ನವದೆಹಲಿ (ಪಿಟಿಐ): ಅಮೆರಿಕ ಮೂಲದ ಐಗೇಟ್ (ಈಗ ಐಗೇಟ್ ಪಟ್ನಿ) ಕಂಪನಿ 2012ರ ಮಾರ್ಚ್ 31ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕ ಅವಧಿಯಲ್ಲಿ ರೂ123.70 ಕೋಟಿ(2.41 ಕೋಟಿ ಡಾಲರ್) ನಿವ್ವಳ ಲಾಭ ದಾಖಲಿಸಿದೆ.

ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪನಿಯ ನಿವ್ವಳ ಲಾಭ ಶೇ. 35ರಷ್ಟು ಏರಿಕೆ ಕಂಡಿದೆ. 2012ರ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯ ವರಮಾನ ಮೂರು ಪಟ್ಟು ಹೆಚ್ಚಳವಾಗಿದ್ದು, ರೂ1350 ಕೋಟಿಗೆ ಏರಿದೆ. ಆದರೆ, ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಕಂಪನಿಯ ಆದಾಯ ಗಳಿಕೆಯಲ್ಲಿ ಶೇ. 1.64ರಷ್ಟು ಇಳಿಯಾಗಿದೆ. 2011ರ ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿ ರೂ1373 ಕೋಟಿ ಆದಾಯ ದಾಖಲಿಸಿತ್ತು.

`ನಿವ್ವಳ ಲಾಭ ಹೆಚ್ಚಿದರೂ ಒಟ್ಟು ವರಮಾನ ಇಳಿಕೆಯಾಗಿದೆ. ಸದ್ಯ ನಮ್ಮ ಮುಂದಿರುವುದು ಸವಾಲಿನ ವರ್ಷ. ಮುಂಬರುವ ತ್ರೈಮಾಸಿಕ ಅವಧಿಗಳಲ್ಲಿ ವರಮಾನ ಮತ್ತೆ ಮರಳಿ ಹಾದಿಗೆ ಬರುವ ನಿರೀಕ್ಷೆ ಇದೆ~ ಎಂದು ಐಗೇಟ್ ಪಟ್ನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಣೀಶ್ ಮೂರ್ತಿ ಹೇಳಿದ್ದಾರೆ.

ಕಳೆದ ವರ್ಷ ಭಾರತದ ಐ.ಟಿ ಕ್ಷೇತ್ರದ ಪಟ್ನಿ ಕಂಪ್ಯೂಟರ್ಸ್ ಕಂಪನಿಯನ್ನು ಐಗೇಟ್ ಸ್ವಾಧೀನಪಡಿಸಿಕೊಂಡಿತ್ತು.
ಇನ್ಫೋಸಿಸ್ ಮತ್ತಿತರ ಐಟಿ ಕಂಪನಿಗಳ ಹಣಕಾಸು ಫಲಿತಾಂಶ ಹೊರಬೀಳುತ್ತಿರುವ ಬೆನ್ನಲ್ಲೇ, `ದೇಶದ ಐ.ಟಿ ವಲಯ 2012-13ನೇ ಹಣಕಾಸು ವರ್ಷದಲ್ಲಿ ಶೇ. 11ರಿಂದ 14ರಷ್ಟು ಮಾತ್ರ ಪ್ರಗತಿ ಸಾಧಿಸಬಹುದು~ ಎಂದು `ನಾಸ್ಕಾಂ~ ಅಂದಾಜು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.