ಶನಿವಾರ, ಮಾರ್ಚ್ 6, 2021
30 °C

ಐಐಎಂಬಿಯಲ್ಲಿ ‘ಪ್ರಯಾಸ್‌ ದಿನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಐಎಂಬಿಯಲ್ಲಿ ‘ಪ್ರಯಾಸ್‌ ದಿನ’

ಬೆಂಗಳೂರು: ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ವತಿಯಿಂದ ಜ. 24ರಂದು ‘ಪ್ರಯಾಸ್‌ ದಿನ’ ಆಚರಿಸಲಾಗುತ್ತದೆ.



ಈ ದಿನಾಚರಣೆ ಅಂಗವಾಗಿ ಅಂಗವಿಕಲರ ಪ್ರತಿಭೆ ಅನಾವರಣಕ್ಕೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಐಐಎಂಬಿಯ ಸ್ನಾತಕೋತ್ತರ ಪದವಿ ಕೋರ್ಸ್‌ನ ವಿದ್ಯಾರ್ಥಿಗಳು 2009ರಲ್ಲಿ ಮೊದಲ ಬಾರಿಗೆ ‘ಪ್ರಯಾಸ್‌ ದಿನ’ ಸಂಘಟಿಸಿದ್ದರು. ಅಲ್ಲದೆ, ಅಂಗವಿಕಲರಿಗಾಗಿ ಅನೇಕ ಕಾರ್ಯಕ್ರಮ ರೂಪಿಸಿದ್ದರು. ಕೃತಕ ಕಾಲು ಜೋಡಣೆ, ನೇತ್ರ ಶಸ್ತ್ರಚಿಕಿತ್ಸೆ ಅವುಗಳಲ್ಲಿ ಮುಖ್ಯವಾದುವು.



ಆಗಿನಿಂದಲೂ ಇದು ಐಐಎಂಬಿಯ ವಾರ್ಷಿಕ ಕಾರ್ಯಕ್ರಮದ ಭಾಗವಾಗಿದೆ. ಈ ಸಲದ ದಿನಾಚರಣೆಯಲ್ಲಿ ಬೆನ್ನುಮೂಳೆ ಗಾಯದ ಕುರಿತು ಜಾಗೃತಿ ಕಾರ್ಯಕ್ರಮವನ್ನೂ ಸಂಘಟಿಸಲಾಗಿದೆ. ಜಾಗೃತಿ ಓಟವೂ ನಡೆಯಲಿದೆ. ಅಂಗವಿಕಲ ಅಥ್ಲೀಟ್‌ ಮಾಲತಿ ಹೊಳ್ಳ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.