ಬುಧವಾರ, ಫೆಬ್ರವರಿ 24, 2021
23 °C

ಎಸ್ಸೆಸ್ಸೆಲ್ಸಿ–ಪಿಯು; ದಿಕ್ಸೂಚಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಸ್ಸೆಸ್ಸೆಲ್ಸಿ–ಪಿಯು; ದಿಕ್ಸೂಚಿ...

‘ಫಲಿತಾಂಶಕ್ಕಿಂತ ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ’

‘ಸರ್ಕಾರದ ಶೈಕ್ಷಣಿಕ ನಿಯಮದ ಪ್ರಕಾರ ಎಲ್ಲ ಶಿಕ್ಷಣ ಸಂಸ್ಥೆಗಳು ಫಲಿತಾಂಶಕ್ಕಿಂತ ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’ – ಇದೇ ಸಿದ್ಧಾಂತ ಮೇಲೆ ಬಾಪೂಜಿ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ’

ನಗರದ ಪಿಳ್ಳೇಕರನಹಳ್ಳಿಯಲ್ಲಿರುವ ಬಾಪೂಜಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ವೀರೇಶ್, ತಮ್ಮ ಶಿಕ್ಷಣ ಸಂಸ್ಥೆಯ ಕಾರ್ಯವೈಖರಿಯನ್ನು ಹೀಗೆ ಪರಿಚಯಿಸು ತ್ತಾರೆ. ಇಡೀ ಶಿಕ್ಷಣ ವ್ಯವಸ್ಥೆಯೇ ಗೊಂದಲದಲ್ಲಿದೆ ಎಂದು ಬೇಸರ ವ್ಯಕ್ತಪಡಿಸುವ ಅವರು, ಕೆಲ ಖಾಸಗಿ ಸಂಸ್ಥೆಗಳು ಉತ್ತಮ ಫಲಿತಾಂಶ ದೃಷ್ಟಿಯಿಂದ ಕೆಲಸ ಮಾಡುವುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಈ ಧೋರಣೆ ಬದಲಾಗಬೇಕಿದೆ ಎಂದು ಅಭಿಪ್ರಾಯಪಡುತ್ತಾರೆ.ನಗರದವರಿಗೆ ಈ ಶಿಕ್ಷಣ ವ್ಯವಸ್ಥೆ ಒಗ್ಗಬಹುದು. ಆದರೆ ಗ್ರಾಮಾಂತರ ಭಾಗಗಳಲ್ಲಿ ವಿದ್ಯುತ್‌ ಕೊರತೆ, ಶುಲ್ಕದ ಕೊರತೆ, ಪೋಷಕರಿಗೆ ವಿದ್ಯಾಭ್ಯಾಸದ ಕೊರತೆ.. ಇವೆಲ್ಲ ಅವರ ಅಂಕಗಳಿಕೆಗೆ ಅಡ್ಡವಾಗುತ್ತವೆ. ಅಂಥವರಿಗೆ ನಮ್ಮ ಸಂಸ್ಥೆಯಲ್ಲಿ ನಾವು ಆದ್ಯತೆ ನೀಡುತ್ತಿದ್ದೇವೆ ಎನ್ನುತ್ತಾರೆ ಅವರು.ಗ್ರಾಮೀಣ ಮಕ್ಕಳಿಗೆ ಆದ್ಯತೆ ನೀಡುತ್ತಿರುವ ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ 12 ಕಾಲೇಜುಗಳನ್ನು ಹೊಂದಿದೆ. ಒಂದರಿಂದ ಹತ್ತನೇ ತರಗತಿಯವರೆಗೂ ತರಗತಿಗಳನ್ನು ನಡೆಸುತ್ತಿದ್ದಾರೆ. ಹತ್ತನೇ ತರಗತಿ ನಂತರ ಪಿಯುಸಿ, ಪದವಿ ಕೋರ್ಸ್ ಇವೆ. ಐಟಿಐ, ಡಿಪ್ಲೊಮಾ, ಬಿ.ಇಡಿ ಯಂತಹ ವೃತ್ತಿಪರ ಶಿಕ್ಷಣಕ್ಕೂ ಆದ್ಯತೆ ನೀಡಿ, ತರಗತಿಗಳನ್ನು ನಡೆಸುತ್ತಿದ್ದೇವೆ. ರಂಗ ಶಿಕ್ಷಣ ಈ ಕಾಲೇಜಿನ ವಿಶೇಷ. ರಂಗಕರ್ಮಿ ಅಶೋಕ್ ಬಾದರದಿನ್ನಿಯವರಂತಹ ಖ್ಯಾತ ರಂಗಕರ್ಮಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡುತ್ತಿದ್ದಾರೆ.

