ರಾಮನಗರ: ದಲಿತರ ಎಸ್.ಸಿ.ಪಿ ಯೋಜನೆಗಳ ಸೂಕ್ತ ಅನುಷ್ಠಾನಕ್ಕಾಗಿ `ಕೇಂದ್ರ ಶಾಸನ~ ಜಾರಿಗೆ ತರುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ದಲಿತರ ಹಕ್ಕುಗಳ ಹೋರಾಟ ಸಮಿತಿಯ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಎನ್ಸಿಪಿ ಯೋಜನೆಗಳು ಸರ್ಕಾರದ ವಾರ್ಷಿಕ ಮತ್ತು ಪಂಚ ವಾರ್ಷಿಕ ಯೋಜನೆಗಳ ಸಮಗ್ರ ಭಾಗವಾಗಿರಬೇಕು. ಈ ಹಂಚಿಕೆಯ ಮೊತ್ತವನ್ನು ಪರಿವರ್ತನೆಗೊಳಿಸುವುದು ಮತ್ತು ಅಳಿದು ಹೋಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

ಎನ್ಸಿಪಿ ಯೋಜನೆ ಅನುಷ್ಠಾನದ ಪರಿಶೀಲನೆಗೆ ಶ್ವೇತಪತ್ರ ಹೊರಡಿಸಬೇಕು. ಎಸ್.ಸಿ, ಎಸ್.ಟಿ ಸಂಬಂಧಿಸಿದ ಚರ್ಚೆಗೆ ವಿಶೇಷವಾದ ವಿಧಾನಸಭೆ ಮತ್ತು ಪಾರ್ಲಿಮೆಂಟ್ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದರು.
ಅರಣ್ಯ ಮತ್ತು ಬಗರ್ ಹುಕುಂನಲ್ಲಿ ದಲಿತರು ಒತ್ತುವರಿ ಮಾಡಿರುವ ಭೂಮಿಗೆ ಸಾಗುವಳಿ ಚೀಟಿ ನೀಡಬೇಕು.

ರಾಜ್ಯದಲ್ಲಿ ಖಾಲಿ ಇರುವ ಬ್ಯಾಕ್ಲಾಗ್ ಹುದ್ದೆಗಳನ್ನು ಕೂಡಲೇ ತುಂಬಬೇಕು. ಖಾಸಗಿ ವಲಯದಲ್ಲಿ ಮೀಸಲಾತಿ ಜಾರಿಯಾಗಬೇಕು. ಸಫಾಯಿ ಕರ್ಮಚಾರಿಗಳಿೆ ಪುನರ್ವಸತಿ ಕಲ್ಪಿಸಬೇಕು.

ದಲಿತ ಕಾರ್ಮಿಕತರಿಗೆ ತಲಾ 5 ಲಕ್ಷ ಪರಿಹಾರ ನೀಡಬೇಕು ಹಾಗೂ ಅವರ ಕುಟುಂಬದ ಸದಸ್ಯರಿಗೆ ತಕ್ಷಣ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದರು. ಸಂಚಾಲಕರಾದ ಸುಜಾತ, ಸಹ ಸಂಚಾಲಕರಾದ ಸಂಜೀವಯ್ಯ, ಎಂ.ಶ್ರೀನಿವಾಸ್, ಜಿ.ಕೃಷ್ಣಾನಾಯಕ್, ವನಜ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.