ಮಂಗಳವಾರ, ಜೂನ್ 15, 2021
21 °C

ಎಎಸ್‌ಸಿಐನಿಂದ ಮೊಬೈಲ್ ಮೂವಿ ಚಾಲೆಂಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ಗೋವಾಫೆಸ್ಟ್ ಒಗ್ಗೂಡಿ ಜಾಹೀರಾತಿನಲ್ಲಿ ಸ್ವಯಂ ನಿಯಂತ್ರಣ ಉತ್ತೇಜಿಸುವ ಉದ್ದೇಶದಿಂದ ನೂತನ ಸ್ಪರ್ಧೆ ಆಯೋಜಿಸಿದೆ. `ಎಎಸ್‌ಸಿಐ ಮೊಬೈಲ್ ಮೂವಿ ಚಾಲೆಂಜ್~ ಎಂಬ ಈ ಸ್ಪರ್ಧೆಯನ್ನು  `ಕ್ರಿಯೇಟಿವಿಟಿ ವಿತ್ ದಿ ಕಂಸೈನ್ಸ್~ ಎಂಬ ವಿಷಯವನ್ನಿಟ್ಟುಕೊಂಡು ಹಮ್ಮಿಕೊಳ್ಳಲಾಗಿದೆ.  ಸ್ಪರ್ಧೆಯಲ್ಲಿ ಜಾಹೀರಾತು ವಿಭಾಗದವರು, ಮಾರ್ಕೆಟಿಂಗ್ ವಿಭಾಗ ಮತ್ತು ಮಾಧ್ಯಮ ವಿಭಾಗದವರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಮೊಬೈಲ್‌ನಲ್ಲಿ ಕಿರು ಚಿತ್ರವನ್ನು ತಯಾರಿಸುವ ವಿಶೇಷ ಸ್ಪರ್ಧೆ ಇದಾಗಿದೆ.ಸ್ಪರ್ಧೆಯಲ್ಲಿ 30 ವರ್ಷಕ್ಕಿಂತ ಕಡಿಮೆಯಿರುವ ಮತ್ತು ಮಾಧ್ಯಮದಲ್ಲಿ ಕೆಲಸ ನಿರ್ವಹಿಸುವ ಮೂರು ಮಂದಿಯ ಗುಂಪಿಗೆ 30-60 ಸೆಕೆಂಡ್‌ಗಳ ಅವಧಿಯ ಕಿರು ಚಿತ್ರವನ್ನು ಮೊಬೈಲ್‌ಗಳಲ್ಲಿ ತಯಾರಿಸುವ ಸವಾಲನ್ನು ಮುಂದಿಡಲಾಗಿದೆ.  ಈ ಸ್ಪರ್ಧೆಗೆ ನೋಂದಾಯಿಸಿಕೊಳ್ಳಲು http://www.ascionline.org/goafest 2012/ ಗೆ ಭೇಟಿ ನೀಡಬಹುದು. ಹೆಸರು ನೋಂದಾಯಿಸಿಕೊಳ್ಳಲು 22ನೇ ಮಾರ್ಚ್ ಕೊನೆಯ ದಿನಾಂಕ. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.