ಭಾನುವಾರ, ಮಾರ್ಚ್ 7, 2021
22 °C

ಎಚ್‌ಎಎಲ್‌ಗೆ ಮಣಿದ ಎಸ್‌ಎಐ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್‌ಎಎಲ್‌ಗೆ ಮಣಿದ ಎಸ್‌ಎಐ

ಬೆಂಗಳೂರು: ಅನುಭವಿ ಆಟಗಾರರನ್ನು ಒಳಗೊಂಡಿರುವ ಎಚ್‌ಎಎಲ್ ತಂಡ ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಸಾಧಿಸಿತು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಎಚ್‌ಎಎಲ್ 4-1 ಗೋಲುಗಳಿಂದ ಎಸ್‌ಎಐ ತಂಡವನ್ನು ಮಣಿಸಿತು. ಪಂದ್ಯದ ಆರಂಭದಲ್ಲಿ ಪ್ರಬಲ ಪೈಪೋಟಿ ಕಂಡುಬಂದರೂ, ಬಳಿಕ ಎಚ್‌ಎಎಲ್ ಪೂರ್ಣ ಪ್ರಭುತ್ವ ಸಾಧಿಸಿತು.ಹಮ್ಜಾ ಅವರು ನಾಲ್ಕನೇ ನಿಮಿಷದಲ್ಲಿ ಗೋಲು ಗಳಿಸಿ ಎಚ್‌ಎಎಲ್‌ಗೆ ಮುನ್ನಡೆ ತಂದಿತ್ತರು. ಆದರೆ ಮರುಹೋರಾಟ ನಡೆಸಿದ ಎಸ್‌ಎಐಗೆ ಅಬ್ರಾರ್ ಅವರು 18ನೇ ನಿಮಿಷದಲ್ಲಿ ಸಮಬಲದ ಗೋಲು ತಂದಿತ್ತರು.42ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದ ಆರ್.ಸಿ ಪ್ರಕಾಶ್ ಎಚ್‌ಎಎಲ್‌ಗೆ 2-1ರ ಮುನ್ನಡೆ ದೊರಕಿಸಿಕೊಟ್ಟರು. ಎರಡನೇ ಅವಧಿಯಲ್ಲಿ ಎಚ್‌ಎಎಲ್ ಪೂರ್ಣ ಮೇಲುಗೈ ಪಡೆಯಿತು.

ಮಲೆಗಾಂಬ (47ನೇ ನಿಮಿಷ) ಮತ್ತು ರಾಜೇಂದ್ರ ಪ್ರಸಾದ್ (87) ಅವರು ಚೆಂಡನ್ನು ಗುರಿ ಸೇರಿಸಿ ತಂಡದ ಗೆಲುವಿನ ಅಂತರವನ್ನು ಹಿಗ್ಗಿಸಿದರು.ಸ್ಟೂಡೆಂಟ್ಸ್ ಯೂನಿಯನ್‌ಗೆ ಗೆಲುವು: `ಎ~ ಡಿವಿಷನ್ ಲೀಗ್ ಪಂದ್ಯದಲ್ಲಿ ಸ್ಟೂಡೆಂಟ್ಸ್ ಯೂನಿಯನ್ ತಂಡ 3-0 ಗೋಲುಗಳಿಂದ ಎಜಿಒಆರ್‌ಸಿ ವಿರುದ್ಧ ಜಯ ಪಡೆಯಿತು. ಜಾನ್ (40 ಮತ್ತು 47ನೇ ನಿಮಿಷ) ಅವರು ಎರಡು ಗೋಲುಗಳನ್ನು ಗಳಿಸಿ ಎಜಿಒಆರ್‌ಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮತ್ತೊಂದು ಗೋಲನ್ನು ಅರುಣ್ (6) ತಂದಿತ್ತರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.