ಮಂಗಳವಾರ, ಮೇ 17, 2022
23 °C

ಏಡ್ಸ್ ಹತ್ತಿಕ್ಕಲು ವಂಶವಾಹಿ ಚಿಕಿತ್ಸೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಏಡ್ಸ್ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಬಲ್ಲ ವಿನೂತನ ವಂಶವಾಹಿ ಚಿಕಿತ್ಸಾ ಪದ್ಧತಿ ಕಂಡುಹಿಡಿದಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಇಲಿಗಳ ಮೇಲೆ ನಡೆಸಿದ ಈ ಸರಣಿ ಪ್ರಯೋಗಗಳು ಅತ್ಯಂತ ಪರಿಣಾಮಕಾರಿ ಫಲಿತಾಂಶ ನೀಡಿವೆ. ಈ ವಿಧಾನದ ಮೂಲಕ ಸೋಂಕು ಪೀಡಿತ ಇಲಿಗಳ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಲಾಯಿತು. ಕಟ್ಟಕಡೆಗೆ ಇಲಿಗಳ ನಿರೋಧ ಶಕ್ತಿ ಎಷ್ಟರ ಮಟ್ಟಿಗೆ ಹೆಚ್ಚಾಯಿತೆಂದರೆ ಎಚ್‌ಐವಿ ವೈರಸ್‌ಗಳು ದೇಹದಿಂದ ಸಂಪೂರ್ಣ ನಿರ್ಮೂಲನೆಯಾದವು ಎಂದು ಸಂಶೋಧಕರು ವಿವರಿಸಿದ್ದಾರೆ.

ಸಾಮಾನ್ಯವಾಗಿ ಎಚ್‌ಐವಿ ಸೋಂಕು ವಿಪರೀತವಾದಾಗ ‘ಎಸ್‌ಒಸಿಎಸ್- 3’ ಎಂಬ ವಂಶವಾಹಿ ವಿಪರೀತ ಕ್ರಿಯಾಶೀಲವಾಗಿ ಪ್ರತಿರೋಧ ಶಕ್ತಿಯನ್ನು ತಗ್ಗಿಸುತ್ತದೆ. ಹೊಸ ಚಿಕಿತ್ಸಾ ಪದ್ಧತಿಯಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳಲಾಗಿದೆ. ದೇಹದಲ್ಲಿನ ಐಲ್-17 ಎಂಬ ಚೋದಕದ (ಹಾರ್ಮೋನ್) ಪ್ರಮಾಣ ಹೆಚ್ಚಾಗುವಂತೆ ಉತ್ತೇಜಿಸಿದಾಗ ‘ಎಸ್‌ಒಸಿಎಸ್-3’ ವಂಶವಾಹಿಯ ಕ್ರಿಯಾಶೀಲತೆ ತಗ್ಗಿ ಎಚ್‌ಐವಿ ನಿರ್ಮೂಲನೆಯಾಗುವುದು ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ಮತ್ತು ಕೆನಡಾ ಸರ್ಕಾರಗಳ ಪ್ರಾಯೋಜಕತ್ವದಲ್ಲಿ ಈ ಕುರಿತು ಅಧ್ಯಯನ ನಡೆಸಿದ ಜಾಗತಿಕ ವಿಜ್ಞಾನಿಗಳ ತಂಡ ತಮ್ಮ ಆವಿಷ್ಕಾರವನ್ನು ಮಹತ್ವದ ಮೈಲಿಗಲ್ಲು ಎಂದು ಹೇಳಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.