ಸೋಮವಾರ, ಜೂನ್ 14, 2021
22 °C

ಉಚಿತ ವಸತಿ ಶಾಲೆಗೆ ಪ್ರವೇಶ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ ನಡೆಸುತ್ತಿರುವ ವೀರಭದ್ರಸ್ವಾಮಿ ಉಚಿತ ವಸತಿ ಶಾಲೆಗೆ ಏಪ್ರಿಲ್‌ 7 ರಂದು ಪ್ರವೇಶ ಪರೀಕ್ಷೆ ನಡೆಯಲಿದೆ.6ನೇ ತರಗತಿಯಿಂದ 10ನೇ ತರಗತಿಯವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಲು ಇಚ್ಛಿಸುವ ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯಲ್ಲಿ ಭಾಗವಹಿಸಬಹುದು. ವಸತಿ ಶಾಲೆಗೆ ಸುಸಜ್ಜಿತವಾದ ಕಟ್ಟಡವಿದ್ದು ಕಂಪ್ಯೂಟರ್‌, ಯೋಗ, ಸಂಗೀತ ಹಾಗೂ ಕ್ರೀಡೆ  ಶಿಕ್ಷಣವನ್ನು ನೀಡಲಿದೆ. ಪರೀಕ್ಷೆಯು ಮಠದ ಆವರಣದಲ್ಲಿಯೇ ಮಧ್ಯಾಹ್ನ 12 ಗಂಟೆಗೆ  ನಡೆಯಲಿದೆ.ವಿದ್ಯಾರ್ಥಿಗಳು ಈಚಿನ ಭಾವಚಿತ್ರದೊಂದಿಗೆ ನೇರವಾಗಿ ಪ್ರವೇಶ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು. ವಿವರಗಳಿಗೆ ಸಂಪರ್ಕಿಸಿ–  ವೀರಭದ್ರಸ್ವಾಮಿ ಉಚಿತ ವಸತಿ ಶಾಲೆ, ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ, ಮಾರತ್‌ಹಳ್ಳಿ ಅಂಚೆ, ಬೆಂಗಳೂರು –560037. ದೂ: ೦೮೦-೨೫೨೩ ೭೨೩೪, ೯೬೧೧೦ ೩೩೪೨೮.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.