ನವದೆಹಲಿ (ಐಎಎನ್ಎಸ್): ಐದು ಸಲ ವಿಶ್ವ ಚಾಂಪಿಯನ್ ಆಗಿರುವ ಸಿ.ಎಂ. ಮೇರಿ ಕೋಮ್ ಮಾರ್ಚ್ 16ರಿಂದ 26ರ ವರೆಗೆ ಮಂಗೋಲಿಯಾದಲ್ಲಿ ನಡೆಯಲಿರುವ ಏಷ್ಯಾ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಷಿಪ್ಗೆ ಭಾರತ ತಂಡದ ಸಾರಥ್ಯ ವಹಿಸಲಿದ್ದಾರೆ.

ಏಷ್ಯನ್ ಚಾಂಪಿಯನ್ನಲ್ಲಿ ನಾಲ್ಕು ಸಲ ಪದಕ ಜಯಿಸಿರುವ ಎಲ್. ಸರಿತಾ ದೇವಿ ಸೇರಿದಂತೆ ಒಟ್ಟು 10 ಸ್ಪರ್ಧಿಗಳನ್ನು ಒಳಗೊಂಡ ಭಾರತ ತಂಡವನ್ನು ಮೇರಿ ಮುನ್ನಡೆಸಲಿದ್ದಾರೆ.

ಲಂಡನ್ನಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಈ ಚಾಂಪಿಯನ್ಷಿಪ್ ಮುಖ್ಯವಾಗಿದೆ. ಅಷ್ಟೇ ಅಲ್ಲ ಮೇ 9ರಿಂದ 20ರ ವರೆಗೆ ಚೀನಾದಲ್ಲಿ ಎಐಬಿಎ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ ಆಯೋಜನೆಯಾಗಿದೆ. ಇದರ ಮುನ್ನವೇ ಏಷ್ಯಾ ಬಾಕ್ಸಿಂಗ್ ಚಾಂಪಿಯನ್ಷಿಪ್ ನಡೆಯಲಿರುವದು ಇದರ ಮಹತ್ವ ಹೆಚ್ಚಿಸಿದೆ.

`ಈ ಚಾಂಪಿಯನ್ಷಿಪ್ ನನ್ನ ಪಾಲಿಗೆ ಅಗ್ನಿ ಪರೀಕ್ಷೆ. 2010ರ ಏಷ್ಯನ್ ಕ್ರೀಡಾಕೂಟದ ನಂತರ 51 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ದೊಡ್ಡ ಟೂರ್ನಿ ಇದಾಗಿದೆ. ಸಾಕಷ್ಟು ಪ್ರತಿಭಾವಂತ ಮಹಿಳಾ ಬಾಕ್ಸರ್ಗಳು ಇಲ್ಲಿ ಪೈಪೋಟಿ ಒಡ್ಡುತ್ತಾರೆ. ನನ್ನ ಸಾಮರ್ಥ್ಯ ತೋರಿಸಲು ಇದು ಉತ್ತಮ ವೇದಿಕೆ~ ಎಂದು ಮೇರಿ ಹೇಳಿದರು.
2001ರಿಂದಲೂಏಷ್ಯಾ ಬಾಕ್ಸಿಂಗ್ ಚಾಂಪಿಯನ್ಷಿಪ್ನಲ್ಲಿ ಭಾರತದ ಸ್ಪರ್ಧಿಗಳು ಪ್ರಾಬಲ್ಯ ಮರೆದಿದ್ದಾರೆ. ಈ ಸಲವೂ ಅದೇ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗುವ ವಿಶ್ವಾಸವನ್ನು ಭಾರತದ ಬಾಕ್ಸರ್ಗಳು ವ್ಯಕ್ತಪಡಿಸಿದ್ದಾರೆ.

ತಂಡ ಇಂತಿದೆ: ಪಿಂಕಿ ಜಾಂಗ್ರಾ (48 ಕೆ.ಜಿ. ವಿಭಾಗ), ಎಂ.ಸಿ. ಮೇರಿ ಕೋಮ್ (51 ಕೆ.ಜಿ), ಸೋನಿಯಾ ಲತಾರ್ (54 ಕೆ.ಜಿ), ಕೆ. ಮಂದಾಕಿನಿ ಚಾನು (57 ಕೆ.ಜಿ), ಎಲ್. ಸರಿತಾ ದೇವಿ (60 ಕೆ.ಜಿ), ಮೀನಾ ರಾಣಿ (64 ಕೆ.ಜಿ.), ಎಸ್. ಮೋನಿಕಾ (69 ಕೆ.ಜಿ), ಪೂಜಾ ರಾಣಿ (75 ಕೆ.ಜಿ.), ಭಾಗ್ಯಭತಿ ಕಚಾರಿ (81 ಕೆ.ಜಿ), ಕವಿತಾ ಚಾಹಲ್ (+81). ಪಿ.ಕೆ. ಮುರಳೀಧರನ್ ರಾಜಾ (ಮ್ಯಾನೇಜರ್), ಅನೂಪ್ ಕುಮಾರ್ (ಮುಖ್ಯ ಕೋಚ್), ಡಿ. ಚಂದ್ರಲಾಲ್, ಹೆಮ್ಲಟ್ ನೇಗಿ ಹಾಗೂ ಗೀತಾ ಚಾನು (ಸಹಾಯಕ ಕೋಚ್), ಎಸ್. ಸಂಜೊಗೀತಾ (ವೈದ್ಯರು) ಮತ್ತು ಹೇಮಾ ವಿಲೆಚಾ (ಫಿಸಿಯೊ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.