ಸೋಮವಾರ, ಜೂನ್ 21, 2021
28 °C

ಎತ್ತರ ಎಷ್ಟಿರಲಿ ಅಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನ ಸುತ್ತ ಒಂದು ಸುತ್ತು ಹಾಕಿದರೆ ಪತ್ನಿಗಿಂತ ಪತಿಯೇ ಎತ್ತರ ಇರುವ ಸಾಕಷ್ಟು ಜೋಡಿಗಳು ಸಿಗುತ್ತವೆ. ಪತ್ನಿಗಿಂತ ಪತಿ ಎತ್ತರ ಇರುವುದು ಸಹಜ ಆಯ್ಕೆಯಾಗಿದೆ. ಬಹಳಷ್ಟು ಯುವತಿಯರು ತಮ್ಮ ಬಾಳ ಸಂಗಾತಿಯ ಆಯ್ಕೆ ಸಂದರ್ಭದಲ್ಲಿ ಹುಡುಗನ ಎತ್ತರ ತನಗಿಂತ ಹೆಚ್ಚಾಗಿರಬೇಕೆಂದು ಬಯಸುತ್ತಾಳೆ. ಆದರೆ ಹೊಸ ಅಧ್ಯಯನದ ಪ್ರಕಾರ ತನ್ನ ಸಂಗಾತಿ ತನಗಿಂತ ಇಷ್ಟೇ ಎತ್ತರ ಇರಬೇಕೆಂದು ಸ್ಪಷ್ಟವಾದ ಹಂಬಲವನ್ನು ಮಹಿಳೆಯರು ವ್ಯಕ್ತಪಡಿಸುತ್ತಿದ್ದಾರಂತೆ.ಇದು ಕೇವಲ ಬೆಂಗಳೂರು ಅಥವಾ ಭಾರತದ ಮಾತಲ್ಲ. ಜಗತ್ತಿನ ಎಲ್ಲಾ ರಾಷ್ಟ್ರಗಳ ಶೇ 70ರಷ್ಟು ಮಹಿಳೆಯರು ತಮ್ಮ ಗೆಳೆಯನ ಆಯ್ಕೆ ಸಂದರ್ಭದಲ್ಲಿ ಎತ್ತರವನ್ನು ಮುಖ್ಯವೆಂದು ಪರಿಗಣಿಸಿರುವುದು ಗಮನಕ್ಕೆ ಬಂದಿದೆ. ಹಾಗೆಂದ ಮಾತ್ರಕ್ಕೆ ಬಾಸ್ಕೆಟ್‌ಬಾಲ್‌ ಆಡುವ ಏಳು ಅಡಿ ಎತ್ತರದ ದೈತ್ಯ ಕ್ರೀಡಾಪಟುಗಳೇನೂ ಅವರಿಗೆ ಬೇಡವಂತೆ. ಪ್ರತಿ ಐವರಲ್ಲಿ ಒಬ್ಬ ಯುವತಿ ತನ್ನ ಜತೆಗಾರನ ಎತ್ತರ ತನಗಿಂತ ನಾಲ್ಕರಿಂದ ಆರು ಇಂಚು ಹೆಚ್ಚಿರಬೇಕೆಂದು ಬಯಸುತ್ತಾಳೆ ಎಂಬುದು ಈ ಅಧ್ಯಯನದಿಂದ ತಿಳಿದು ಬಂದಿದೆ. ಆರು ಅಡಿ ಮೂರು ಇಂಚು ಇರುವ ಪ್ರಿನ್ಸ್‌ ವಿಲಿಯಂ ತನ್ನ ಮಡದಿ ಪ್ರಿನ್ಸೆಸ್‌ ಕ್ಯಾಥರೀನ್‌ ಮಿಡಲ್ಟನ್‌ ಅವರಿಗಿಂತ ಐದು ಇಂಚು ಎತ್ತರ ಇದ್ದಾರೆ. ಇವರಂತೆಯೇ ಎತ್ತರದ ಅಂತರ ಕಾಪಾಡಿಕೊಂಡವರು ಹಾಲಿವುಡ್‌ನ ಬ್ರಾಡ್‌ ಪಿಟ್‌ ಹಾಗೂ ಏಂಜಲೀನಾ ಜೋಲಿ, ಡೇನಿಯಲ್‌ ಕ್ರೇಗ್‌ ಹಾಗೂ ರ್‍್ಯಾಷಲ್‌ ವೀಝ್‌.ಮತ್ತೊಂದೆಡೆ ಶೇ 24ರಷ್ಟು ಮಹಿಳೆಯರಿಗೆ ಹಾಗೂ ಶೇ 35ರಷ್ಟು ಪುರುಷರಿಗೆ ಎತ್ತರದ ಕುರಿತು ಅಷ್ಟಾಗಿ ಆಸಕ್ತಿ ಇಲ್ಲವಂತೆ. ಅನ್ಯೋನ್ಯ ಸಂಬಂಧ ಹಾಗೂ ಪ್ರೀತಿ ನೀಡುವ ಗಂಡು ಮುಖ್ಯವೇ ಹೊರತು ಆತನ ಎತ್ತರವಲ್ಲ ಎಂದಿದ್ದಾರೆ.ಮಗದೊಂದೆಡೆ ಶೇ 7ರಷ್ಟು ಮಂದಿ ಪುರುಷ ಹಾಗೂ ಮಹಿಳೆಯ ನಡುವಿನ ಎತ್ತರದ ಅಂತರ ಆರರಿಂದ ಎಂಟು ಇಂಚು ಇರಲೇಬೇಕು ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಇದಕ್ಕಾಗಿ ಅವರು ನೀಡುವ ಉದಾಹರಣೆ ಪ್ರಿನ್ಸ್‌ ವಿಲಿಯಂ ಸೋದರ ಪ್ರಿನ್ಸ್‌ ಹ್ಯಾರಿ ತನ್ನ ಗೆಳತಿ ಕ್ರೆಸ್ಸಾಡಾ ಬೊನಸ್‌ ಅವರಿಗಿಂತ ಏಳು ಇಂಚಿಗೂ ಅಧಿಕ ಎತ್ತರವಿದ್ದಾರೆ ಎಂಬ ಲೆಕ್ಕ ನೀಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.