ಹುಬ್ಬಳ್ಳಿ: ಗಾಂಜಾ, ಅಫೀಮು ಮೊದಲಾದ ಮಾದಕ ವಸ್ತುಗಳಂತೆಯೇ ಮದ್ಯ, ತಂಬಾಕು, ಸಿಗರೇಟು, ಗುಟ್ಕಾ ಮುಂತಾದ ವ್ಯಸನಕ್ಕೆ ಅಂಟಿಕೊಂಡವರನ್ನು ವ್ಯಸನಮುಕ್ತಗೊಳಿಸುವ ಕೇಂದ್ರವೊಂದು ಇಲ್ಲಿಯ ಶಕ್ತಿನಗರದ ಬಿಡ್ನಾಳ ಕ್ರಾಸ್ ಬಳಿಯಿದೆ. ಅದು ಮೈತ್ರಿ ವ್ಯಸನಮುಕ್ತ ಕೇಂದ್ರ.

ಮದ್ಯ, ಮಾದಕ ವ್ಯಸನಿಗಳನ್ನು ವ್ಯಸನಮುಕ್ತರನ್ನಾಗಿಸಲು 12 ವರ್ಷಗಳ ಹಿಂದೆ ಹುಟ್ಟಿಕೊಂಡ ಸರ್ಕಾರೇತರ ಸಂಸ್ಥೆ ಮೈತ್ರಿ ಕೇಂದ್ರ. ದಾವಣಗೆರೆಯ ಬಿ.ಜಿ. ಶಂಕರಗೌಡ ಪಾಟೀಲರು ಆರಂಭಿಸಿದ ಈ ಸಂಸ್ಥೆಯಲ್ಲಿ ಮನೋರೋಗ ತಜ್ಞ ಡಾ.ಎಚ್.ಎಸ್. ಕುಲಕರ್ಣಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಇಲ್ಲಿ ದಾಖಲಾಗಿರುವ 25 ಜನರಲ್ಲಿ ಶೇ 80ರಷ್ಟು ಮದ್ಯವ್ಯಸನಿಗಳು. ಉಳಿದವರು ತಂಬಾಕು, ಸಿಗರೇಟು, ಗುಟ್ಕಾ ಚಟಕ್ಕೆ ಅಂಟಿಕೊಂಡವರು. ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಡಾ.ಎಚ್.ಎಸ್. ಕುಲಕರ್ಣಿ, ಜೂನ್ 26ರಂದು ಔಷಧಿಗಳ ದುರ್ಬಳಕೆ ಹಾಗೂ ಮಾದಕ ವಸ್ತುಗಳ ವಿರೋಧಿ ದಿನ ಆಚರಿಸುತ್ತೇವೆ. ಆಚರಣೆಗೆ ದಿನವೊಂದನ್ನು ನಿಗದಿಗೊಳಿಸಲಾಗಿದೆ. ಆದರೆ ಜಾಗೃತಿ ನಿತ್ಯ ಬೇಕು ಎನ್ನುತ್ತಾರೆ.

`18ರಿಂದ 55 ವರ್ಷದೊಳಗಿನವರು ವ್ಯಸನಕ್ಕೆ ಅಂಟಿಕೊಳ್ಳುತ್ತಾರೆ. ಆದರೆ 20ರಿಂದ 35 ವರ್ಷದವರೇ ಹೆಚ್ಚಿನವರು ವ್ಯಸನಿಗಳಾಗುತ್ತಾರೆ. ವ್ಯಸನಿಗಳು ನಮ್ಮ ಕೇಂದ್ರಕ್ಕೆ ಬಂದ ದಿನದಿಂದ ಚಟ ಮಾಡದೆ ಇದ್ದಾಗ ಅಂಥವರಿಗೆ ಕೈಕಾಲು ನಡುಕ, ನಿದ್ರಾಹೀನತೆ, ಭಯ, ಆತಂಕ, ಭ್ರಮೆ ಕಾಡುತ್ತವೆ. ಅಂಥವರಿಗೆ ಚಿಕಿತ್ಸೆಯ ಮೊದಲ ಹಂತವೆಂದು ಐದರಿಂದ ಏಳು ದಿನಗಳವರೆಗೆ ಇಂಜೆಕ್ಷನ್ ಹಾಗೂ ಮಾತ್ರೆ ಮೂಲಕ ಚಿಕಿತ್ಸೆ ನೀಡುತ್ತೇವೆ. ನಂತರ ಸಲಹೆ ಹಾಗೂ ಕುಟುಂಬದ ಸದಸ್ಯರೊಂದಿಗೆ ಕೌನ್ಸೆಲಿಂಗ್ ನಡೆಸುತ್ತೇವೆ. ಹೇಗೆ ಚಟಕ್ಕೆ ಅಂಟಿಕೊಂಡರೆಂದು ತಿಳಿದುಕೊಳ್ಳುತ್ತೇವೆ. ಆಮೇಲೆ ಚಿಕಿತ್ಸೆ ಮುಂದುವರಿಸುತ್ತೇವೆ~ ಎಂದು ಅವರು ವಿವರಿಸಿದರು.

