ಸೋಮವಾರ, ಮೇ 23, 2022
24 °C

ಐಒಬಿ: ಅಮೃತ ಮಹೋತ್ಸವಕ್ಕೆ ಇಂದು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಚೆನ್ನೈ ಮೂಲದ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ (ಐಒಬಿ) ಅಮೃತ ಮಹೋತ್ಸವ ವರ್ಷಾಚರಣೆಗೆ   ಗುರುವಾರ (ನಾಳೆ) ಚಾಲನೆ ನೀಡಲಾಗುವುದು.ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಮೃತ ಮಹೋತ್ಸವ  ವರ್ಷಾಚರಣೆ ಉದ್ಘಾಟಿಸಲಿದ್ದಾರೆ. ಬ್ಯಾಂಕ್ ಅಸ್ತಿತ್ವಕ್ಕೆ ಬಂದು 75 ವರ್ಷಗಳನ್ನು ಪೂರ್ಣಗೊಳಿಸಿದ ಸ್ಮರಣಾರ್ಥ, ಬ್ಯಾಂಕ್ 75 ಹೊಸ ಶಾಖೆ ಮತ್ತು 75 ಎಟಿಎಂಗಳನ್ನು ಆರಂಭಿಸಲಿದೆ. ಬೆಂಗಳೂರು ಹೊರವಲಯದ ಬಿಡದಿ, ಜಿಗಣಿ, ಸುಂಕದಕಟ್ಟೆ, ಬಿದರಿಕಲ್ಲು ಮತ್ತು ರಾಜ್ಯದ ಇತರ ಪಟ್ಟಣಗಳಾದ ದೇವದುರ್ಗ, ಅಂಕೋಲ, ಮುಧೋಳ ಮತ್ತು ಲಿಂಗಸುಗೂರಿನಲ್ಲಿ ಹೊಸ ಶಾಖೆಗಳನ್ನು ತೆರೆಯಲಾಗುವುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.