ಹುಬ್ಬಳ್ಳಿ: ಎಟಿಎಂ ಹಣ ಎಗರಿಸಿ ವಂಚಿಸುತ್ತಿದ್ದ ಅಂತರರಾಜ್ಯ ಕಳ್ಳರಾದ ಸಹದೇವ ಪ್ರಸಾದ ಯಾದವ ಹಾಗೂ ಜೈಬೋದಕುಮಾರ ಯಾದವ ಅವರನ್ನು ಧಾರವಾಡದ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ‘ಬಂಧಿತರು ಬಿಹಾರ ರಾಜ್ಯದ ಫತ್ತೇಪುರ ಜಿಲ್ಲೆಯ ಮತಾಸೊ ಗ್ರಾಮದವರು. ಅನೇಕ ದಿನಗಳಿಂದ ವಿದ್ಯಾಗಿರಿ ಠಾಣೆ ವ್ಯಾಪ್ತಿಯ ಗಾಂಧಿನಗರ ಎಸ್ಬಿಐ ಬ್ಯಾಂಕಿನ ಎಟಿಎಂ ಕೀ ಬೋರ್ಡ್ ಚಲಾವಣೆಯಾಗದ ಹಾಗೆ ಹಾಳೆಯ ತುಂಡನ್ನು ಅಥವಾ ಕಡ್ಡಿಯನ್ನು ಸಿಕ್ಕಿಸಿ ಹೊರಗೆ ನಿಲ್ಲುತ್ತಿದ್ದರು. ಗ್ರಾಹಕರು ಎಟಿಎಂ ಕಾರ್ಡನ್ನು ಹಾಕಿ ಕೋಡ್ ಒತ್ತುವಾಗ ಪಾಸ್ವರ್ಡ್ ಹಾಗೂ ಸಂಖ್ಯೆಗಳನ್ನು ತಿಳಿದುಕೊಳ್ಳತ್ತಿದ್ದರು. ನಂತರ ಗ್ರಾಹಕರಿಗೆ ಯಂತ್ರ ಸರಿಯಿಲ್ಲವೆಂದು ಹೇಳುತ್ತಿದ್ದರು. ಅವರು ಹೊರಹೋದ ಮೇಲೆ ಪಾಸ್ವರ್ಡ್ ಬಳಸಿ ಹಣ ಎಗರಿಸುತ್ತಿದ್ದರು’ ಎಂದು ಪೊಲೀಸ್ ಕಮೀಷನರ್ ಕೆ. ರಾಮಚಂದ್ರ ರಾವ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಆರೋಪಿಗಳಿಂದ ಒಟ್ಟು ರೂ. 20 ಸಾವಿರ ನಗದು, ಎರಡು ಎಟಿಎಂ ಕಾರ್ಡ್ ಹಾಗೂ ಎರಡು ಮೊಬೈಲ್ ಫೋನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾಮಾನ್ಯವಾಗಿ ಎರಡು ಯಂತ್ರಗಳಿದ್ದಲ್ಲಿ ಅವರು ಮೋಸ ಮಾಡುತ್ತಿದ್ದರು. ಎಟಿಎಂ ಯಂತ್ರವೊಂದಕ್ಕೆ ಕಡ್ಡಿ ಸಿಕ್ಕಿಸಿ ಗ್ರಾಹಕರಿಗೆ ಇದು ಸರಿಯಿಲ್ಲವೆಂದು ಹೇಳಿ ಇನ್ನೊಂದು ಯಂತ್ರದತ್ತ ಕಳಿಸುತ್ತಿದ್ದರು. ವೃದ್ಧರನ್ನು ಹಾಗೂ ಗಡಿಬಿಡಿಯಲ್ಲಿ ಹಣ ತೆಗೆದುಕೊಂಡು ಹೋಗುವವರಿಗೆ ಇವರು ವಂಚಿಸುತ್ತಿದ್ದರು’ ಎಂದು ಅವರು ಹೇಳಿದರು.