`ವ್ಯಸನ ಮುಕ್ತರಾಗಲು 30 ದಿನಗಳ ನಿರಂತರ ಚಿಕಿತ್ಸೆ ಅಗತ್ಯ. ಆಮೇಲೆ ಆರು ತಿಂಗಳಿಂದ ಒಂದು ವರ್ಷದವರೆಗೆ ವ್ಯಕ್ತಿಗಳನ್ನು ಕೇಂದ್ರೀಕರಿಸಿ ಆಗಾಗ ಸಲಹೆ, ಅಗತ್ಯವಾದರೆ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆ ಪಡೆಯುವವರು ಮತ್ತೆ ಚಟಕ್ಕೆ ಅಂಟಿಕೊಳ್ಳಲು ಯತ್ನಿಸಿದರೆ ದೇಹದ ಮೇಲೆ ಪರಿಣಾಮ ಆಗುತ್ತದೆ. ಇದು ನಾವು ಕೊಡುವ ಮಾತ್ರೆಗಳಿಂದ ಆಗುತ್ತದೆ. ಆಗ ವ್ಯಕ್ತಿಗಳಿಗೆ ಭಯ, ಆತಂಕ ಶುರುವಾಗಿ ವ್ಯಸನಮುಕ್ತರಾಗಲು ಯತ್ನಿಸುತ್ತಾರೆ.

ಹೀಗೆ ಶೇ 65-70ರಷ್ಟು ಜನರು ವ್ಯಸನಮುಕ್ತರಾದ ಉದಾಹರಣೆಗಳಿವೆ~ ಎನ್ನುತ್ತಾರೆ ಅವರು.
`ಔಷಧಗಳ ದುರ್ಬಳಕೆಯಿಂದಲೂ ಆಪತ್ತು ಬರಲಿದೆ. ಕೆಮ್ಮು ಕಡಿಮೆಯಾಗಲು ಕೊಡುವ ಔಷಧಿಯನ್ನು ನಿತ್ಯ 6-8 ಬಾಟಲಿಗಳಷ್ಟು ಸೇವಿಸುವುದರಿಂದ ಮದ್ಯ ಸೇವಿಸಿದಂತಾಗುತ್ತದೆ. ಇಂಥವರಿಗೂ ಚಿಕಿತ್ಸೆ ನೀಡುತ್ತೇವೆ~ ಎಂದು ಅವರು ಭರವಸೆ ನೀಡುತ್ತಾರೆ.

ಹವ್ಯಾಸ ವ್ಯಸನವಾಗಿ...
ಆರಂಭದಲ್ಲಿ ಗೆಳೆಯರೊಂದಿಗೆ ಮಜಾಕ್ಕೆ ಸಿಗರೇಟು, ತಂಬಾಕು ಇಲ್ಲವೆ ಗುಟ್ಕಾ ತಿನ್ನುವ ಹವ್ಯಾಸಿ ಗಳಾಗಿರುತ್ತಾರೆ. ಆದರೆ ನಿಧಾನವಾಗಿ ಚಟಕ್ಕೆ ಅಂಟಿಕೊಳ್ಳುತ್ತಾರೆ. ಇದರೊಂದಿಗೆ ನಿತ್ಯ ಅನುಭವಿಸುವ ಒತ್ತಡ, ಉದ್ವೇಗ, ಆತಂಕದಿಂದ ದೂರಾಗಲು ಗುಟ್ಕಾ ಇಲ್ಲವೆ ಸಿಗರೇಟಿಗೆ ಮೊರೆ ಹೋಗುವವರು ಇದ್ದಾರೆ. ಆಗ ತಾತ್ಕಾಲಿಕ ಉಪಶಮನ ದೊರೆಯಬಹುದು. ಆದರೆ ನಿಧಾನವಾಗಿ ವ್ಯಸನಿಗಳಾಗುವವರೇ ಹೆಚ್ಚು. ಇದಕ್ಕೆ ಪರಿಹಾರವೇನು? ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಡಾ.ವಿ.ಬಿ. ನಿಟಾಲಿ, ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಕ್ರೀಡೆಗಳಲ್ಲಿ ತೊಡಗಿಸಬೇಕು. ಸಂಗೀತ ಕೇಳಿಸಬೇಕು. ಬೇಸರ, ಖಿನ್ನತೆ ಕಾಡದಂತೆ ಕುಟುಂಬದ ಸದಸ್ಯರು ನೋಡಿಕೊಳ್ಳಬೇಕು. ಜೊತೆಗೆ ಬಂಧುಗಳು ಹಾಗೂ ಸ್ನೇಹಿತರು ನೆರವಾಗಬೇಕು ಎಂದು ಸಲಹೆ ನೀಡುತ್ತಾರೆ.

`ಬಹುಪಾಲು ಯುವಜನರು ತಾತ್ಸಾರಕ್ಕೆ ಒಳಗಾಗಿದ್ದೇವೆ ಎಂಬ ಕಾರಣದಿಂದ ಬೇಸರಗೊಂಡು ವ್ಯಸನಿ ಗಳಾಗುತ್ತಾರೆ. ಅಂಥವರಿಗೆ ಕುಟುಂಬದ ಸಾಂತ್ವನ ಬೇಕು. ಆತ್ಮವಿಶ್ವಾಸ ಬೆಳೆಸಬೇಕು. ಪ್ರೀತಿ ತೋರಿಸಬೇಕು~ ಎನ್ನುವ ಕಿವಿಮಾತು ಹೇಳುತ್ತಾರೆ ಡಾ.ನಿಟಾಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.