ಗುರುವಾರ , ಜೂನ್ 17, 2021
26 °C
ರಾಯಚೂರು ಕ್ಷೇತ್ರಕ್ಕೆ ಸೋಮಶೇಖರ ಅಭ್ಯರ್ಥಿ: ರಾಧಾಕೃಷ್ಣ

ಎಸ್‌ಯುಸಿಐ ಪಕ್ಷದಿಂದ 6 ಕಡೆ ಸ್ಪರ್ಧೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಎಸ್‌ಯುಸಿಐ ಪಕ್ಷವು ಈ ಲೋಕಸಭಾ ಚುನಾವಣೆಗೆ ಕರ್ನಾ­ಟಕದಲ್ಲಿ 6 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಈಗಾಗಲೇ ಅಭ್ಯರ್ಥಿಗಳ ಸಿದ್ಧಪಡಿಸಲಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರಕ್ಕೆ  ಕೆ. ಸೋಮ­ಶೇಖರ ಸ್ಪರ್ಧಿಸಲಿದ್ದಾರೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಹಾಗೂ  ಕೇಂದ್ರ ಸಮಿತಿ ಸದಸ್ಯರಾದ ಕೆ. ರಾಧಾಕೃಷ್ಣ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿ­ಯಲ್ಲಿ ಮಾತನಾಡಿ, ದೇಶದಾದ್ಯಂತ 83 ಕಡೆ ಹಾಗೂ ಕರ್ನಾಟಕದಲ್ಲಿ 6 ಕಡೆಗಳಲ್ಲಿ ಎಸ್‌ಯುಸಿಐ ಅಭ್ಯರ್ಥಿ­ಗಳು ಸ್ಪರ್ಧಿಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಎಂ. ಉಮಾದೇವಿ, ಬೆಂಗಳೂರು ಕೇಂದ್ರ ಕ್ಷೇತ್ರಕ್ಕೆ  ಜಾಹೀದಾ ಶಿರಿನ್, ಧಾರವಾಡ ಕ್ಷೇತ್ರಕ್ಕೆ ಗಂಗಾಧರ ಬಡಿಗೇರ, ಗುಲ್ಬರ್ಗ ಕ್ಷೇತ್ರಕ್ಕೆ ಎಸ್.ಎಂ. ಶರ್ಮಾ, ಬಳ್ಳಾರಿ ಕ್ಷೇತ್ರಕ್ಕೆ ಎ. ದೇವದಾಸ ಅಭ್ಯರ್ಥಿಗಳಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.ಜನ ಮತ್ತೊಂದು ಚುನಾವಣೆಗೆ ಮುಖಾಮುಖಿಯಾಗುತ್ತಿದ್ದಾರೆ. ಎರಡು ಪ್ರಮುಖ ಬಂಡವಾಳಶಾಹಿ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಅಲ್ಲದೇ ಪ್ರಾದೇಶಿಕ ಬಂಡವಾಳ ಶಾಹಿ ಪಕ್ಷಗಳು ಮತ್ತು ಸಿ.ಪಿ.ಐ, ಸಿ.ಪಿ.ಎಂ ನಂಥ ಮಿಥ್ಯ ಕಮ್ಯುನಿಸ್ಟ್ ಪಕ್ಷಗಳೂ ಜನತೆಗೆ ವಂಚನೆ ಮಾಡಿಕೊಂಡು ಬಂದಿರುವ ಪಕ್ಷಗಳಾಗಿವೆ ಎಂದು ಆರೋಪಿಸಿದರು.ಈ ಚುನಾವಣೆಯಲ್ಲಿ ಜನರೇ ತಮ್ಮ ಅಸ್ತ್ರ ಹಿಡಿದು ಕ್ರಾಂತಿ ಮೊಳಗಿಸಬೇಕು. ಇಂಥ ಪಕ್ಷಗಳಿಗೆ ತಕ್ಕ ಉತ್ತರ ನೀಡ­ಬೇಕು. ಬಂಡವಾಳಶಾಹಿ ಶೋಷಕ ವ್ಯವಸ್ಥೆಯಿಂದಲೇ ಉದ್ಭವ­ವಾ­ಗುತ್ತಿರುವ ಎಲ್ಲ ಸಮಸ್ಯೆಗಳಿಗೆ ಬಂಡವಾಳಶಾಹಿ ವಿರೋಧಿ ಸಮಾಜ­ವಾದಿ ಕ್ರಾಂತಿಯನ್ನು ನೆರವೇರಿಸು­ವುದುರ ಮೂಲಕ ಮಾತ್ರ ಪರಿಹಾರ ಸಾಧ್ಯ ಎಂಬುದು ತಮ್ಮ ಪಕ್ಷದ ಬಲವಾದ ನಂಬಿಕೆಯಾಗಿದೆ ಎಂದು ಹೇಳಿದರು.ಆಮ್‌ ಆದ್ಮಿ ಪಕ್ಷದಿಂದಲೇ ಸಮಸ್ಯೆ ಪರಿಹಾರ ಆಗಲ್ಲ: ಈಚೆಗೆ, ಸ್ಥಾಪನೆ­ಯಾಗಿರುವ ಆಮ್ ಆದ್ಮಿ ಪಕ್ಷವು ಬಂಡವಾಳಶಾಹಿಯ ವಿರೋಧಿ ಪಕ್ಷವಲ್ಲ. ಇದನ್ನು ಆ ಪಕ್ಷದ ಮುಖಂಡ­ರಾಗಿರುವ ಕೇಜ್ರಿವಾಲ್ ಈಚೆಗೆ ಪತ್ರಿಕಾಗೋಷ್ಠಿಯಲ್ಲಿಯೇ ಸ್ಪಷ್ಟಪ­ಡಿಸಿದ್ದಾರೆ. ತಮ್ಮ ಪಕ್ಷಕ್ಕೆ ಖಾಸಗೀಕರಣ ಪ್ರಕ್ರಿಯೆಯಲ್ಲಿ ವಿಶ್ವಾಸ­ವಿದೆ ಎಂದು ಘೋಷಿಸಿದ್ದಾರೆ. ಆಮ್ ಆದ್ಮಿ ಪಕ್ಷದಿಂದಲೇ ಎಲ್ಲ ಸಮಸ್ಯೆ ಪರಿಹಾರ ಆಗುವುದಿಲ್ಲ ಎಂದು ತಿಳಿಸಿದರು.ಅಭ್ಯರ್ಥಿ ಕೆ ಸೋಮಶೇಖರ ಯಾದಗಿರಿ, ಎಸ್‌ಯುಸಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ.ಟಿ.ಎಸ್ ಸುನೀತ್‌ಕುಮಾರ, ಅಪರ್ಣಾ ಬಿ.ಆರ್, ಎನ್.ಎಸ್ ವಿರೇಶ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.