೆ ಕಾಣೆಯಾಗಿದೆ. ಅದನ್ನು ಮತ್ತೆ ಆರಂಭಿಸಬೇಕೆಂದು ವಿನಂತಿಸುತ್ತೇನೆ.

- ಎಲ್.ಟಿ. ಪ್ರಕಾಶ್, ಮಂಡ್ಯ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.