ಶನಿವಾರ, ಜೂಲೈ 4, 2020
28 °C

ಎನ್‌ಟಿಎಸ್: ಪರೀಕ್ಷೆ, ಮೌಲ್ಯ ನಿರ್ಧಾರದ ಒರೆಗಲ್ಲು

ಬಿ.ಜೆ.ಧನ್ಯಪ್ರಸಾದ್ Updated:

ಅಕ್ಷರ ಗಾತ್ರ : | |

ಎನ್‌ಟಿಎಸ್: ಪರೀಕ್ಷೆ, ಮೌಲ್ಯ ನಿರ್ಧಾರದ ಒರೆಗಲ್ಲು

ಮೌಲ್ಯಾಂಕನ, ಅಧಿಕೃತ ಮಾನ್ಯತೆ ಮತ್ತು ಪರೀಕ್ಷೆಗಳಿಗಾಗಿ ಯುಜಿಸಿಯ ನ್ಯಾಕ್, ಎಐಸಿಟಿಐನ ಎನ್‌ಬಿಎ, ಎಂಸಿಐನ ಎನ್‌ಬಿಇ.., ಮುಂತಾದವು ಶಿಕ್ಷಣ ಕ್ಷೇತ್ರದ ನಿರ್ದಿಷ್ಟ ವಲಯದ ಉದ್ದೇಶ ಸಾಧನೆಗೆ ಸೀಮಿತವಾಗಿವೆ. ಸಾಮರ್ಥ್ಯ ನಿರ್ಮಾಣ ಶಿಕ್ಷಣದ ಗುರಿ. ಹೀಗಾಗಿ ರಾಷ್ಟ್ರದ ಸಮಗ್ರ ಶಿಕ್ಷಣ ವ್ಯವಸ್ಥೆಗೆ ಅನ್ವಯಿಸುವ ಪರೀಕ್ಷೆ, ಮೌಲ್ಯಮಾಪನ ಇತ್ಯಾದಿಗಳ ಸುಧಾರಣೆಗೆಂದೇ ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ 2006ರಲ್ಲಿ ಮೈಸೂರಿನ ಭಾಷಾ ಸಂಸ್ಥಾನದಲ್ಲಿ ರಾಷ್ಟ್ರೀಯ ಪರೀಕ್ಷಣ ಸೇವೆ - ಭಾರತ (ನ್ಯಾಷನಲ್ ಟೆಸ್ಟಿಂಗ್ ಸರ್ವೀಸ್-ಇಂಡಿಯಾ (ಎನ್‌ಟಿಎಸ್-ಐ)) ಸಂಸ್ಥೆ ಸ್ಥಾಪಿಸಿದೆ. ದೇಶದ ವಿಭಿನ್ನ ಸರ್ಕಾರಿ/ಸರ್ಕಾರೇತರ ಸಂಸ್ಥೆಗಳ ಮೌಲ್ಯನಿರ್ಧಾರಣೆಗೆ ಸಂಬಂಧಿಸಿದ ಬಹು ವಿಧದ ಬೇಡಿಕೆಗಳನ್ನು ಪೂರೈಸಲು ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. 


