ಭಾನುವಾರ, ಮೇ 22, 2022
29 °C

ಎ ಗುಂಪಿನಲ್ಲಿ ಇಂದು ಪೈಪೋಟಿ ಸೆಮಿ ಅದೃಷ್ಟ ಯಾರಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ `ಎ~ ಗುಂಪಿನಿಂದ ಸೆಮಿಫೈನಲ್ ಪ್ರವೇಶಿಸುವ ಎರಡು ತಂಡಗಳು ಯಾವುವು? ಕ್ರಿಕೆಟ್ ಪ್ರಿಯರನ್ನು ಕಾಡುತ್ತಿರುವ ಪ್ರಶ್ನೆ ಇದು. `ಎ~ ಗುಂಪಿನ ಕೊನೆಯ ಎರಡು ಲೀಗ್ ಪಂದ್ಯಗಳು ಮಂಗಳವಾರ ನಡೆಯಲಿವೆ. ಆದರೆ ಗುಂಪಿನಲ್ಲಿರುವ ಎಲ್ಲ ಐದು ತಂಡಗಳು ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ!ಚಿದಂಬರಂ ಕ್ರೀಡಾಂಗಣದಲ್ಲಿ ಮಂಗಳವಾರ ಸಂಜೆ ನಡೆಯುವ ಪಂದ್ಯದಲ್ಲಿ ಕೇಪ್ ಕೋಬ್ರಾಸ್ ಮತ್ತು ಟ್ರಿನಿಡಾಡ್ ಅಂಡ್ ಟೊಬಾಗೊ ಎದುರಾಗಲಿವೆ. ರಾತ್ರಿ ಚೆನ್ನೈ ಹಾಗೂ ನ್ಯೂ ಸೌತ್ ವೇಲ್ಸ್ ಪೈಪೋಟಿ ನಡೆಸಲಿವೆ. `ಎ~ ಗುಂಪಿನಲ್ಲಿರುವ ಮತ್ತೊಂದು ತಂಡ ಮುಂಬೈ ಇಂಡಿಯನ್ಸ್.ಹರಭಜನ್ ಸಿಂಗ್ ನೇತೃತ್ವದ ಮುಂಬೈ ಲೀಗ್ ವ್ಯವಹಾರ ಕೊನೆಗೊಳಿಸಿದ್ದು, ಒಟ್ಟು ಐದು           ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೆ ಈ ತಂಡದ ರನ್‌ರೇಟ್ (-0.280) ಚೆನ್ನಾಗಿಲ್ಲ. ಮೂರು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿರುವ ನ್ಯೂ ಸೌತ್ ವೆಲ್ಸ್ (ರನ್‌ರೇಟ್            + 0.038) ಎರಡನೇ ಸ್ಥಾನದಲ್ಲಿದೆ.ಟ್ರಿನಿಡಾಡ್ ಅಂಡ್ ಟೊಬಾಗೊ ಮತ್ತು ಚೆನ್ನೈ ತಂಡ ಮೂರು ಪಂದ್ಯಗಳಿಂದ ತಲಾ ಎರಡು ಪಾಯಿಂಟ್ ಪಡೆದಿವೆ. ಅಂತಿಮ ಸ್ಥಾನದಲ್ಲಿದ್ದರೂ ಚೆನ್ನೈ ತಂಡಕ್ಕೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದೆ. ಅದಕ್ಕಾಗಿ ವೇಲ್ಸ್ ವಿರುದ್ಧ ದೊಡ್ಡ ಅಂತರದ ಗೆಲುವು ಪಡೆಯಬೇಕು. ಅದೇ ರೀತಿ ದಿನದ ಮತ್ತೊಂದು ಪಂದ್ಯದಲ್ಲಿ ಕೇಪ್ ಕೋಬ್ರಾಸ್ ಸೋಲು ಅನುಭವಿಸಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.