ಗುರುವಾರ , ಜೂಲೈ 9, 2020
21 °C

ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತಮ ಆರೋಗ್ಯಕ್ಕೆ ಕ್ರೀಡೆ ಅವಶ್ಯಕ

ಕಡೂರು: ಆಧುನಿಕ ಯುಗದಲ್ಲಿ ಕೆಲಸದ ಒತ್ತಡಗಳಿಂದ ಹೊರಬಂದು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆಯಲು ಸಾಧ್ಯ ಎಂದು ಸಿಂಗಟಗೆರೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾಬೆಳ್ಳಿ ಪ್ರಕಾಶ್ ತಿಳಿಸಿದರು. ಪಟ್ಟಣದ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಭಾನುವಾರ ವಿನಾಯಕ ಷಟಲ್ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಬಹುಮಾನ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಬಾಲ್ಯದ ದಿನಗಳಲ್ಲಿ ತುಂಬಾ ಉತ್ಸಾ ದಿಂದ ಕ್ರೀಡೆಗಳಲ್ಲಿ ಭಾಗವಹಿಸುತ್ತೆವೆ. ನಂತರ ನಮ್ಮದೇ ವೃತ್ತಿ, ಕಸುಬುಗಳಿಂದ ಕ್ರೀಡೆಗಳಿಂದ ದೂರವಾಗುತ್ತಿದ್ದು ಇದರಿಂದ ದೈಹಿಕ, ಮಾನಸಿಕವಾಗಿ ಒತ್ತಡಗಳಿಗೆ ಒಳಗಾಗುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು. ಕ್ರೀಡೆ, ಸಂಗೀತಗಳಲ್ಲಿ ಭಾಗವಹಿಸುವುದರಿಂದ ಮನಸ್ಸು ಪರಿವರ್ತನೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಯಾವುದಾದರೂ ಕ್ರೀಡೆಗಳಲ್ಲಿ ಭಾಗವಹಿಸಿ ದೈಹಿಕ, ಮಾನಸಿಕ ಆರೋಗ್ಯ ಪಡೆಯಬೇಕು ಎಂದು ಕಡೂರು ಆರಕ್ಷಕ ವೃತ್ತ ನಿರೀಕ್ಷಕ ರಮೇಶ್‌ಕುಮಾರ್ –ತಿಳಿಸಿದರು.ವಿನಾಯಕ ಷಟಲ್ ಬ್ಯಾಡ್ಮಿಂಟನ್ ಕ್ಲಬ್‌ನ ಅಧ್ಯಕ್ಷ ಆರ್.ಹಾಲಪ್ಪ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದ ಅನೇಕ ದಾನಿಗಳ ಸಹಕಾರ, ಸಹಾಯ ನೀಡಿರುವುದರಿಂದ ಪಂದ್ಯಾವಳಿ ಆಯೋ–ಜಿಸಿ ಯಶಸ್ವಿಯಾಗಿದ್ದು, ತಾಲ್ಲೂಕಿನಿಂದ ಅನೇಕ ತಂಡಗಳು ಭಾಗವಹಿಸಿ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಮುಂದಿನ ವರ್ಷ ಜಿಲ್ಲಾ ಮಟ್ಟದ ಪಂದ್ಯಾವಳಿಗಳನ್ನು ನಡೆಸಲು ಈ ಪಂದ್ಯಾವಳಿಗಳು ಪ್ರೇರಣೆಯಾಗಿದೆ ಎಂದರು.ಪಂದ್ಯಾವಳಿಯಲ್ಲಿ ಕಡೂರಿನ ಶಶಿಕುಮಾರ್ ಮತ್ತು ಪಿ.ರಾಮಚಂದ್ರರವರು ಪ್ರಥಮ ಸ್ಥಾನ ಗಳಿಸಿ ನಗದು ಮತ್ತು ಪಾರಿ–ತೋಷ ಪಡೆದರು. ದ್ವಿತೀಯ ಬಹುಮಾನ ಶಿಕ್ಷಕದಿವಾಕರಾಚಾರ್ ಮತ್ತು ಕಲ್ಲೇಶ್. ತೃತೀಯ ಬಹುಮಾನ ನಹಿಮುಲ್ಲಾ ಗಳಿಸಿದರು. ರವಿ,ನಾರಾಯಣಸ್ವಾಮಿ, ನಾರಾಯಾಣಸ್ವಾಮಿ (ಪ್ರೂಟ್) ಅಶೋಕ, ಉದಯಚಂದ್ರ, ಅಶ್ವಿನ್ ಹಾಗೂ ಅನೇಕ ಕ್ರೀಡಾಪಟುಗಳು ಕ್ರೀಡಾ ಅಭಿಮಾನಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.