ಶೈಕ್ಷಣಿಕ ಪರೀಕ್ಷೆ, ಪ್ರವೇಶ, ನೇಮಕಾತಿ, ಅರ್ಹತಾ ಪರೀಕ್ಷೆ... ಹೀಗೆ ಸ್ಪರ್ಧಾ ಜಗತ್ತಿನಲ್ಲಿ ಎಲ್ಲವೂ ಪರೀಕ್ಷಾಮಯವಾಗಿದೆ. ಸಾಮರ್ಥ್ಯ ಮಾಪನದ ಅಳತೆಗೋಲುಗಳಾಗಿರುವ ಪರೀಕ್ಷಾ ಪದ್ಧತಿ, ಪ್ರಶ್ನೆಪತ್ರಿಕೆ, ಮೌಲ್ಯಮಾಪನ ಇತ್ಯಾದಿಗಳಲ್ಲಿನ ದೋಷಗಳನ್ನು ನಿವಾರಿಸಿ ಮೌಲ್ಯನಿರ್ಧಾರಣೆ ಮತ್ತು ಮೌಲ್ಯಾಂಕನ ಪದ್ಧತಿಯಲ್ಲಿ ಆಮೂಲಾಗ್ರ ಬದಲಾವಣೆ ತರುವ ಪ್ರಯತ್ನ ಇದಾಗಿದೆ. ಆ ನಿಟ್ಟಿನಲ್ಲಿ ಇಡೀ ರಾಷ್ಟ್ರಕ್ಕೆ ಅನ್ವಯಿಸುವ ಕೇಂದ್ರೀಕೃತ ಕ್ರಿಯಾತಂತ್ರ ಸೂತ್ರ ರೂಪಿಸಲು ಎನ್‌ಟಿಎಸ್ ಸಂಸ್ಥೆ ಶ್ರಮಿಸುತ್ತಿದೆ. ಹಲವು ವಿಚಾರಸಂಕಿರಣ, ತರಬೇತಿ, ಪುನಃಶ್ಚೇತನ ಕಾರ್ಯಾಗಾರಗಳನ್ನು ಈ ಸಂಸ್ಥೆ ಏರ್ಪಡಿಸಿದೆ. ಪ್ರಸ್ತುತ  ಉತ್ತರ ಪತ್ರಿಕೆ ಮೌಲ್ಯಮಾಪನ ಕುರಿತ ಎರಡು ತಿಂಗಳ ಕಾರ್ಯಾಗಾರ ನಡೆಯುತ್ತಿದ್ದು, ವಿವಿಧ ರಾಜ್ಯಗಳ ವಿಷಯ ಪರಿಣತರು ಇದರಲ್ಲಿ ಪಾಲ್ಗೊಂಡಿದ್ದಾರೆ. ಸಂಸ್ಥೆಯ ಕಾರ್ಯಚಟುವಟಿಕೆಗಳು ಶಿಕ್ಷಕರಿಗೆ ವೃತ್ತಿಯ ಪ್ರತಿಹಂತದಲ್ಲೂ ಸಹಕಾರಿಯಾಗಲಿದೆ.’

