ಭಾನುವಾರ, ಮೇ 16, 2021
22 °C

ಈಶಾನ್ಯ ಭಾರತದಲ್ಲಿ ಮತ್ತೆ ಭೂಕಂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿಲ್ಲಾಂಗ್ (ಪಿಟಿಐ): ಈಶಾನ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಪುನಃ ಗುರುವಾರ ರಾತ್ರಿ 7.48ರಲ್ಲಿ ಲಘು ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 4.8ರಷ್ಟಿತ್ತು. ಕಂಪನವು ಮ್ಯಾನ್ಮಾರ್‌ನಲ್ಲಿ ಕೇಂದ್ರೀಕೃತವಾಗಿತ್ತು.

ಸಿಕ್ಕಿಂ, ಮೇಘಾಲಯ, ಮಣಿಪುರ, ತ್ರಿಪುರಾ, ಮಿಜೋರಾಂ ಮತ್ತಿತರ ಕಡೆ ಭೂಮಿ ನಡುಗಿದೆ. ಯಾವುದೇ ಸಾವು ನೋವಿನ ವರದಿಯಾಗಿಲ್ಲ. ಐದು ದಿನಗಳ ಹಿಂದಷ್ಟೇ ಈ ಭಾಗದಲ್ಲಿ ಭಾರಿ ಭೂಕಂಪನವಾಗಿದ್ದನ್ನು ಸ್ಮರಿಸಬಹುದು.ಗ್ಯಾಂಗ್ಟಕ್ (ಸಿಕ್ಕಿಂ) ವರದಿ: ಗುರುವಾರ ರಾತ್ರಿ 10.15ರ ಸಮಯದಲ್ಲಿ ಇಲ್ಲಿ ಪುನಃ ಲಘು ಭೂಕಂಪ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ 3.9ರ ತೀವ್ರತೆ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮತ್ತೆ ಭೂಮಿ ಕಂಪಿಸಿದ್ದರಿಂದ ಆತಂಕಗೊಂಡ ಜನರು ತಮ್ಮ ತಮ್ಮ ಮನೆಗಳಿಂದ ಹೊರಗೆ ಬಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.