ಎಲ್ಲರಿಗೂ ಜವಾಬ್ದಾರಿಯ ಅರಿವಿದೆ

6

ಎಲ್ಲರಿಗೂ ಜವಾಬ್ದಾರಿಯ ಅರಿವಿದೆ

Published:
Updated:
ಎಲ್ಲರಿಗೂ ಜವಾಬ್ದಾರಿಯ ಅರಿವಿದೆ

ನ್ಯೂಜಿಲೆಂಡ್ ವಿರುದ್ಧದ ಕೊನೆಯ ಲೀಗ್ ಪಂದ್ಯದ ಬಳಿಕ ನಮಗೆ ಸಾಕಷ್ಟು ಬಿಡುವು ಲಭಿಸಿದೆ. ಇದರಿಂದಾಗಿ ಇಂಗ್ಲೆಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ತಕ್ಕ ರೀತಿಯಲ್ಲಿ ಸಜ್ಜಾಗಲು ಸಾಧ್ಯವಾಗಿದೆ. ಕಠಿಣ ತರಬೇತಿ ನಡೆಸಲು ಹಾಗೂ ಕುಟುಂಬ ಸದಸ್ಯರ ಜೊತೆ ಸಮಯ ಕಳೆಯಲು ಅವಕಾಶ ಲಭಿಸಿದೆ. ಶನಿವಾರ ನಡೆಯುವ ಎಂಟರಘಟ್ಟದ ಪಂದ್ಯದಲ್ಲಿ ಆಡುವುದು ಸಂತಸದ ವಿಷಯ. ಶ್ರೀಲಂಕಾಕ್ಕೆ ಹೆಮ್ಮೆ ತರುವುದು ನಮ್ಮ ಉದ್ದೇಶ.ಕಳೆದ ಕೆಲ ವಾರಗಳಲ್ಲಿ ನಮಗೆ ಅಭಿಮಾನಿಗಳ ಅದ್ಭುತ ಬೆಂಬಲ ಲಭಿಸಿದೆ. ಅವರಿಗೆ ನಿರಾಸೆ ಉಂಟುಮಾಡಲು ಬಯಸುವುದಿಲ್ಲ. ಇಂಗ್ಲೆಂಡ್ ವಿರುದ್ಧ ಗೆಲುವು ಪಡೆಯುವುದೇ ನಮ್ಮ ಗುರಿ. ತವರು ನೆಲದಲ್ಲಿ ಆಡುವ ಕಾರಣ ನಮಗೆ ‘ಫೇವರಿಟ್’ ಎಂಬ ಹಣೆಪಟ್ಟಿ ಲಭಿಸಿದೆ. ಅದೇ ರೀತಿ ಕಳೆದ 15 ತಿಂಗಳ ಅವಧಿಯಲ್ಲಿ ನಾವು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡು ಬಂದಿದ್ದೇವೆ. ಆದರೂ ಇಂಗ್ಲೆಂಡ್ ವಿರುದ್ಧ ಶನಿವಾರ ನಡೆಯಲಿರುವುದು ‘ಮಾಡು ಇಲ್ಲವೇ ಮಡಿ’ ಪಂದ್ಯ ಎಂಬುದು ನಿಜ.

 

ತಂಡದ ಎಲ್ಲ ಆಟಗಾರರಿಗೆ ತಮ್ಮ ತಮ್ಮ ಜವಾಬ್ದಾರಿಯ ಅರಿವಿದೆ. ಆದ್ದರಿಂದ ಪ್ರತಿಯೊಬ್ಬರೂ ಅವರ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಜೊತೆಗೆ ಯೋಜನೆಯನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸುವುದು ಅಗತ್ಯ. ಕೆಲವು ವಿಭಾಗಗಳಲ್ಲಿ ನಮಗೆ ಇನ್ನೂ ಸುಧಾರಿಸಬೇಕಿದೆ. ಕಳೆದ ಒಂದು ವಾರ ಅಭ್ಯಾಸದ ವೇಳೆ ಈ ಬಗ್ಗೆ ಹೆಚ್ಚಿನ ಗಮನ ನೀಡಿದ್ದೇವೆ. ಬೌಲರ್‌ಗಳು ನಿಖರತೆ ಕಾಯ್ದುಕೊಳ್ಳುವುದು ಅಗತ್ಯ. ಬ್ಯಾಟ್ಸ್‌ಮನ್‌ಗಳು ದೊಡ್ಡ ಜೊತೆಯಾಟ ಕಟ್ಟುವತ್ತ ಗಮನ ಹರಿಸಬೇಕು. ಅದೇ ರೀತಿ ಮಿಂಚಿನ ಫೀಲ್ಡಿಂಗ್ ನಮ್ಮಿಂದ ಹೊರಬರಬೇಕಿದೆ.ನಮ್ಮ ತಂಡ ಪರಿಸ್ಥಿತಿಗೆ ಚೆನ್ನಾಗಿ ಹೊಂದಿಕೊಂಡಿದೆ. ಆದ್ದರಿಂದ ಅಂತಿಮ ಇಲೆವೆನ್‌ಲ್ಲಿ ಹೆಚ್ಚಿನ ಬದಲಾವಣೆ ಕಂಡುಬರದು. ಆಡುವ ಪರಿಸ್ಥಿತಿ ಮತ್ತು ಎದುರಾಳಿ ಯಾರು ಎಂಬ ಅಂಶವನ್ನುಗಮನದಲ್ಲಿಟ್ಟುಕೊಂಡು ನಾವು ಅಂತಿಮ ಇಲೆವೆನ್‌ನ ಆಯ್ಕೆ ಮಾಡುವೆವು. ಮುರಳೀಧರನ್ ಅವರು ದೈಹಿಕ ಸಾಮರ್ಥ್ಯ ಮರಳಿ ಪಡೆದಿರುವುದು ಸಂತಸದ ಸುದ್ದಿ. ಫಿಟ್‌ನೆಸ್ ಪಡೆಯಲು ಅವರು ಫಿಸಿಯೋ ಜೊತೆ ಕಠಿಣ ಪರಿಶ್ರಮ ನಡೆಸುತ್ತಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry