ಸೋಮವಾರ, ಏಪ್ರಿಲ್ 19, 2021
25 °C

ಎಡರಂಗ, ಐಕ್ಯರಂಗ, ಬಿಜೆಪಿ ಅಭ್ಯರ್ಥಿ ನಾಮಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಮಂಜೇಶ್ವರದ ಹಾಲಿ ಶಾಸಕ ಸಿ.ಎಚ್.ಕುಞ್ಞಂಬು, ತೃಕ್ಕರಿಪುರದಲ್ಲಿ ಎಡರಂಗದ ಕೆ.ಕುಞ್ಞೆರಾಮನ್, ಕಾಞಂಗಾಡಿನಲ್ಲಿ ಎಡರಂಗದ ಇ.ಚಂದ್ರಶೇಖರನ್, ಕಾಸರಗೋಡಿನಿಂದ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಎನ್.ಎ.ನೆಲ್ಲಿಕುಂಜೆ, ಬಿಜೆಪಿಯ ಜಯಲಕ್ಷ್ಮಿ ಭಟ್, ಮಂಜೇಶ್ವರದಿಂದ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಸಾಕ್ ಮತ್ತು ಬಿಜೆಪಿಯ ಕೆ.ಸುರೇಂದ್ರನ್ ಗುರುವಾರ ನಾಮಪತ್ರ ಸಲ್ಲಿಸಿದರು.ಮಂಜೇಶ್ವರ ಶಾಸಕ ಸಿ.ಎಚ್.ಕುಞ್ಞಂಬು ಅವರು ಬ್ಲಾಕ್ ಆಫೀಸರ್ ಎನ್.ಮೆಹರುನ್ನೀಸಾ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಆರ್.ಜಯಾನಂದ ಡಮ್ಮಿಯಾಗಿ ನಾಮಪತ್ರ ಸಲ್ಲಿಸಿದರು.

 

ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದಿಂದ ಮೆರವಣಿಗೆಯಲ್ಲಿ ಕಾರ್ಯಕರ್ತರೊಂದಿಗೆ ಬಂದ ಅವರು ತಮ್ಮ ನಾಮಪತ್ರ  ಸಲ್ಲಿಸಿದರು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಪಿ.ಜನಾರ್ದನನ್, ಮಂಡಲ ಅಧ್ಯಕ್ಷ ಬಿ.ವಿ.ರಾಜನ್, ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಪಿ.ರಘುದೇವನ್, ಕರಿವೆಳ್ಳೂರು ವಿಜಯನ್, ಕೆ.ಎಸ್.ಫಕ್ರುದ್ದೀನ್, ಸಿ.ಅಹಮ್ಮದ್ ಕುಞ್ಞೆ, ಹಮೀದ್ ಮೊಗ್ರಾಲ್, ಸಂಜೀವ ಶೆಟ್ಟಿ, ಎಂ.ಗೋವಿಂದ ಹೆಗ್ಡೆ, ಶ್ರೀನಿವಾಸ ಭಂಡಾರಿ, ಎನ್.ಕೆ.ಅಬ್ದುಲ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.