ಮಂಗಳವಾರ, ಮೇ 18, 2021
22 °C

ಎರಡು ವಿಮಾನಗಳಲ್ಲಿ ತಾಂತ್ರಿಕ ದೋಷ: ತಪ್ಪಿದ ಭಾರಿ ಅನಾಹುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ/ ಲಾಹೋರ್: ಪಾಕಿಸ್ತಾನದಲ್ಲಿ ಭಾನುವಾರ ಎರಡು ಪ್ರಯಾಣಿಕ ವಿಮಾನಗಳಲ್ಲಿ ತಾಂತ್ರಿಕ ದೋಷ ಉಂಟಾಗಿ ಆತಂಕದ ಸನ್ನಿವೇಶಗಳು ಸೃಷ್ಟಿಯಾಗಿದ್ದವು. ಅಂತಿಮವಾಗಿ ಎರಡೂ ವಿಮಾನಗಳು ಯಾವುದೇ ಅಪಾಯವಿಲ್ಲದೆ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾದವು.ಭೋಜಾ ಏರ್‌ಲೈನ್ಸ್‌ಗೆ ಸೇರಿದ ವಿಮಾನ ಪ್ರತಿಕೂಲ ಹವಾಮಾನವಿದ್ದಾಗ ರಾವಲ್ಪಿಂಡಿ ಬಳಿ ಅಪಘಾತಕ್ಕೀಡಾಗಿ 127 ಜನ ಸಾವಿಗೀಡಾದ ಎರಡನೇ ದಿನವೇ ಈ ಘಟನೆಗಳು ನಡೆದಿವೆ.ಲಾಹೋರ್‌ನಿಂದ ಹೊರಟಿದ್ದ ಶಾಹೀನ್ ಏರ್‌ಕ್ರಾಫ್ಟ್‌ಗೆ ಸೇರಿದ ವಿಮಾನ ಇನ್ನೇನು ರನ್‌ವೇ ಬಿಟ್ಟು ಮೇಲಕ್ಕೆ ಹಾರುವ ಹಂತದಲ್ಲಿದ್ದಾಗ, ಅದರ ಇಂಧನ ಟ್ಯಾಂಕಿನಲ್ಲಿ ಸೋರಿಕೆ ಕಂಡುಬಂತು. ಪೈಲಟ್ ತಕ್ಷಣವೇ ಬ್ರೇಕ್ ಹಾಕಿ ವಿಮಾನ ನಿಲ್ಲಿಸಿದರು.ಈ ವಿಮಾನದಲ್ಲಿ 200 ಪ್ರಯಾಣಿಕರು ಇದ್ದರು. ಇದಕ್ಕೆ ಮುನ್ನ, ಇದೇ ಕಂಪನಿಗೆ ಸೇರಿದ ಬೇರೊಂದು ವಿಮಾನ ಕರಾಚಿ ವಿಮಾನದಲ್ಲಿ ಇಳಿಯುತ್ತಿದ್ದಾಗ ಟೈರುಗಳು ಸ್ಫೋಟಗೊಂಡವು. ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಉಂಟಾದ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ವಿಮಾನದಲ್ಲಿ 100 ಪ್ರಯಾಣಿಕರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.