ಶನಿವಾರ, ಜೂನ್ 19, 2021
27 °C

ಎಎಪಿ ಪಟ್ಟಿಯಲ್ಲಿ ಉದಯಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪರಮಾಣು ಸ್ಥಾವರ ವಿರೋಧಿ ಕಾರ್ಯಕರ್ತ ಎಸ್‌.ಪಿ.­ಉದಯ­ಕುಮಾರ್‌ ಅವರು ಆಮ್‌ ಆದ್ಮಿ ಪಕ್ಷದ (ಎಎಪಿ) ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಏಳನೇ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಎಎಪಿ ಮಂಗಳವಾರ ಬಿಡುಗಡೆ ಮಾಡಿದ 26 ಅಭ್ಯರ್ಥಿಗಳ ಪಟ್ಟಿಯಲ್ಲಿ ಉದಯಕುಮಾರ್‌ ಹೆಸರಿದೆ. ಅವರು ಕನ್ಯಾಕುಮಾರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.ಕೇಂದ್ರಾಡಳಿತ ಪ್ರದೇಶ ಪುದುಚೇರಿ ಸೇರಿದಂತೆ 10 ರಾಜ್ಯಗಳ ಲೋಕ­ಸಭಾ ಸ್ಥಾನಗಳಿಗೆ ಎಎಪಿಯು ಮಂಗಳವಾರ ಅಭ್ಯರ್ಥಿ­ಗಳನ್ನು ಪ್ರಕಟಿಸಿದೆ.  ಎಎಪಿಯು ಇದುವರೆಗೆ 286 ಹುರಿ­ಯಾಳುಗಳನ್ನು ಕಣಕ್ಕಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.