ಶನಿವಾರ, ಏಪ್ರಿಲ್ 17, 2021
30 °C

ಎಲ್ಲಿಯಾದರೂ ಇರಬಹುದು ಮಧುರಾ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): `ಮಧುರಾ ಹನಿ~ ಎಂದೇ ಎಲ್ಲರ ಬಾಯಲ್ಲಿ ನಲಿದಾಡುತ್ತಿರುವ ಮಧುರಾ ನಾಗೇಂದ್ರ ಅವರು ಎಲ್ಲಿಯಾದರೂ ಥಟ್ಟನೇ ಕಾಣಿಸಿಕೊಳ್ಳಬಹುದು ಎನ್ನುವ ಅಭಿಪ್ರಾಯ ಈಗ ಅಂತರಜಾಲದಲ್ಲಿ ಹರಿದಾಡುತ್ತಿದೆ.ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಪ್ರಮಾಣ ವಚನ ಸ್ವೀಕರಿಸಿದಾಗ, ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಇಳಿದಾಗ, ಜವಾಹರಲಾಲ್ ನೆಹರೂ ಮೊದಲ ಬಾರಿಗೆ ಸಂಸತ್‌ನಲ್ಲಿ ಭಾಷಣ ಮಾಡಿದ್ದಾಗ, `ಧೂಮ್~ ಚಿತ್ರದಲ್ಲಿ... ಹೀಗೆ ಎಲ್ಲಿಯಾದವರೂ ಮಧುರಾ ಕಾಣಿಸಿಕೊಂಡಿರಬಹುದು ಎನ್ನುವ ಕಲ್ಪನೆಯು ಚಿತ್ರಗಳಾಗಿ ಫೇಸ್‌ಬುಕ್, ಟ್ವಿಟರ್ ಹಾಗೂ ಬ್ಲಾಗ್‌ಗಳಲ್ಲಿ ಭಾರಿ ಪ್ರಮಾಣದಲ್ಲಿ ಹರಡಿಕೊಂಡಿವೆ.ಲಂಡನ್ ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಭಾರತ ತಂಡ ಕ್ರೀಡಾಪಟುಗಳೊಂದಿಗೆ ಪಥಸಂಚಲನದಲ್ಲಿ ಹದಿನೈದು ನಿಮಿಷಗಳ ಕಾಲ ಕಾಣಿಸಿಕೊಂಡು ಸುದ್ದಿ ಮಾಡಿದ ಮಧುರಾ ಈಗ ಅಂತರಜಾಲದಲ್ಲಿ ಅದೇ ಕೆಂಪು-ನೀಲಿ ಪೋಷಾಕಿನೊಂದಿಗೆ ಹಲವಾರು ವಿಶಿಷ್ಟವಾದ ಐತಿಹಾಸಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಬೆಂಗಳೂರಿನ ಈ ಬೆಡಗಿಯ ಡಿಜಿಟಲ್ ಅವತಾರಗಳು ನೂರಾರು ಸ್ವರೂಪದೊಂದಿಗೆ ಮೂಡಿವೆ. ಉದ್ಘಾಟನಾ ಸಮಾರಂಭದಲ್ಲಿ ಭರತನಾಟ್ಯ ಕಲಾವಿದೆಯಾಗಿ ಪ್ರದರ್ಶನ ನೀಡಿ ಆನಂತರ ಭಾರತ ತಂಡದೊಂದಿಗೆ ಕಾಣಿಸಿಕೊಂಡು ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾದ ಮಧುರಾ ಅವರು ಮತ್ತೆ ಫೇಸ್‌ಬುಕ್‌ನಲ್ಲಿ ಅಕೌಂಟ್ ಹೊಂದುತ್ತಾರೆಂದು ಅನೇಕರು ಸರ್ಚ್ ಮಾಡಿ ನೋಡುತ್ತಲೇ ಇದ್ದಾರೆ.