ಬೆಂಗಳೂರು: ಲೋಕಾಯುಕ್ತ ವಿಶೇಷ ಕೋರ್ಟ್ನಲ್ಲಿ ಗಣ್ಯ ವ್ಯಕ್ತಿಗಳ ವಿರುದ್ಧ ದಾಖಲಾಗುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಈಗ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ಆರ್.ನಿರಾಣಿ ಅವರ ಸರದಿ.

ಅಧಿಕಾರ ದುರುಪಯೋಗ ಪಡಿಸಿಕೊಂಡು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಆಲಂ ಪಾಷಾ ಎನ್ನುವವರು ಖಾಸಗಿ ದೂರು ದಾಖಲಿಸಿದ್ದಾರೆ. ಇದರ ವಿಚಾರಣೆಯನ್ನು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಶುಕ್ರವಾರ ಕೈಗೆತ್ತಿಕೊಳ್ಳಲಿದ್ದಾರೆ.

ಆರೋಪ ಏನು?: ದೇವನಹಳ್ಳಿ ಬಳಿಯ ಹೂವಿನಾಯಕನಹಳ್ಳಿಯಲ್ಲಿನ ಸುಮಾರು 20 ಎಕರೆ ಕೈಗಾರಿಕಾ ಜಮೀನು ಹಾಗೂ ದಾಬಸ್ಪೇಟೆ ಕೈಗಾರಿಕಾ ಪ್ರದೇಶದಲ್ಲಿನ ಮರಕನಕುಪ್ಪೆ ಗ್ರಾಮದಲ್ಲಿ ಏಳು ಎಕರೆ ಜಮೀನನ್ನು 2010ರಲ್ಲಿ ಸ್ವಂತದ ಲಾಭಕ್ಕಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದಾರೆ (ಡಿನೋಟಿಫೈ) ಎನ್ನುವುದು ಅರ್ಜಿದಾರರ ದೂರು.

`ಈ ಜಮೀನುಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಉದ್ದೇಶಕ್ಕಾಗಿ ಅಭಿವೃದ್ಧಿಪಡಿಸಿತ್ತು. ಇದನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಮೂಲಕ ನಿರಾಣಿ ಅವರು ಸರ್ಕಾರಕ್ಕೆ ಸುಮಾರು 27 ಕೋಟಿ ರೂಪಾಯಿಗಳನ್ನು ನಷ್ಟ ಮಾಡಿದ್ದಾರೆ.

`2010ನೇ ಸಾಲಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ, ಅಸ್ತಿತ್ವದಲ್ಲಿ ಇಲ್ಲದೇ ಇರುವ ಕಂಪೆನಿಗಳ ಹೆಸರಿನಲ್ಲಿ ತಮ್ಮ ಕುಟುಂಬ ವರ್ಗದವರ ಹೆಸರು ಸೇರಿಸಿ ಅದರೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಕೋಟಿಗಟ್ಟಲೆ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ. ವಿಜಾಪುರದಲ್ಲಿರುವ `ಸಾಯಿಪ್ರಿಯಾ ಶುಗರ್ಸ್~ ಕಂಪೆನಿಗೆ ಕಾನೂನುಬಾಹಿರವಾಗಿ 200 ಎಕರೆ ಜಮೀನು ನೀಡಿದ್ದಾರೆ~ ಎಂದು ಆರೋಪಿಸಲಾಗಿದೆ.

ಪಾಷಾ ಅವರು ಸಲ್ಲಿಸಿರುವ ದೂರಿನಲ್ಲಿ ನಿರಾಣಿ ಜೊತೆ ಅವರ ಸಹೋದರ ಎಚ್.ಆರ್.ನಿರಾಣಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಆರೋಪಿಗಳನ್ನಾಗಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.