ಸೋಮವಾರ, ಜನವರಿ 27, 2020
26 °C

ಉಕ್ರೇನ್‌ನಲ್ಲಿ ರಾಜಕೀಯ ಅಸ್ಥಿರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀವ್‌ (ಉಕ್ರೇನ್‌) (ಎಪಿ): ಉಕ್ರೇನ್‌­ನಲ್ಲಿ  ಕಳೆದ ಕೆಲವು ತಿಂಗಳಿನಿಂದ ಉದ್ಭ­ವಿ-­ಸಿರುವ  ರಾಜಕೀಯ ಅಸ್ಥಿರತೆಗೆ  ಪರಿ­ಹಾರ ಕಂಡು ಹಿಡಿಯುವ ಉದ್ದೇಶ­ದೊಂ­­ದಿಗೆ ಪಾಶ್ಚಾತ್ಯ ರಾಷ್ಟ್ರಗಳ ಪ್ರಮುಖ ರಾಜತಾಂತ್ರಿಕರು ರಾಜಧಾನಿ ಕೀವ್‌ಗೆ ದೌಡಾಯಿಸಿದ್ದಾರೆ.ಉಕ್ರೇನ್‌ ಅಧ್ಯಕ್ಷ ವಿಕ್ಟರ್‌ ಯನುಕೋ­ವಿಚ್  ವಿರುದ್ಧ ಆರಂಭವಾ­ಗಿ­ರುವ ಬಂಡಾ­­­ಯ­ದಿಂದ  ಆಡಳಿತ ಯಂತ್ರ ಸಂಪೂರ್ಣವಾಗಿ  ಕುಸಿದಿದ್ದು, ದೇಶದಲ್ಲಿ ಪ್ರಕ್ಷುಬ್ಧ  ವಾತಾವರಣ ನಿರ್ಮಾಣ­ವಾಗಿದೆ.ಯೂರೋಪ್‌ ಒಕ್ಕೂಟದ ಮುಕ್ತ ವಾಣಿಜ್ಯ ವಲಯ ಸೇರಲು ನಿರಾಕರಿಸಿ, ರಷ್ಯಾದತ್ತ ವಾಲುತ್ತಿರುವ ಉಕ್ರೇನ್‌ ಅಧ್ಯಕ್ಷ ವಿಕ್ಟರ್‌ ಯನುಕೋವಿಚ್ ನಿಲು­ವನ್ನು ವಿರೋಧಿಸಿ ಸಾವಿರಾರು ನಾಗ­ರಿಕರು ಬೀದಿಗೆ ಇಳಿದಿದ್ದಾರೆ.ಯನುಕೋವಿಚ್‌ ವಿರುದ್ಧ ಬಂಡೆ­ದ್ದಿ­ರುವ ಪ್ರತಿಭಟನಾಕಾರರು ಅವರ ರಾಜೀ­ನಾಮೆಗೆ ಒತ್ತಾಯಿಸಿ ಅನೇಕ ಸರ್ಕಾರಿ ಕಟ್ಟಡಗಳಿಗೆ ಮುತ್ತಿಗೆ ಹಾಕಿ­ದ್ದಾರೆ. ಪ್ರತಿ­ಭಟನಾಕಾರರನ್ನು ತೆರವುಗೊ­ಳಿಸಲು ಸರ್ಕಾರಿ ಪಡೆಗಳು ರಾತ್ರಿ ವೇಳೆ ಏಕಾಏಕಿ ದಾಳಿ ನಡೆಸಿವೆ. ಈ ಘಟನೆಯಲ್ಲಿ ಹಲ­ವಾರು ಜನರು ಗಾಯಗೊಂಡಿದ್ದಾರೆ.ಒಂದು ವಾರದಿಂದ ಪ್ರತಿಭಟ­ನಾ­ಕಾರರು ಮತ್ತು ಸರ್ಕಾರಿ ಪಡೆಗಳ ನಡುವೆ ನಿತ್ಯ ಕಾದಾಟ ನಡೆದಿದ್ದು, ರಾಜಧಾನಿ ಕೀವ್‌ ಹೃದಯಭಾಗದಲ್ಲಿ ಅವರು ಬೀಡುಬಿಟ್ಟಿದ್ದಾರೆ. ಹಗಲು, ರಾತ್ರಿ ಎನ್ನದೇ ಜನರು ಇಲ್ಲಿ ಸೇರಿರುತ್ತಾರೆ.ಯುರೋಪ್ ಒಕ್ಕೂಟದ ಮುಕ್ತ ವಾಣಿಜ್ಯ ವಲಯ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿರುವ ಯನು­ಕೋ­ವಿಚ್‌  ರಷ್ಯಾ ಜೊತೆ ಸಂಬಂಧ ಕಡಿ­ದು­ಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿ­ದ್ದಾರೆ. ಇದರಿಂದಾಗಿ ಪ್ರತಿಭಟನಾ­ಕಾರರ ಕೋಪ ಮತ್ತಷ್ಟು ಭುಗಿಲೆದ್ದಿದೆ.

ಪ್ರತಿಕ್ರಿಯಿಸಿ (+)