ಗೂಗಲ್ ಸರ್ಚ್‌ನಲ್ಲಿಯೂ ಈ ಬೆಡಗಿಯ ಹೆಸರು ಕಳೆದ ಒಂದು ವಾರದಲ್ಲಿ ಅತಿ ಹೆಚ್ಚು ಬಾರಿ `ಸರ್ಚ್~ ಆಗಿದೆ ಎನ್ನುವುದೂ ವಿಶೇಷ. ಈಗಂತೂ ಮಧುರಾ ಹಲವಾರು ಐತಿಹಾಸಿಕ ಚಿತ್ರಗಳ ಭಾಗವಾಗಿ ಕಾಣಿಸಿಕೊಳ್ಳುತ್ತಿರುವಂತೆಯೇ ಆ ಚಿತ್ರಗಳನ್ನು ಇ-ಮೇಲ್‌ಗಳಲ್ಲಿಯೂ ಹಂಚಿಕೊಳ್ಳಲು ಅಂತರಜಾಲ ಬಳಕೆದಾರರು ಉತ್ಸಾಹ ತೋರಿದ್ದಾರೆ.ಬ್ರಿಟನ್ ರಾಜಕುಟುಂಬದ ಹ್ಯಾರಿ ಮತ್ತು ಕೇಟ್ ಮದುವೆ ಸಮಾರಂಭದಲ್ಲಿಯೂ ಮಧುರಾ ಇದ್ದ ರೀತಿಯ ಚಿತ್ರಕ್ಕಂತೂ ಅಪಾರ ಸಂಖ್ಯೆಯ ಹಿಟ್ಸ್ ಬಂದಿವೆ. `ಮಧುರಾ ನಡೆ~ಯು ಇಷ್ಟೊಂದು ಜನಪ್ರಿಯತೆ ಪಡೆದಿರುವ ಕಾರಣ ಈ ಘಟನೆಯನ್ನು ಹೋಲುವ ವೀಡಿಯೊ ಗೇಮ್ ಕೂಡ ಸಜ್ಜುಗೊಳಿಸಲು ಅಮೆರಿಕಾ ಹಾಗೂ ಇಂಗ್ಲೆಂಡ್‌ನಲ್ಲಿನ ಆನ್‌ಲೈನ್ ಗೇಮಿಂಗ್ ಕಂಪೆನಿಗಳು ಆಸಕ್ತಿ ತೋರಿಸಿವೆ ಎನ್ನಲಾಗಿದೆ.ಮಧುರಾ ಹನಿ ಅವರು ಲಂಡನ್ ಒಲಿಂಪಿಕ್ ಮುಖ್ಯ ಕ್ರೀಡಾಂಗಣದಲ್ಲಿ ನಡೆದ ಕ್ಷಣದ ವೀಡಿಯೊವನ್ನು `ಯುಟೂಬ್~ನಲ್ಲಿ ಸಾಕಷ್ಟು ಜನರು ನೋಡಿದ್ದಾರೆ. ಅಷ್ಟೇ ಅಲ್ಲ ಈ ವೀಡಿಯೊಗಳಿಗೆ ಅತಿ ಹೆಚ್ಚು ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿವೆ.ಕೆಲವು ಬ್ಲಾಗ್‌ಗಳಲ್ಲಿ ಮಧುರಾ ಯಾವುದೇ ತಪ್ಪು ಮಾಡಿಲ್ಲ. ತನ್ನದೇ ದೇಶದ ತಂಡದೊಂದಿಗೆ ಅವಳು ನಡೆದಿದ್ದನ್ನು ಟೀಕೆ ಮಾಡಬೇಕಾಗಿಲ್ಲ ಎಂದು ಕೂಡ ವಾದ ಮಂಡನೆ ಮಾಡಲಾಗಿದೆ. ಆದರೆ ಹಲವಾರು ಅಭಿಪ್ರಾಯಗಳು `ಮಧುರಾ ನಡೆ ಸರಿಯಲ್ಲ~ ಎಂದು ಖಂಡಿಸಿದ್ದಾರೆ. ಕ್ರೀಡಾಪಟುಗಳಿಗೆ ಪತ್ರಿಕೆಗಳ ಮುಖಪುಟದಲ್ಲಿ ಸಿಗಬೇಕಾಗಿದ್ದ ಗೌರವವನ್ನು ಯಾವುದೇ ಸಾಧನೆ ಮಾಡದ ಮಧುರಾ ಕಿತ್ತುಕೊಂಡರು. ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆದಿದ್ದು ಬೇಸರಗೊಳಿಸಿತೆಂದು ಕೂಡ ಅನಿಸಿಕೆಗಳನ್ನು ವ್ಯಕ್ತಪಡಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.