ಭಾನುವಾರ, ಜನವರಿ 26, 2020
28 °C

ಐಎಎಫ್ ಅಧಿಕಾರಿಗೆ ಚೀನಾ ವೀಸಾ ನಿರಾಕರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಬೀಜಿಂಗ್ ಪ್ರವಾಸ ಕೈಗೊಳ್ಳಲಿರುವ ಅರುಣಾಚಲ ಪ್ರದೇಶದ ಐಎಎಫ್ ಅಧಿಕಾರಿಯೊಬ್ಬರಿಗೆ ಚೀನಾ ವೀಸಾ ನಿರಾಕರಿಸಿದೆ.ಗ್ರೂಪ್ ಕ್ಯಾಪ್ಟನ್ ಪಾಂಗಿಂಗ್ ಅವರಿಗೆ ಚೀನಾ ರಾಯಭಾರ ಕಚೇರಿಯು ಕಾರಣ ನೀಡದೇ ವೀಸಾ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.ದ್ವಿಪಕ್ಷೀಯ ರಕ್ಷಣಾ ವಿನಿಮಯ ಕಾರ್ಯಕ್ರಮದಡಿ ಇದೇ 10ರಿಂದ ರಕ್ಷಣಾ ಸಿಬ್ಬಂದಿಯ ತಂಡ ಬೀಜಿಂಗ್ ಪ್ರವಾಸ ಕೈಗೊಳ್ಳಲಿದ್ದು, ಇದರಲ್ಲಿ ಪಾಂಗಿಂಗ್ ಕೂಡ ಇದ್ದರು.ಭಾರತದ ಪ್ರತಿರೋಧದ ಮಧ್ಯೆಯೂ ಚೀನಾ ಪದೇಪದೇ ಅರುಣಾಚಲ ಪ್ರದೇಶದವರಿಗೆ ವೀಸಾ ನಿರಾಕರಿಸುತ್ತಾ ಬಂದಿದೆ.

ಪ್ರತಿಕ್ರಿಯಿಸಿ (+)