ಸೋಮವಾರ, ಜನವರಿ 20, 2020
25 °C

ಎಸ್‌ಎಫ್‌ಐ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಸಮಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಾಪುರ: ವಿದ್ಯಾರ್ಥಿಗಳ ಹಕ್ಕು ಹಾಗೂ ಸಮಸ್ಯೆ­ಗಳ ಬಗ್ಗೆ ನಿರಂತರವಾದ ಹೋರಾಟ ಹಾಗೂ ಕಾರ್ಯ­ಕ್ರವನ್ನು ರೂಪಿಸುತ್ತಿರುವ ಭಾರತ ವಿದ್ಯಾರ್ಥಿ ಫೆಡರೇಶನ್ ಪ್ರಾರಂಭದಿಂದಲೂ ಅಭ್ಯಾಸ ಮತ್ತು ಹೋರಾಟ  ಧ್ಯೇಯದೊಂದಿಗೆ ವಿದ್ಯಾರ್ಥಿಗಳ ಸಮಸ್ಯೆ­ಗಳ ಪರಿಹಾರಕ್ಕಾಗಿ ಶ್ರಮಿಸಿದೆ ಎಂದು ಕುಂದಾಪುರ ಪುರಸಭಾಧ್ಯಕ್ಷೆ ಕಲಾವತಿ ಯು.ಎಸ್‌ ಹೇಳಿದರು.ಕುಂದಾಪುರ ತಾಲ್ಲೂಕು ಎಸ್‌ಎಫ್‌ಐ ಆಶ್ರಯ­ದಲ್ಲಿ ನಗರದ ವ್ಯಾಸರಾಜ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಬೆರಗು –2013’ರ ಸಮಾರೋಪದಲ್ಲಿ ಅವರು ಮಾತನಾಡಿದರು.ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಗಳನ್ನು ಬಳಸಿಕೊಂಡು ಆರೋಗ್ಯಕರ ಹಾಗೂ ಸೃಜನ­ಶೀಲತೆಯ ಮನರಂಜನೆ ಒದಗಿಸಲು ಸಾಧ್ಯವಿದೆ ಎಂಬುದನ್ನು ಇಲ್ಲಿನ ಎಸ್‌ಎಫ್‌ಐ ಬೆರಗು –2013 ಕಾರ್ಯಕ್ರಮವನ್ನು ಸಂಘಟಿಸುವ ಮೂಲಕ ತೋರಿಸಿದೆ ಎಂದರು. ಸಮಾರೋಪದ ಅಧ್ಯಕ್ಷತೆ­ಯನ್ನು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ಬಿ.ಎಂ.­ನಾಸೀರ್ ವಹಿಸಿ­ದ್ದರು. ಉದ್ಯಮಿ ದತ್ತಾನಂದ ಜಿ. ಗಂಗೊಳ್ಳಿ ಬಹು­ಮಾನ ವಿತರಿಸಿದರು.ಉಡುಪಿ ವಿಭಾಗದ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುರು­ದತ್‌ ಹಾಗೂ ಡಿವೈಎಫ್‌ಐನ ಮುಖಂಡ ರಾಜೇಶ್ ವಡೇರಹೋಬಳಿ ಅತಿಥಿ­ಗಳಾ­ಗಿದ್ದರು. ಎಸ್‌ಎಫ್‌ಐನ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್‌ದಾಸ್, ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ, ಆಫ್ರೀನ್ ಬೇಗಂ, ಮೀನಾಕ್ಷಿ ವೇದಿಕೆಯಲ್ಲಿದ್ದರು.ಎಸ್‌ಎಂಎಸ್ ಕಾಲೇಜು ಬ್ರಹ್ಮಾವರ ತಂಡ ಪ್ರಥಮ ಪ್ರಶಸ್ತಿ ಪಡೆಯಿತು. ವೆಂಕಟರಮಣ ಕಾಲೇಜು ತಂಡ ದ್ವಿತೀಯ ಪ್ರಶಸ್ತಿ, ಬಿದ್ಕಲ್‌ಕಟ್ಟೆ ಕಾಲೇಜು ತೃತೀಯ ಬೆರಗು–2013 ಪ್ರಶಸ್ತಿ ಪಡೆದುಕೊಂಡಿತು. ಬಸ್ರೂರು ಶಾರದಾ ಕಾಲೇಜು ಉತ್ತಮ ನಿರೂಪಕ ಪ್ರಶಸ್ತಿಯನ್ನು ತೆಕ್ಕಟ್ಟೆ ಹಾಗೂ ಕಂಬದಕೋಣೆ ಕಾಲೇಜು ತಂಡಗಳು ಸಮಾಧಾನಕರ ಪ್ರಶಸ್ತಿಗಳನ್ನು ಪಡೆದು ಕೊಂಡವು.

ಸುರೇಶ ಕಲ್ಲಾಗರ ನಿರೂಪಿಸಿದರು, ಅಕ್ಷಯ ವಂದಿಸಿದರು.

ಪ್ರತಿಕ್ರಿಯಿಸಿ (+)