ಈಜು: ಅರವಿಂದ್, ಸಲೋನಿಗೆ ಪ್ರಶಸ್ತಿ

ಬೆಂಗಳೂರು: ವೇಗವಾಗಿ ಗುರಿಯತ್ತ ಈಜಿದ ಬಸವನಗುಡಿ ಈಜು ಕೇಂದ್ರದ ಸಲೋನಿ ದಲಾಲ್ ಮತ್ತು ಅರವಿಂದ್ ಮಣಿ ಅವರು ರಾಜ್ಯ ಈಜು ಸಂಸ್ಥೆ ಆಶ್ರಯದ ರಾಜ್ಯ ಸೀನಿಯರ್ ಈಜು ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗಗಳಲ್ಲಿ ಎರಡು ಚಿನ್ನ ಗೆದ್ದಿದ್ದಾರೆ.
ಚಿಕ್ಕಲಸಂದ್ರದ ಕೆ.ಎ. ನೆಟ್ಟಕಲ್ಲಪ್ಪ ಈಜು ಕೇಂದ್ರದಲ್ಲಿ ಗುರುವಾರ ನಡೆದ ಮಹಿಳೆಯರ 200ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್ ವಿಭಾಗದಲ್ಲಿ ಸಲೋನಿ 2 ನಿಮಿಷ 48.43 ಸೆಕೆಂಡುಗಳಲ್ಲಿ ಗುರಿ ಸೇರಿದರು.
50 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್ನಲ್ಲಿ ಸಲೋನಿ 36.86ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು.
ಪುರುಷರ ವಿಭಾಗದ 100 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್ನಲ್ಲಿ ಅರ ವಿಂದ್ 58.61 ಸೆಕೆಂಡುಗಳಲ್ಲಿ ಗುರಿ ತಲುಪಿದರೆ, 200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ 2 ನಿಮಿಷ 08.51 ಸೆಕೆಂಡುಗಳಲ್ಲಿ ನಿಗದಿತ ದೂರ ಕ್ರಮಿಸಿದರು.
ಗುರುವಾರದ ಫಲಿತಾಂಶಗಳು (ಚಿನ್ನ ಗೆದ್ದವರು): ಪುರುಷರು: 1500 ಮೀಟರ್ಸ್ ಫ್ರೀಸ್ಟೈಲ್: ಮಹಮ್ಮದ್ ಯಾಕೂಬ್ ಸಲೀಂ (ಡಾಲ್ಫಿನ್ ಅಕ್ವೇಟಿಕ್ಸ್; ಕಾಲ: 17.05ಸೆ.).
200 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್:
ಎಸ್.ಪಿ. ಲಿಖಿತ್ (ಬಸವನಗುಡಿ ಈಜು ಕೇಂದ್ರ; ಕಾಲ: 2ನಿ. 26.44ಸೆ.).
100ಮೀಟರ್ಸ್ ಬ್ಯಾಕ್ಸ್ಟ್ರೋಕ್:
ಅರವಿಂದ್ ಮಣಿ (ಬಿಎಸಿ; ಕಾಲ: 58.61ಸೆ.).
50 ಮೀಟರ್ಸ್ ಫ್ರೀಸ್ಟೈಲ್:
ವೈಷ್ಣವ್ ಹೆಗ್ಡೆ (ಪುತ್ತೂರ್ ಈಜು ಕೇಂದ್ರ; ಕಾಲ: 24.69 ಸೆ.).
200 ಮೀಟರ್ಸ್ ಮೆಡ್ಲೆ:
ಅರವಿಂದ್ ಮಣಿ (ಬಿಎಸಿ; ಕಾಲ: 2 ನಿ. 08.51ಸೆ.).
50 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್:
ವೈಷ್ಣವ್ ಹೆಗ್ಡೆ (ಪುತ್ತೂರು ಈಜು ಕೇಂದ್ರ; ಕಾಲ: 29.98ಸೆ.).
100ಮೀಟರ್ಸ್ ಫ್ಲೈ:
ಅವಿನಾಶ್ ಮಣಿ (ಬಿಎಸಿ; ಕಾಲ: 56.70ಸೆ.).
ಮಹಿಳೆಯರು: 1500 ಮೀ ಫ್ರೀಸ್ಟೈಲ್: ವಿ. ಮಾಳವಿಕಾ (ಬಸವನಗುಡಿ ಈಜು ಕೇಂದ್ರ; ಕಾಲ: 18 ನಿ. 01.99ಸೆ.).
200ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್:
ಸಲೋನಿ ದಲಾಲ್ (ಬಿಎಸಿ; ಕಾಲ: 2ನಿ. 48.43ಸೆ.).
100 ಮೀಟರ್ಸ್ ಬ್ಯಾಕ್ಸ್ಟ್ರೋಕ್:
ಜಾನತಿ ರಾಜೇಶ್ (ಬಿಎಸಿ; ಕಾಲ: 1 ನಿ. 12.12ಸೆ.).50 ಮೀಟರ್ಸ್ ಫ್ರೀಸ್ಟೈಲ್:ಟಿ.ಸ್ನೇಹಾ (ಬಿಎಸಿ; ಕಾಲ: 28.86ಸೆ.). 200 ಮೀಟರ್ಸ್ ಮೆಡ್ಲೆ :
ಶ್ರದ್ಧಾ ಸುದೀರ್ (ಬಿಎಸಿ; ಕಾಲ: 2ನಿ. 31.35ಸೆ.).50 ಮೀಟರ್ಸ್ ಬ್ರೆಸ್ಟ್ಸ್ಟ್ರೋಕ್: ಸಲೋನಿ ದಲಾಲ್ (ಬಿಎಸಿ; ಕಾಲ: 36.86ಸೆ.). 100 ಮೀಟರ್ಸ್ ಫ್ಲೈ: ಮಯೂರಿ ಲಿಂಗರಾಜ್ (ಬಿಎಸಿ; ಕಾಲ:1ನಿ. 07.77ಸೆ.).
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.