ಭಾನುವಾರ, ಜನವರಿ 26, 2020
18 °C

ಎರಡು ವರ್ಷದ ಹೆಣ್ಣು ಮಗುವಿನ ಮೇಲೆ ಅಮಾನುಷ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮಕ್ಕಳ ದೌರ್ಜನ್ಯದ ಆಘಾತಕಾರಿ ಪ್ರಕರಣವೊಂದರಲ್ಲಿ, ಎರಡು ವರ್ಷದ ಹೆಣ್ಣು ಮಗುವೊಂದು ಅಮಾನುಷವಾಗಿ ಥಳಿತಕ್ಕೊಳಗಾಗಿ ಇಲ್ಲಿನ ಏಮ್ಸ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ.

`ಮಗುವಿನ ಮೈಮೇಲೆ ಮನುಷ್ಯರು ಕಚ್ಚಿದ ಗಾಯಗಳಿವೆ. ಮುಖದ ಮೇಲೆ ಕಬ್ಬಿಣದಿಂದ ಬರೆ ಹಾಕಲಾಗಿದೆ.ತೋಳುಗಳು ಮುರಿದಿದ್ದು, ತಲೆಗೆ ಗಂಭೀರವಾಗಿ ಏಟು ಬಿದ್ದಿದೆ. ಭಾರಿ ಹೃದಯಾಘಾತಕ್ಕೂ ಒಳಗಾಗಿರುವ ಈ ಪುಟಾಣಿಯನ್ನು ನರರೋಗ ವಿಭಾಗದ ತುರ್ತು ನಿಗಾ ಘಟಕದಲ್ಲಿ ಇಡಲಾಗಿದ್ದು, ಚೇತರಿಸಿಕೊಳ್ಳುತ್ತಿದೆ~ ಎಂದು ಏಮ್ಸ ವೈದ್ಯ ಡಾ. ದೀಪಕ್ ಅಗರ್‌ವಾಲ್ ತಿಳಿಸಿದ್ದಾರೆ.ಮಗುವಿನ ತಾಯಿ ಎಂದು ಶಂಕಿಸಲಾಗಿರುವ 15 ವರ್ಷದ ಅವಿವಾಹಿತ ಬಾಲಕಿ ಮತ್ತು ಆಕೆಯ ಸಂಗಾತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರತಿಕ್ರಿಯಿಸಿ (+)