‘ಆರೋಪಿಯಾದ ಸಹದೇವ ಪ್ರಸಾದ ಎಟಿಎಂ ಬ್ಯಾಂಕೊಂದರಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡಿದ್ದ. ಇವರ ವಿರುದ್ಧ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿವೆ. ವಂಚನೆಗೊಳಗಾದವರು ದೂರು ಕೊಟ್ಟರೆ ತನಿಖೆ ನಡೆಸುತ್ತೇವೆ. ಎಟಿಎಂದಿಂದ ಹಣ ಪಡೆಯುವಾಗ ಗಡಿಬಿಡಿ ಮಾಡಿಕೊಳ್ಳಬಾರದು’ ಎಂದು ಅವರು ಮನವಿ ಮಾಡಿಕೊಂಡರು.
‘ನಗರದ ಉಪನಗರ ಠಾಣೆ ಪೊಲೀಸರು ಆಟೋ ಚಾಲಕ ವಿವೇಕಾನಂದ ಗಬ್ಬೂರ, ವೆಂಕಟೇಶ ದಾಸ್ತಿಕೊಪ್ಪ ಹಾಗೂ ಪರಶುರಾಮ ಅಂಬಿಗೇರ ಎಂಬ ಕಳ್ಳರನ್ನು ಬಂಧಿಸಿದ್ದಾರೆ. ಇವರಿಂದ ರೂ. 2,5,150 ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣ, ತ್ರಾಮದ ಪಾತ್ರೆಗಳು, ನಗದು ಹಾಗೂ ಒಂದು ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಅವರು ವಿವರಿಸಿದರು.

‘ನಗರದ ವಿದ್ಯಾನಗರದ ಪೊಲೀಸರು ವಿನೋದ ನಾಯಕ ಹಾಗೂ ದಿನಕರ ನಾಯಕ ಎಂಬ ಕಳ್ಳರನ್ನು ಬಂಧಿಸಿದ್ದಾರೆ. ರಾತ್ರಿ ಒಂಟಿಯಾಗಿ ತಿರುಗಾಡುತ್ತಿದ್ದವರಿಂದ ಮೊಬೈಲು ಪಡೆದು, ವಾಪಸು ಕೊಡದೆ ತಮ್ಮ ಬೈಕಿನ ಮೇಲೆ ತಿರುಗಾಡಿಸುತ್ತ ಎಟಿಎಂದಿಂದ ಹಣ ಪಡೆದು ಪರಾರಿಯಾಗುತ್ತಿದ್ದರು. ಅವರಿಂದ ರೂ. 35 ಸಾವಿರ ನಗದು ಹಾಗೂ ಬೈಕೊಂದನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ’ ಎಂದರು.

‘ಆರು ತಿಂಗಳ ಹಿಂದೆ ಜವಳಿ ಓಣಿಯಲ್ಲಿ ಮನೆಯೊಂದರಿಂದ ಚಿನ್ನಾಭರಣ ಕಳವು ಮಾಡಿದ್ದ ತೊರವಿಹಕ್ಕಲದ ಶಾದಿಕ್ ಮುಲ್ಲಾ ಎಂಬ ಕಳ್ಳನನ್ನು ಕಮರಿಪೇಟೆ ಠಾಣೆ ಪೊಲೀಸರು ಮಂಗಳವಾರ ಬೆಳಿಗ್ಗೆ ಬಂಧಿಸಿದ್ದಾರೆ. ಈತನಿಂದ ರೂ. 40 ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಇತರ ಮೂವರು ಕಳ್ಳರು ತಪ್ಪಿಸಿಕೊಂಡಿದ್ದಾರೆ. ಕೂಡಲೇ ಅವರನ್ನು ಬಂಧಿಸಲಾಗುತ್ತದೆ’ ಎಂದು ಆಶ್ವಾಸನೆ ನೀಡಿದರು.

‘ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಎನ್ನುವ ಮಾಹಿತಿಯಿದೆ. ಆದರೆ ರೈಡ್ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೆ ದಾಳಿ ಮಾಡಿ ಬೆಟ್ಟಿಂಗ್ ಕಟ್ಟುವವರನ್ನು ಬಂಧಿಸಲಾಗುತ್ತದೆ’ ಎಂದು ಅವರು ಕ್ರಿಕೆಟ್ ಬೆಟ್ಟಿಂಗ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಎನ್.ಆರ್. ಚಂದಿರಾಂ ಸಿಂಗ್ ಹಾಗೂ ಅಪರಾಧ ಮತ್ತು ಸಂಚಾರ ಡಿಸಿಪಿ ಪಿ.ಆರ್. ಬಟಕುರ್ಕಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.