ಬುಧವಾರ, ಜನವರಿ 22, 2020
16 °C

ಈವಾರ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅದ್ವೈತ’

ಎಂ.ಎನ್. ಸುರೇಶ್ ನಿರ್ಮಾಣದ ಚಿತ್ರ ‘ಅದ್ವೈತ’. ‘ಜಟ್ಟ’ ಖ್ಯಾತಿಯ ಗಿರಿರಾಜ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಅಜಯ್‌ರಾವ್‌ ಮತ್ತು ಹರ್ಷಿಕಾ ಪೂಣಚ್ಚ ಚಿತ್ರದ ನಾಯಕ–ನಾಯಕಿ. ವೀರಸಮರ್ಥ್‌ ಸಂಗೀತ, ಕಿರಣ್‌ ಹಂಪಾಪುರ ಛಾಯಾಗ್ರಹಣ ‘ಅದ್ವೈತ’ಕ್ಕಿದೆ.ರಘು ನೃತ್ಯ ಸಂಯೋಜನೆ, ಕೆ.ಎಂ. ಪ್ರಕಾಶ್‌ ಸಂಕಲನ, ಅಲ್ಟಿಮೇಟ್‌ ಶಿವು ಹಾಗೂ ಡಿಫರೆಂಟ್‌ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಅಚ್ಯುತಕುಮಾರ್‌, ನೀನಾಸಂ ಅಶ್ವತ್ಥ್ ಮುಂತಾದವರು ತಾರಾಬಳಗದಲ್ಲಿದ್ದಾರೆ.‘ದ್ಯಾವ್ರೆ’

ಗಡ್ಡ ವಿಜಿ ನಿರ್ದೇಶನದ ಚೊಚ್ಚಿಲ ಚಿತ್ರ ‘ದ್ಯಾವ್ರೆ’. ಯೋಗರಾಜ್‌ ಭಟ್‌, ನೀನಾಸಂ ಸತೀಶ್‌, ಸೋನುಗೌಡ, ಸೋನಿಯಾಗೌಡ, ಗಂಧರ್ವ, ಸತ್ಯ, ಅರಸು ಮಹಾರಾಜ್‌, ರಾಜೇಶ್‌, ಮೈಕೋ ನಾಗರಾಜ್, ಶ್ರುತಿ ಹರಿಹರನ್‌, ಪೆಟ್ರೋಲ್‌ ಪ್ರಸನ್ನ, ಶ್ವೇತಾ ಪಂಡಿತ್‌, ಕೃಷ್ಣ ಅಡಿಗ  ಇತರರು ತಾರಾಗಣದಲ್ಲಿರುವ ಈ ಚಿತ್ರವನ್ನು ಜಯಣ್ಣ, ಭೋಗೇಂದ್ರ ಮತ್ತು ರಾಜೇಶ್‌ ಭಟ್‌ ನಿರ್ಮಿಸಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಸ ಸಂಯೋಜನೆಯನ್ನೂ ಗಡ್ಡ ವಿಜಿ ನಿರ್ವಹಿಸಿದ್ದಾರೆ.ಯೋಗರಾಜ್‌ ಭಟ್‌, ಜಯಂತ ಕಾಯ್ಕಿಣಿ ಸಾಹಿತ್ಯ, ವೀರ ಸಮರ್ಥ್‌ ಸಂಗೀತ, ಗುರುಪ್ರಶಾಂತ್‌ ಪಿ.ರೈ ಛಾಯಾಗ್ರಹಣ ಚಿತ್ರಕ್ಕಿದೆ.‘ಬಿ–-3 ಲವ್ ಯೂ’

ಶ್ರೀಕಾಂತ್ (ಒಲವೇ ಮಂದಾರ) ಮತ್ತು ಹರ್ಷಿಕಾ ಪೂಣಚ್ಚ ಅಭಿನಯದ ‘ಬಿ–3 ಲವ್‌ ಯೂ’ ಈ ವಾರ ತೆರೆಕಾಣುತ್ತಿದೆ. ಬಸವರಾಜ್‌ ಮಂಚಯ್ಯ ಚಿತ್ರದ ನಿರ್ಮಾಪಕರು.ಘನಶ್ಯಾಮ್ ನಿರ್ದೇಶನದ ಈ ಚಿತ್ರಕ್ಕಿದೆ. ಮುರಳೀಧರ್ ಛಾಯಾಗ್ರಹಣವಿದೆ. ಅನೂಪ್‌ ಸೀಳಿನ್‌ ಸಂಗೀತ, ಕೆ.ಎಂ. ಪ್ರಕಾಶ್‌ ಸಂಕಲನ, ಮುರಳಿ ಮತ್ತು ಕಲೈ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಇಸ್ಮಾಯಿಲ್‌ ಕಲಾನಿರ್ದೇಶನ, ರಾಮ್‌ ಲಕ್ಷ್ಮಣ್‌ ಸಾಹಸ ನಿರ್ದೇಶನ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)