-ಡಾ. ಎಂ. ಬಾಲಕುಮಾರ್

ಪ್ರವಾಚಕ ಮತ್ತು ಸಂಶೋಧನಾ ಅಧಿಕಾರಿ

ಎನ್‌ಟಿಎಸ್-ಐ


ಉದ್ದೇಶಗಳು: ಬೋಧಕರು, ಕಲಿಕಾರ್ಥಿಗಳು, ಮೌಲ್ಯನಿರ್ಧಾರಕರು, ಯೋಜನಾ ಆಯೋಜಕರಿಗೆ ಹೊಣೆಗಾರಿಕೆ ತಿಳಿಸುವುದು. ಪ್ರವೇಶಾತಿ ದೃಢೀಕರಣ, ಉದ್ಯೋಗ ಉದ್ದೇಶಕ್ಕೆ ಪ್ರಮಾಣೀಕರಿಸಿದ ಮಾನದಂಡ ಸಿದ್ಧಪಡಿಸುವುದು.ಶಿಕ್ಷಣದ ವಿವಿಧ ಹಂತಗಳಲ್ಲಿ ವಿಷಯದ ಪರಿಮಾಣ ಪುನರಾವರ್ತನೆಯಾಗದಂತೆ/ಒಂದರ ಮೇಲೊಂದು ಚಾಚಿಕೊಳ್ಳದಂತೆ ನಿರ್ಧಾರ ಕೈಗೊಳ್ಳುವುದು. ಮೌಲ್ಯ ನಿರ್ಧಾರಣೆಗೆ ಸಂಬಂಧಿಸಿದಂತೆ ಕೇಂದ್ರೀಕೃತ ಕ್ರಿಯಾತಂತ್ರ, ವಿಧಾನ, ಶಾಸ್ತ್ರಗಳ ಬೆಳವಣಿಗೆ, ಸಾಮಗ್ರಿ ಅಭಿವೃದ್ಧಿ, ಮಾನವ ಶಕ್ತಿ ಪೂರೈಸುವುದು.ಯೋಜನೆಗಳು: ಸಂವಿಧಾನ ಅನುಸೂಚಿತ ದೇಶದ ಎಲ್ಲ ಭಾಷೆಗಳಲ್ಲಿ ಮೌಲ್ಯನಿರ್ಧಾರಣೆ ಸಾಮಗ್ರಿ ಸಿದ್ಧಪಡಿಸುವುದು. ಸದ್ಯ ಹಿಂದಿ, ಉರ್ದು, ತಮಿಳು ಭಾಷೆಗಳಲ್ಲಿ ಮೌಲ್ಯನಿರ್ಧಾರಣೆ ಉಪಕರಣಗಳು, ಮಾನಕಗಳನ್ನು ಅಭಿವೃದ್ಧಿಪಡಿಸಿದೆ.ಪ್ರಸ್ತುತ ಕನ್ನಡ ಭಾಷೆಯಲ್ಲೂ ಸಲಕರಣೆ ತಯಾರಿಕೆಗೆ ಸಿದ್ಧತೆ ನಡೆದಿದ್ದು, ಇದಕ್ಕೆ ಅನುಮತಿ ಕೋರಿ ಮಾನವ ಸಂಪನ್ಮೂಲ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕನ್ನಡ ಭಾಷೆಯಲ್ಲಿ ಪರೀಕ್ಷಾ ಸಾಮಗ್ರಿ ಸಿದ್ಧತೆಗೆ ಕ್ರಿಯಾಯೋಜನೆ ರೂಪಿಸಿ ಅವುಗಳ ಪ್ರಕಟಣೆ ಕೆಲಸ ನಡೆದಿದೆ. ಮೌಲ್ಯ ನಿರ್ಧಾರಣೆಗೆ ಸಂಬಂಧಿಸಿದ ಪದಗಳಿಗೆ ಪರಿಕಲ್ಪನಾತ್ಮಕ ವಿವರಣೆಯೊಂದಿಗೆ ಒಂದು ಸಾವಿರಕ್ಕೂ ಅಧಿಕ ಅಂತರ್‌ಶಿಸ್ತೀಯ ಪರಿಕಲ್ಪನೆಗಳನ್ನೂ ರೂಪಿಸಲಾಗಿದೆ.ಸಲಹಾ ಸಮಿತಿ: ಎನ್‌ಟಿಎಸ್‌ಗೆ ಶೈಕ್ಷಣಿಕ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಸಲಹೆ ನೀಡಲು ವಿಶ್ವವಿದ್ಯಾನಿಲಯಗಳ ಕುಲಪತಿಗಳು, ಎನ್‌ಸಿಟಿಇ ಇತ್ಯಾದಿ ನಿಯಂತ್ರಣ ಸಂಸ್ಥೆಗಳ ಮುಖ್ಯಸ್ಥರು, ಐಐಟಿ/ಸಿಬಿಎಸ್‌ಇ/ಯುಪಿಎಸ್‌ಸಿ ಪ್ರತಿನಿಧಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ ವಿಜ್ಞಾನಿಗಳು, ವಿಷಯ ಪರಿಣತರನ್ನು ಒಳಗೊಂಡ ಸಲಹಾ ಸಮಿತಿ ಇದೆ. ಸಂಸ್ಥೆಯ ಮೂಲ ಕಾರ್ಯಚೌಕಟ್ಟನ್ನು ಸೂತ್ರೀಕರಿಸಿ, ಅಭಿವೃದ್ಧಿಪಡಿಸಿ ವ್ಯಾಪಕವಾಗಿ ಕಾರ್ಯಗತಗೊಳಿಸುವ ಸಲುವಾಗಿ ಎನ್‌ಟಿಎಸ್ ಮೂರು ಕಾರ್ಯಭಾರ ಗುಂಪುಗಳನ್ನು ರಚಿಸಿದೆ. ಅವುಗಳೆಂದರೆ-