ದೂರ ಶಿಕ್ಷಣದ ಮೂಲಕ ಬಿ.ಟೆಕ್‌, ಎಂ.ಟೆಕ್‌, ಎಂಬಿಎ, ಎಂಸಿಎ ನಂತಂಹ ತಾಂತ್ರಿಕ ಮತ್ತು ಮ್ಯಾನೇಜ್ ಮೆಂಟ್ ಶಿಕ್ಷಣ ಕೋರ್ಸ್ ಗಳನ್ನು ನಡೆಸುತ್ತಿದ್ದಾರೆ.  ಕಾಲ ಕಾಲಕ್ಕೆ ಪ್ರವೇಶಾವಕಾಶವನ್ನು ಪತ್ರಿಕೆಗಳಲ್ಲಿ ಪ್ರಕಟಿಸಿ, ವಿದ್ಯಾರ್ಥಿಗಳನ್ನು ಆಹ್ವಾನಿಸುತ್ತಾರೆ.

‘ಈ ವರ್ಷ ಎಸ್ಸೆಸ್ಸೆಲ್ಸಿ ಮತ್ತು ಪಿಯಸಿಯಲ್ಲಿ ಉತ್ತಮ ಫಲಿತಾಂಶ ಲಭ್ಯವಾಗಿದೆ. ಪಿಯುಸಿಯಲ್ಲಿ ಹದಿನೈದು ವಿದ್ಯಾರ್ಥಿಗಳು ಅತ್ಯುತ್ತಮ ಶೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಫಲಿತಾಂಶ ಮತ್ತು ನಮ್ಮ ಶ್ರಮದ ಬಗ್ಗೆ ತೃಪ್ತಿಯಿದೆ’ ಎನ್ನುತ್ತಾರೆ ವೀರೇಶ್.ಜಿಲ್ಲಾ ಮದಕರಿನಾಯಕ ವಿದ್ಯಾ ಸಂಸ್ಥೆ, ಮೂರು ದಶಕಗಳಷ್ಟು ಹಿರಿಯ ಸಂಸ್ಥೆ. ಶೇ 80ರಷ್ಟು ಬಡ ವಿದ್ಯಾರ್ಥಿಗಳೇ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರವೇಶ ಶುಲ್ಕದಲ್ಲಿ ಶೇ 50ರಷ್ಟು ರಿಯಾಯ್ತಿ ನೀಡಲಾಗಿದೆ. 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈವರೆಗೆ ಉಚಿತ ಶಿಕ್ಷಣ ನೀಡಿದ್ದೇವೆ ಎನ್ನುತ್ತಾರೆ ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಸಂಸ್ಥಾಪಕ ಡಿ.ಬೋರಪ್ಪ.ಈ ವಿದ್ಯಾಸಂಸ್ಥೆಯಲ್ಲಿ  ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪಿಯು ಕಾಲೇಜು, ಪದವಿ ಕಾಲೇಜು (ಬಿಎ, ಬಿಕಾಂ), ಸ್ನಾತಕೋತ್ತರ ಪದವಿ (ಎಂ.ಎ) ಕಾಲೇಜುಗಳಿವೆ. ಸ್ನಾತಕೋತ್ತರ ಪದವಿಯಲ್ಲಿ ಇಂಗ್ಲಿಷ್ ಐಚ್ಛಿಕ, ಪದವಿಯಲ್ಲಿ ಕ್ರಿಮಿನಾಲಜಿ, ಮನಃಶಾಸ್ತ್ರ, ಕನ್ನಡ ಮತ್ತು ಇಂಗ್ಲಿಷ್ ಐಚ್ಛಿಕ ವಿಷಯಗಳನ್ನು ತೆಗೆದುಕೊಳ್ಳಬಹುದು. ಇದರ ಜೊತೆಗೆ ಜನರಲ್ ನರ್ಸಿಂಗ್ ವೃತ್ತಿಪರ ಪದವಿ ಕೂಡ ಲಭ್ಯವಿದೆ. ಯಾರಿಗೆ ಅವಕಾಶ?

