ವಾಷಿಂಗ್ಟನ್(ಪಿಟಿಐ): ‘ನಿಮ್ಮ ನೆಲದಲ್ಲಿದ್ದುಕೊಂಡು ನೆರೆ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿರುವ ಉಗ್ರರ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ’ ಎಂದು ಪಾಕಿಸ್ತಾನಕ್ಕೆ ಅಮೆರಿಕ ಎಚ್ಚರಿಕೆ ನೀಡಿದೆ.

ಉಗ್ರರ ವಿರುದ್ಧ ನಿರೀಕ್ಷಿತ ಮಟ್ಟದಲ್ಲಿ ಕ್ರಮ ಕೈಗೊಳ್ಳದ ಕಾರಣಕ್ಕೆ ಪಾಕಿಸ್ತಾನಕ್ಕೆ ನೀಡಬೇಕಾಗಿದ್ದ 30 ಕೋಟಿ ಡಾಲರ್ ಸೇನಾ ನೆರವನ್ನು ಅಮೆರಿಕ ರದ್ದುಮಾಡಿದ ಬೆನ್ನಲ್ಲೇ ಈ ಎಚ್ಚರಿಕೆಯನ್ನೂ ರವಾನಿಸಿದೆ.

‘ಪಾಕಿಸ್ತಾನ ಆಯ್ದ ಸಂಘಟನೆಗಳ ವಿರುದ್ಧ ಮಾತ್ರ ಕ್ರಮ ಕೈಗೊಳ್ಳುತ್ತಿದೆ. ಇದು ಸರಿಯಲ್ಲ. ನಿಮ್ಮ ದೇಶಕ್ಕೆ ಬೆದರಿಕೆ ಒಡ್ಡುತ್ತಿರುವ ಸಂಘಟನೆಗಳ ವಿರುದ್ಧ ಮಾತ್ರ ಕ್ರಮ ಕೈಗೊಂಡರೆ ಸಾಲದು. ನಿಮ್ಮ ನೆಲದಿಂದ ನಡೆಯುವ ಎಲ್ಲ ರೀತಿಯ ಭಯೋತ್ಪಾದನಾ ಚಟುವಟಿಕೆಗಳನ್ನೂ ನಿಯಂತ್ರಿಸಬೇಕು’ ಎಂದು ವಿದೇಶಾಂಗ ಇಲಾಖೆ ಉಪ ವಕ್ತಾರ ಮಾರ್ಕ್ ಟೋನರ್ ಸೂಚನೆ ನೀಡಿದ್ದಾರೆ. ‘ಉಗ್ರರ ಗುಂಪಿನ ವಿರುದ್ಧ ಪಾಕ್ ಕಠಿಣ ಕ್ರಮ ಕೈಗೊಳ್ಳಬೇಕು. ಅವರಿಗೆ ಸ್ವರ್ಗ ನಿರ್ಮಿಸಿಕೊಡುವುದನ್ನು ನಿಲ್ಲಿಸಬೇಕು’ ಎಂದು ಹೇಳಿದ್ದಾರೆ.

ಒಬಾಮ ಗುಡುಗು : ಅಮೆರಿಕ ಮತ್ತು ಮಿತ್ರ ರಾಷ್ಟ್ರಗಳು ಇಸ್ಲಾಮಿಕ್ ಸ್ಟೇಟ್ ಉಗ್ರರ ವಿರುದ್ಧ ಎಲ್ಲ ಕಡೆಗಳಿಂದಲೂ ದಾಳಿಯನ್ನು ತೀವ್ರಗೊಳಿಸಲಿವೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗುಡುಗಿದ್ದಾರೆ. ಉಗ್ರ ಸಂಘಟನೆ ವಿರುದ್ಧ ನಡೆಸುತ್ತಿರುವ ಹೋರಾಟವನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಹೇಳಿದ್ದಾರೆ.

‘ದಾಳಿ ನಡೆಸುವ ಒಬ್ಬನೇ ಸೂತ್ರಧಾರ ಅಥವಾ ಉಗ್ರರ ಘಟಕಗಳನ್ನು ಪತ್ತೆ ಹಚ್ಚಲು ಈವರೆಗೆ ಸಾಧ್ಯವಾಗಿಲ್ಲ. ಈ ಉಗ್ರರು ಅಮಾಯಕ ಜನರನ್ನು ಕೊಲ್ಲುವ ನಿರ್ಧಾರ ಮಾಡಿದ್ದಾರೆ ಮತ್ತು ತಾವೇ ಸಾಯಲು ಮುಂದಾಗುತ್ತಾರೆ. ಆದ್ದರಿಂದ ಐಎಸ್ ವಿರುದ್ಧ ದಾಳಿ ಮುಂದುವರಿಸುತ್ತೇವೆ’ ಎಂದು ಪೆಂಟಗನ್ನಲ್ಲಿ ನಡೆದ ರಾಷ್ಟ್ರೀಯ ಭದ್ರತಾ ತಂಡದ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದರು.

‘ನಿಜವಾಗಿ ಹೇಳುವುದಾದರೆ ಸಿರಿಯಾ, ಇರಾಕ್ನಲ್ಲಿ ಐಎಸ್ ಉಗ್ರರ ಪತನ ಆರಂಭವಾಗಿರುವ ಕಾರಣ ಅವರು ತಮ್ಮ ಈ ಹಿಂದಿನ ಕಾರ್ಯ
ತಂತ್ರ ಬದಲಾಯಿಸಿದ್ದಾರೆ’ ಎಂದರು.

ಇರಾಕ್ನಲ್ಲಿ ಅಲ್ಲಿನ ಸ್ಥಳೀಯ ಪಡೆಗಳು ಐಎಸ್ ಉಗ್ರರನ್ನು ಮಣಿಸುತ್ತಿವೆ. ಈಗಾಗಲೇ ಫಲ್ಲುಜಾ ನಗರವನ್ನು ವಶಕ್ಕೆ ಪಡೆದಿವೆ. ಮೋಸುಲ್ ಮತ್ತು ರಖ್ಖಾ ನಗರವನ್ನೂ ವಶಕ್ಕೆ ಪಡೆಯುತ್ತವೆ’ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ರಷ್ಯಾಗೆ ಸಂದೇಶ: ಅಮೆರಿಕ ರಷ್ಯಾ ಜತೆ ಕೆಲಸ ಮಾಡಲಿದೆ. ಹಿಂಸಾಚಾರ ಕಡಿಮೆ ಮಾಡಲು ಐಎಸ್ ಮತ್ತು ಅಲ್ಕೈದಾ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಿಸಲು ಪ್ರಯತ್ನಿಸುತ್ತೇವೆ. ಆದರೆ ಈವರೆಗೆ ರಷ್ಯಾ ಕಠಿಣ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿದರು.

ಅಮಾಯಕ ಜನರನ್ನು ಕೊಲ್ಲುವ ಉಗ್ರರು ತಾವೇ ಸಾಯಲು ಹಿಂಜರಿಯುವುದಿಲ್ಲ
-ಬರಾಕ್ ಒಬಾಮ,ಅಮೆರಿಕ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.