ಬೆಂಗಳೂರು: ‘ಮುದ್ರಣ ಮಾಧ್ಯಮವಿರಲಿ ಅಥವಾ ನವ ಮಾಧ್ಯಮ ಎಂದೇ ಪ್ರಸಿದ್ಧಿ ಪಡೆದಿರುವ ಅಂತರ್ಜಾಲವಿರಲಿ, ಉತ್ತಮ ಆಶಯಗಳನ್ನು ಹೊಂದಿರುವ ಯಾವುದೇ ಬಗೆಯ ಪತ್ರಿಕೋದ್ಯಮಕ್ಕೆ ಸದಾ ಒಳ್ಳೆಯ ಭವಿಷ್ಯ ಇರುತ್ತದೆ’ ಎಂದು ‘ಪ್ರಜಾವಾಣಿ’ಯ ಸಂಪಾದಕ ಕೆ.ಎನ್.ಶಾಂತ ಕುಮಾರ್ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ವತಿಯಿಂದ ನಗರದಲ್ಲಿ ಏರ್ಪಡಿಸಿದ್ದ ಯುಜಿಸಿ ಪ್ರಾಯೋಜಿತ ‘ನವ ಮಾಧ್ಯಮಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿ’ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗುವ ಸುದ್ದಿಯ ಸಾರವೇ ‘ರಾಜ’ನಾಗಿರುತ್ತದೆ. ಗೊಂದಲವಿಲ್ಲದ ನಿಖರ ಸುದ್ದಿ ಕೊಟ್ಟಾಗ ಮಾತ್ರ ಓದುಗರ ಮೆಚ್ಚುಗೆ ಗಳಿಸಲು ಸಾಧ್ಯ. ಮುದ್ರಣ ಮಾಧ್ಯಮದಲ್ಲಿರುವಷ್ಟು ನಿಖರವಾದ ಸುದ್ದಿಯನ್ನು ನವ ಮಾಧ್ಯಮಗಳಿಂದ ಪಡೆಯಲಾಗದು. ಮುದ್ರಣ ಮಾಧ್ಯಮದಲ್ಲಿ ತಪ್ಪು ಸುದ್ದಿ ಪ್ರಕಟವಾದರೆ ಸಂಪಾದಕ ಹೊಣೆಗಾರನಾಗಬೇಕಾಗುತ್ತದೆ. ಅಂತರ್ಜಾಲದಲ್ಲಿ ಅನೇಕ ಬಾರಿ ಸಂಪಾದಕ ಯಾರು ಎಂಬುದೇ ತಿಳಿಯುವುದಿಲ್ಲ’ ಎಂದು ಹೇಳಿದರು.

‘ಮುದ್ರಣ ಹಾಗೂ ಟಿವಿ ಮಾಧ್ಯಮಗಳು ಕಾಸಿಗಾಗಿ ಸುದ್ದಿ ಆರೋಪ ಎದುರಿಸುತ್ತಿದ್ದರೂ, ವೆಬ್ಸೈಟ್ಗಳಿಗಿಂತ ಹೆಚ್ಚು ಜವಾಬ್ದಾರಿ ಇವುಗಳ ಮೇಲಿದೆ. ಅಂತರ್ಜಾಲದಲ್ಲಿ ಎಲ್ಲಾ ಮಾಹಿತಿಗಳನ್ನು ಉಚಿತವಾಗಿ ಪಡೆಯಬಹುದಾಗಿದ್ದು ನವ ಮಾಧ್ಯಮಗಳು ಉಚಿತ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿವೆ. ಆದರೆ ಉತ್ತಮ ಪತ್ರಿಕೋದ್ಯಮ ದುಬಾರಿಯಾಗಿರುತ್ತದೆ’ ಎಂದರು.

‘ಒಳ್ಳೆಯ ಪತ್ರಕರ್ತರನ್ನು ಒಂದು ಸಂಸ್ಥೆ ಹೊಂದಬೇಕಾದರೆ ಅದಕ್ಕೆ ತಕ್ಕ ಸಂಭಾವನೆಯನ್ನು ಪತ್ರಕರ್ತರಿಗೆ ನೀಡಲೇಬೇಕು. ಮಾಧ್ಯಮ ದೊರೆ ಎಂದೇ ಖ್ಯಾತಿ ಪಡೆದಿರುವ ರೂಪರ್ಟ್ ಮುರ್ಡೋಶ್ ತಮ್ಮ ವೆಬ್ಸೈಟ್ ಪತ್ರಿಕೆಗಳನ್ನು ಹಣ ತೆತ್ತು ಓದಬೇಕು ಎಂದು ಷರತ್ತು ವಿಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು’ ಎಂದು ತಿಳಿಸಿದರು.