‘ನಮ್ಮ ಸಂಸ್ಥೆಯಲ್ಲಿರುವ ಕೋರ್ಸ್‌ಗಳಿಗೆ ಸೇರಬಯಸುವವರು ಎಸ್ಸೆಸ್ಸೆಲ್ಸಿ ಮತ್ತು ಪಿಯು ಉತ್ತೀರ್ಣರಾದ, ಎಲ್ಲ ವರ್ಗದವರಿಗೂ ಅವಕಾಶ ನೀಡಲಾಗಿದೆ. ನಮ್ಮ ಸಂಸ್ಥೆಯಲ್ಲಿ ಸರ್ಕಾರಿ ನಿಯಮದ ಪ್ರಕಾರವೇ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದೇವೆ’ ಎನ್ನುತ್ತಾರೆ ಬೋರಪ್ಪ.‘ಪ್ರಸ್ತುತ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚು ಅಂಕ ಗಳಿಸಿರುವವರನ್ನು ಸೇರಿಸಿಕೊಂಡು, ಉತ್ತಮ ಫಲಿತಾಂಶ ನೀಡುವ ವಿಧಾನಕ್ಕೆ ಮೊರೆ ಹೋಗುತ್ತಿವೆ. ಆದರೆ, ನಮ್ಮ ಸಂಸ್ಥೆಯಲ್ಲಿ ಕೇವಲ ಸಾಧಾರಣ ಅಂಕಗಳನ್ನು ಪಡೆದು ಪಾಸಾದ ವಿದ್ಯಾರ್ಥಿಗಳಿಗೂ ಅವಕಾಶ ನೀಡುತ್ತಿದ್ದೇವೆ. ಕೇವಲ ಸರ್ಕಾರಿ ಪ್ರವೇಶ ಶುಲ್ಕ ಮಾತ್ರ ಪಡೆಯಲಾಗುತ್ತಿದೆ. ಈ ವರ್ಷ ಪಿಯು ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಸರಾಸರಿ ಶೇ  75ರಷ್ಟು ಫಲಿತಾಂಶ ಲಭ್ಯವಾಗಿದೆ’ ಎನ್ನುತ್ತಾರೆ ಅವರು.ಪ್ರವೇಶಾವಕಾಶ

ಪಿಯು ಮತ್ತು ಪದವಿಯ ಎಲ್ಲ ಕೋರ್ಸ್‌ಗಳಿಗೂ ಪ್ರವೇಶಕ್ಕೆ ಅವಕಾಶವಿದೆ. ಸ್ನಾತಕೋತ್ತರ ಪದವಿಗೂ ಅವಕಾಶಗಳು ಲಭ್ಯವಿವೆ. ಕಾಲೇಜು ಕಾರ್ಯಾಲಯವನ್ನು ಸಂಪರ್ಕಿಸಿ, ಕೋರ್ಸ್, ಶುಲ್ಕ ಮತ್ತಿತರ ಮಾಹಿತಿ ಪಡೆಯಬಹುದು. ಸರ್ಕಾರ ವಿಧಿಸಿರುವ ಗಡುವನ್ನು ಈ ಶಾಲೆ ಅನುಸರಿಸುತ್ತಿದೆ. ದಂಡ ಸಹಿತ, ದಂಡ ರಹಿತ ಶುಲ್ಕ ಪಾವತಿಗೂ ಈ ಸಂಸ್ಥೆ ಅವಕಾಶ ನೀಡುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.