ಮಂಗಳವಾರ, ಜನವರಿ 28, 2020
22 °C
4ಜಿಲ್ಲೆಯಾದ್ಯಂತ ಸರ್ಕಾರಿ, ಖಾಸಗಿ ಶಾಲೆಗಳು ಆರಂಭ , ಮೊದಲ ದಿನ ಮಕ್ಕಳ ಕಲರವ

ಎತ್ತಿನಗಾಡಿಯಲ್ಲಿ ಮಕ್ಕಳ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ನಗರದ ಚನ್ನಿಪುರದ ಮೋಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲೆ ಪ್ರಾರಂಭೋತ್ಸವ ವಿಶಿಷ್ಟವಾಗಿತ್ತು. ಅಲಂಕರಿಸಿದ ಎತ್ತಿನಗಾಡಿಯಲ್ಲಿ ಮಕ್ಕಳನ್ನು ಮೆರವಣಿಗೆ ಮಾಡಿಕೊಂಡು ಶಾಲೆಗೆ ಕರೆತರುವ ಮೂಲಕ ಹೊಸ ಸಂಪ್ರದಾಯಕ್ಕೆ ಇಲ್ಲಿನ ಶಿಕ್ಷಕರು, ಪಾಲಕರು ನಾಂದಿ ಹಾಡಿದರು.ಕಾರ್ಯಕ್ರಮಕ್ಕೂ ಮುಂಚೆ ಮಕ್ಕಳನ್ನು ಮಂಗಳ ವಾದ್ಯದೊಡನೆ ಅಲಂಕೃತ ಎತ್ತಿನ ಗಾಡಿಯಲ್ಲಿ ಗ್ರಾಮದಲ್ಲಿ ಮೆರವಣಿಗೆ ಮಾಡಿ ಶಾಲೆಗೆ ಕರೆತರಲಾಯಿತು. ನಂತರ ಸಿಹಿ ಮತ್ತು ಪುಷ್ಪ ನೀಡಿ ಸ್ವಾಗತಿಸಲಾಯಿತು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಚಂದ್ರೇಗೌಡ ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಆನಂದ್, ನಗರಸಭಾ ಸದಸ್ಯ ಕೆಂಪರಾಜು, ಶಾಲೆಯ ಮುಖ್ಯ ಶಿಕ್ಷಕ ರಾಮಶೆಟ್ಟಿ, ಶಿಕ್ಷಣ ಸಂಯೋಜಕಿ ಪವಿತ್ರ, ಶಾಲೆಯ ಶಿಕ್ಷಕರಾದ ಉಮೇಶ್, ಕುಮಾರ್, ನಂಜಂಡಸ್ವಾಮಿ, ಕುಸುಮ, ಕಮಲ, ಲೀಲಾ, ಆರ್.ಪದ್ಮ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)