1. ಸಂಶೋಧನೆ ಮತ್ತು ಅಭಿವೃದ್ಧಿ(ಆರ್ ಅಂಡ್ ಡಿ),

2. ಸರ್ವೇಕ್ಷಣೆ ಮತ್ತು ದಾಖಲೀಕರಣ (ಎಸ್ ಅಂಡ್ ಡಿ)

3. ಸಲಹೆ ಮತ್ತು ತರಬೇತಿ (ಸಿ ಅಂಡ್ ಟಿ)‘ಸಂಶೋಧನೆ-ಅಭಿವೃದ್ಧಿ’ಯ ಗುರಿ:  ಶಿಕ್ಷಣದಲ್ಲಿನ ಮಾಪನ, ಮೌಲ್ಯ ನಿರ್ಧಾರಣೆ ಪರಿಕಲ್ಪನೆಗಳ ವಿಶ್ಲೇಷಣೆ, ಬೋಧನೆ/ಕಲಿಕೆ ದತ್ತಾಂಶಗಳ ಫಲಿತಾಂಶ ಗುರುತಿಸುವಿಕೆ, ಮೌಲ್ಯಂಕಾನಕ್ಕೆ ಅಗತ್ಯ ಶಾಸ್ತ್ರಗಳ ಬೆಳವಣಿಗೆ.‘ಸರ್ವೇಕ್ಷಣೆ- ದಾಖಲೀಕರಣ’ದ ಗುರಿಗಳು: ಮೌಲ್ಯನಿರ್ಧಾರಣೆ ವಿಷಯ, ವಿಧಾನ, ಮಾಹಿತಿ ಕ್ರೋಡೀಕರಣ ವಿದ್ಯುನ್ಮಾನ ಜಾಲ ಸೃಷ್ಟಿ, ಪರೀಕ್ಷಣಾ ಸಂಸ್ಥೆಗಳಿಗೆ (ಐಪಿಬಿಎಸ್, ಎಸ್‌ಎಸ್‌ಸಿ, ಇನ್ಫೋಸಿಸ್, ವಿಶ್ವವಿದ್ಯಾನಿಲಯಗಳು...) ಭೇಟಿ, ವಿವರ ಸಂಗ್ರಹ, ಶಿಕ್ಷಣ ವಿಭಿನ್ನ ಹಂತಗಳ ವಿವಿಧ ಪಠ್ಯ ಹಾಗೂ ಪ್ರಶ್ನೆಪತ್ರಿಕೆ ಭೌತಿಕ ಸಂಪನ್ಮೂಲಗಳ ಜಾಲ ಅಭಿವೃದ್ಧಿ, ವಿರಳ ಪರಾಮರ್ಶನ ಸಾಮಗ್ರಿ ದಾಖಲು, ವಿಶೇಷ ಗ್ರಂಥಾಲಯ ಸ್ಥಾಪನೆ.‘ಸಲಹೆ-ತರಬೇತಿ’ ಉದ್ದೇಶಗಳು: ನಿಯಮಿತವಾಗಿ ತರಬೇತಿ ಆಯೋಜನೆ, ಕ್ರಿಯಾತಂತ್ರ ವಿಕಸನ, ಮೌಲ್ಯನಿರ್ಧಾರಣೆ ವಿಭಿನ್ನ ಶಾಖೆಗಳ ಬೋಧನೆ ಮತ್ತು ತರಬೇತಿ ಮಾಡ್ಯೂಲ್ ಅಭಿವೃದ್ಧಿ, ಸಾಕ್ಷ್ಯಚಿತ್ರ, ನಕ್ಷೆ, ಕೋಷ್ಟಕ ಇತ್ಯಾದಿ ಪೂರಕ ಸಾಮಗ್ರಿ ಉತ್ಪಾದನೆ, ಪರೀಕ್ಷಣ-ಮೌಲ್ಯಂಕನದ ವಿಭಿನ್ನ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆ ನೀಡುವುದು.