‘ವಿಕಿಲೀಕ್ಸ್ನಂತಹ ವೆಬ್ಸೈಟ್ಗಳು ನವ ಮಾಧ್ಯಮಗಳ ಮೇಲಿನ ವಿಶ್ವಾಸವನ್ನು ಹೆಚ್ಚಿಸಿವೆ ಹೊಸ ಮಾಧ್ಯಮಗಳಲ್ಲಿ ಪ್ರಕಾಶನ ನಿಧಾನವಾಗಿ ಬೆಳವಣಿಗೆ ಹೊಂದುತ್ತಿದೆ. ನವ ಮಾಧ್ಯಮಗಳಲ್ಲಿ ಓದುಗರು ಸಹ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶವಿರುವುದು ಅದರ ಇನ್ನೊಂದು ಸಾಧ್ಯತೆಗೆ ಉದಾಹರಣೆಯಾಗಿದೆ’ ಎಂದು ಹೇಳಿದರು.

ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ಮಾತನಾಡಿ ‘ಬೆಳೆಯುತ್ತಿರುವ ಜನಸಂಖ್ಯೆಯನ್ನು ತಂತ್ರಜ್ಞಾನ ತಲುಪಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆ ಪ್ರಸ್ತುತ ಹೆಚ್ಚು ಕಾಡುತ್ತಿದೆ. ಮಾಹಿತಿ ಹೊಂದಿದವರು ಮತ್ತು ಮಾಹಿತಿ ಕೊರತೆ ಎದುರಿಸುತ್ತಿರುವವರ ನಡುವೆ ‘ಡಿಜಿಟಲ್ ಕಂದರ’ ಏರ್ಪಡುತ್ತಿದೆಯೇ ಎಂಬ ವಾತಾವರಣ ಸೃಷ್ಟಿಯಾಗಿದೆ’ ಎಂದರು.

‘ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್ಬುಕ್ ಬಳಸುತ್ತಿರುವ ಐದನೇ ಬೃಹತ್ ರಾಷ್ಟ್ರ ಭಾರತವಾಗಿದ್ದು ಟ್ವಿಟರ್ ಬಳಕೆಯಲ್ಲಿ ಏಳನೇ ಅಗ್ರ ರಾಷ್ಟ್ರವಾಗಿದೆ. 50 ದಶಲಕ್ಷ ಜನರನ್ನು ತಲುಪಲು ರೇಡಿಯೊ 36 ವರ್ಷಗಳನ್ನು ಪಡೆದರೆ, ಟಿವಿ ಮಾಧ್ಯಮಕ್ಕೆ 14 ವರ್ಷಗಳು ಬೇಕಾಯಿತು. ಆದರೆ ಫೇಸ್ಬುಕ್ ಕೇವಲ 2 ವರ್ಷಗಳಲ್ಲಿ ಇಷ್ಟು ಜನರನ್ನು ತಲುಪಲು ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ನವ ಮಾಧ್ಯಮಗಳಿಂದ ಪರೀಕ್ಷಾ ಅವ್ಯವಹಾರಗಳು, ಆಡಳಿತ ವ್ಯವಸ್ಥೆಯ ವಿಳಂಬವನ್ನು ತಡೆಯಲು ಸಾಧ್ಯವಿದೆ. ಇ ಆಡಳಿತದ ಮೂಲಕ ಇಂತಹ ಸುಧಾರಣೆಗಳನ್ನು ತರುವ ಯತ್ನ ನಡೆಯುತ್ತಿದೆ’ ಎಂದು ಅವರು ಹೇಳಿದರು.ಬೆಂಗಳೂರು ವಿವಿ ರಿಜಿಸ್ಟ್ರಾರ್ ಡಾ.ಆರ್.ಎಂ.ರಂಗನಾಥ್, ಹಣಕಾಸು ಅಧಿಕಾರಿ ಎಸ್.ಎ.ರಜ್ವಿ, ಸಂವಹನ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಪುಟ್ಟರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.