ಬೆಂಗಳೂರು: `ಎಸ್ಬಿಐ~ ಜನರಲ್ ಇನ್ಶುರನ್ಸ್ನ ಬೆಂಗಳೂರು ಶಾಖೆಯು, 2011ನೇ ಸಾಲಿನಲ್ಲಿ ಸುಮಾರು 10 ಸಾವಿರ ಗ್ರಾಹಕರನ್ನು ಪಡೆದುಕೊಂಡಿದ್ದು, ಸಣ್ಣ, ಮಧ್ಯಮ, ಬೃಹತ್ ಮತ್ತು ಚಿಲ್ಲರೆ ಉದ್ಯಮಗಳಿಂದ ರೂ10 ಕೋಟಿ ಗಳಷ್ಟು ವಿಮಾ ಆದಾಯ ಗಳಿಸಿದೆ ಎಂದು ಕಂಪೆನಿ ಪ್ರಕಟಣೆ ತಿಳಿಸಿದೆ.

`ಎಸ್ಬಿಐ~ ಜನರಲ್ ಇನ್ಶುರನ್ಸ್ ಬೆಂಗಳೂರಿನಲ್ಲಿ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಸುಮಾರು 3,600 ಸಣ್ಣ ಉದ್ದಿಮೆಗಳು ಮತ್ತು ಸುಮಾರು 360 ಮಧ್ಯಮ ಹಾಗೂ ಬೃಹತ್ ಉದ್ಯಮಗಳ ಆಸ್ತಿಗಳಿಗೆ ವಿಮಾ ನೆರವು ಒದಗಿಸಲಾಗಿದೆ ಎಂದು ಶಾಖಾ ಮುಖ್ಯ ವಿಕ್ರಯಾಧಿಕಾರಿ ಶಿವಾನಂದ ಗುಮಾಸ್ತೆ ತಿಳಿಸಿದ್ದಾರೆ.

`ಎಸ್ಬಿಐ~ನ ಸುಮಾರು 180 ಶಾಖೆಗಳ ಮೂಲಕ ರಾಜ್ಯದಲ್ಲಿ ವಿಮೆ ಮಾರಾಟ ಮಾಡಲಾಗಿದೆ. ಚಿಲ್ಲರೆ ಮತ್ತು ಮಧ್ಯಮ ಉದ್ಯಮಗಳ ವಿಮೆಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. ಸದ್ಯ ಬೆಂಗಳೂರು ಶಾಖೆಯು 150 ಸಕ್ರಿಯ ಏಜೆಂಟರನ್ನು ಹೊಂದಿದ್ದು, ಈ ಸಂಖ್ಯೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.