 ಪ್ರಾಂತೀಯ ಘಟಕಗಳು: ರಾಷ್ಟ್ರದ 18 ರಾಜ್ಯಗಳಲ್ಲಿ ಎನ್‌ಟಿಎಸ್ ಸಂಸ್ಥೆ ಪ್ರಾಂತೀಯ ಘಟಕಗಳನ್ನು ಸ್ಥಾಪಿಸಿದೆ.ಘಟಕದ ವ್ಯಾಪ್ತಿಯಲ್ಲಿನ ಪ್ರೌಢಶಿಕ್ಷಣ, ಪಿಯುಸಿ, ಪದವಿ ವಿದ್ಯಾರ್ಥಿಗಳ ಸಂಖ್ಯಾ ಮಾಹಿತಿ ಕಲೆ ಹಾಕುವುದು, ರಾಷ್ಟ್ರೀಯ ಒಮ್ಮತ ನಿರ್ಮಿಸಲು, ಮಾಹಿತಿ ಪ್ರಸರಣ, ಉಪಕರಣ ಮತ್ತು ಮಾನಕ ಸಿದ್ಧಗೊಳಿಸುವುದು, ಕ್ಷೇತ್ರ ನಿರ್ವಹಣೆ, ದತ್ತಾಂಶ ಸಂಗ್ರಹ, ವಿಶ್ಲೇಷಣೆ, ಮಾನದಂಡ ಪ್ರಕ್ರಿಯೆಗೆ ವಿದ್ವಾಂಸರನ್ನು ಗುರುತಿಸುವುದು ಘಟಕಗಳ ಕಾರ್ಯಗಳು. ರಾಜ್ಯದ ಹುಬ್ಬಳ್ಳಿಯಲ್ಲೂ ಒಂದು ಪ್ರಾಂತೀಯ ಘಟಕ ಇದೆ.ಮೌಲ್ಯನಿರ್ಧಾರಣೆ ಅಭಿವೃದ್ಧಿ ಉಪಕರಣಗಳನ್ನು ಕ್ರಮಬದ್ಧವಾಗಿ ಒದಗಿಸಲು ಈ ಸಂಸ್ಥೆ ಪ್ರಾಥಮಿಕ, ಉನ್ನತ ಪ್ರಾಥಮಿಕ ಮಾಧ್ಯಮಿಕ, ಉನ್ನತ ಮಾಧ್ಯಮಿಕ, ಪದವಿ, ಸ್ನಾತಕೋತ್ತರ ಮತ್ತು ಸಂಶೋಧನೆ ಹೀಗೆ ಏಳು ಹಂತಗಳಿಗೆ ಅನ್ವಯಿಸುವ ಪರಿಕಲ್ಪನಾಧಾರಿತ ಸಾತತ್ಯ ವರ್ಗೀಕೃತ ಪಠ್ಯಕ್ರಮ (Concept Based Continuum of Graded Syallabi) (ಸಿಸಿಜಿಎಸ್) ಬೋಧನೆ, ಕಲಿಕೆ ಮೌಲ್ಯ ನಿರ್ಧಾರ ಶಿಕ್ಷಣದ ಎಲ್ಲ ಹಂತಗಳಿಗೂ ಹೋಲಿಕೆ ಸಾಮರ್ಥ್ಯ ಮತ್ತು ವ್ಯವಸ್ಥೆಗೊಳಿಸುವ ಪ್ರಕ್ರಿಯೆಗೆ ಸಹಕಾರಿಯಾಗಿದೆ.ಸಿಸಿಜಿಎಸ್ ಹೊಸ ಕಲ್ಪನೆಯಾಗಿದ್ದು ಇದು ನಿರ್ದಿಷ್ಟ ಭಾಷೆ ಅಥವಾ ಪಠ್ಯ ಅಥವಾ ಲೇಖಕರಿಗೆ ಅನ್ವಯಿಸುವುದಿಲ್ಲ. ಯಾವುದೇ ಶಾಲೆ, ವಿಶ್ವವಿದ್ಯಾನಿಲಯ ಪಠ್ಯಕ್ರಮದ ಮಿತಿಗೊಳಪಡದೆ ಸ್ವತಂತ್ರವಾಗಿದೆ. ಈ ಹೊಸಕಲ್ಪನೆಯನ್ನು ದೇಶಾದ್ಯಂತ ಸ್ವೀಕಾರಾರ್ಹಗೊಳಿಸುವ ಸಲುವಾಗಿ ದೇಶದೆಲ್ಲೆಡೆ ಹಲವಾರು ಸಂಸ್ಥೆಗಳಲ್ಲಿನ ಭಾಷೆ ಮತ್ತು ಸಾಹಿತ್ಯ ಅಧ್ಯಯನ ಪಠ್ಯದಿಂದ ಗುರುತಿಸಲ್ಪಟ್ಟ ಮತ್ತು ಸಂಘಟಿಸಿದ ಎಲ್ಲ ಸಾಮಾನ್ಯ ಕಲ್ಪನೆಗಳನ್ನು ಪ್ರತ್ಯೇಕಿಸಲಾಗಿದೆ.ಮೌಲ್ಯಧಾರಣೆಗೆ ಸಂಬಂಧಿಸಿದಂತೆ ವಿಶ್ವದ ವಿವಿಧೆಡೆಯ ಪರೀಕ್ಷಣಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿ ಅವುಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ.1. ಅಭಿಕ್ಷಮತೆ (ಆಪ್ಟಿಟ್ಯೂಡ್): ಪ್ರವೇಶಾತಿಗೆ

