ಏರ್‌ಟೆಲ್: ತ್ರೀಜಿ ಸೇವೆಗೆ ಚಾಲನೆ

7

ಏರ್‌ಟೆಲ್: ತ್ರೀಜಿ ಸೇವೆಗೆ ಚಾಲನೆ

Published:
Updated:

ಬೆಂಗಳೂರು: ದೇಶದ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆ ಏರ್‌ಟೆಲ್, ರಾಜ್ಯದಲ್ಲಿ ಈಗ ಮೂರನೇ ತಲೆಮಾರಿನ ಮೊಬೈಲ್ ಸೇವೆ (ತ್ರೀಜಿ) ಆರಂಭಿಸಿದೆ.‘ತ್ರೀಜಿ’ ಸೇವೆಯಲ್ಲಿ ಗ್ರಾಹಕರು ಅತಿ ವೇಗದ ಬಹುಮಾಧ್ಯಮ, ಬ್ರಾಡ್‌ಬ್ಯಾಂಡ್, ವಿಡಿಯೊ ಸಂವಾದ, ಟೆಲಿವಿಷನ್ ಕಾರ್ಯಕ್ರಮಗಳ ವೀಕ್ಷಣೆ, ಸಮಾರಂಭಗಳ ನೇರ ಪ್ರಸಾರ ಮತ್ತಿತರ ಸೌಲಭ್ಯಗಳನ್ನು ಪಡೆಯಬಹುದು.

 ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ‘ತ್ರೀಜಿ’ ಸೌಲಭ್ಯದ ಬಳಕೆ ಶುಲ್ಕ ನಿಗದಿಪಡಿಸಲಾಗಿದೆ ಎಂದು ಭಾರ್ತಿ ಏರ್‌ಟೆಲ್‌ನ ದಕ್ಷಿಣ ವಲಯದ ಮುಖ್ಯಸ್ಥ ವಿನೀತ್ ತನೇಜಾ  ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ತ್ರೀಜಿ’ ಸೌಲಭ್ಯ ಇರುವ ಮೊಬೈಲ್ ಬಳಕೆದಾರರು ಮಂಗಳವಾರದಿಂದ ಈ ಸೌಲಭ್ಯ ಪಡೆದುಕೊಳ್ಳಬಹುದು. ಏರ್‌ಟೆಲ್ ಗ್ರಾಹಕರು  ತಮ್ಮ ಮೊಬೈಲ್‌ನಿಂದ    3g help ಎಸ್‌ಎಂಎಸ್ ಅನ್ನು 121 ಸಂಖ್ಯೆಗೆ ಕಳಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry