ನವದೆಹಲಿ (ಪಿಟಿಐ): ಭಾರತದ ಉಪ ಕಾನ್ಸಲ್ ಜನರಲ್ ಜತೆ ಅನುಚಿತವಾಗಿ ವರ್ತಿಸಿದ್ದರ ಪ್ರತಿಭಟನಾ ಸೂಚಕವಾಗಿ ಲೋಕಸಭೆ ಸ್ಪೀಕರ್ ಮೀರಾ ಕುಮಾರ್ ಅವರು ಅಮೆರಿಕ ಸಂಸದರ ನಿಯೋಗದೊಂದಿಗಿನ ಸಭೆಯನ್ನು ಸೋಮವಾರ ರದ್ದುಪಡಿಸಿದ್ದಾರೆ.

ವೀಸಾ ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿನ ಭಾರತದ ಉಪ ಕಾನ್ಸಲ್ ಜನರಲ್ ದೇವಯಾನಿ ಖೋಬ್ರಾಗಡೆ ಅವರನ್ನು ಬಂಧಿಸಿ ಕೈಕೊಳ ತೊಡಿಸಿ ಸಾರ್ವಜನಿಕವಾಗಿ ಅಪಮಾನ ಮಾಡಲಾಗಿತ್ತು.

‘ದೇವಯಾನಿ ಅವರನ್ನು ಅಮೆರಿಕ ಕೆಟ್ಟದಾಗಿ ನಡೆಸಿಕೊಂಡಿದ್ದು, ಆ ದೇಶದ ಸಂಸದರ ಜೊತೆ ಸಭೆ ನಡೆಸುವುದು ಸೂಕ್ತವಲ್ಲ ಎಂದು ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಸ್ವತಃ ಐಎಫ್ಎಸ್ ಅಧಿಕಾರಿಯಾಗಿದ್ದ ಮೀರಾ ಕುಮಾರ್ ಭಾವಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕಾಗಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್ ಕೂಡ ಈಚೆಗೆ ಅಮೆರಿಕ ಸಂಸದರ ಜೊತೆಗಿನ ಸಭೆ ರದ್ದುಪಡಿಸಿದ್ದರು. ಅಲ್ಲದೇ ಭಾರತದಲ್ಲಿನ ಅಮೆರಿಕ ರಾಯಭಾರಿ ನ್ಯಾನ್ಸಿ ಪೊವೆಲ್ ಅವರ ಬಳಿಯೂ ಭಾರತ ಪ್ರತಿಭಟನೆ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.