2. ಸಾಧನೆ ಪರೀಕ್ಷಣ (ಅಚೀವ್‌ಮೆಂಟ್): ದೃಢೀಕರಣಕ್ಕೆ

3. ಪ್ರಾವೀಣ್ಯ ಪರೀಕ್ಷಣ (ಪ್ರೊಫೀಶಿಯನ್ಸಿ): ಉದ್ಯೋಗ ಒದಗಿಸಲುಮೇಲಿನ ಮೂರೂ ವರ್ಗಗಳಿಗೆ ಸಂಬಂಧಿಸಿದಂತೆ ಮೂರು ಸಾಕ್ಷ್ಯಚಿತ್ರ ನಿರ್ಮಿಸಲಾಗಿದೆ. ಅಲ್ಲದೇ ಸಾಮಾನ್ಯ ಪರೀಕ್ಷಣ ಮತ್ತು ಮೌಲ್ಯ ನಿರ್ಧಾರಣೆಯ (General Evaluation and Testing) ಸಾಕ್ಷ್ಯಚಿತ್ರವನ್ನೂ ತಯಾರಿಸಲಾಗಿದೆ National Testing Service India - ಮಾಸಿಕ ವಾರ್ತಾಪತ್ರಿಕೆ ತರುತ್ತಿದೆ.ಸಂಶೋಧನೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಸಹಾಯಧನ ಉಪಯೋಜನೆ ಸೃಷ್ಟಿಸಿದೆ. ಇದರ ಅನುದಾನದಡಿ 57 ಮಂದಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಹೆಚ್ಚಿನ ಮಾಹಿತಿಗೆ ದೂ: 0821-2345011 ಅಥವಾ ವೆಬ್: www.ciil-ntsindia.net /www.ciil-miles.net  ಸಂಪರ್ಕಿಸಬಹುದು. 


 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.