ಶುಕ್ರವಾರ, ಜೂನ್ 18, 2021
22 °C

ಐಟಿಎಫ್ ಟೆನಿಸ್: ಕೈರಾ ಶುಭಾರಂಭ; ಸ್ಫೂರ್ತಿಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಟಿಎಫ್ ಟೆನಿಸ್: ಕೈರಾ ಶುಭಾರಂಭ; ಸ್ಫೂರ್ತಿಗೆ ಸೋಲು

ಬೆಂಗಳೂರು: ಭಾರತದ ಕೈರಾ ಶ್ರಫ್ ಇಲ್ಲಿ ನಡೆಯುತ್ತಿರುವ ಕ್ಯೂನೆಟ್ ಐಟಿಎಫ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಶುಭಾರಂಭ ಮಾಡಿದರು. ಆದರೆ, ಕರ್ನಾಟಕದ ಸ್ಫೂರ್ತಿ ಶಿವಲಿಂಗಯ್ಯ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು.ಕೆಎಸ್‌ಎಲ್‌ಟಿಎ ಕೋರ್ಟ್‌ನಲ್ಲಿ ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೈರಾ 6-3, 6-3ರ ನೇರ ಸೆಟ್‌ಗಳಿಂದ ಸ್ಲೋವಾಕಿಯಾದ ಜುಜನಾ ಲುಕ್ನರೊವಾ ಎದುರು ಗೆಲುವು  ಪಡೆದರು.`ವೈಲ್ಡ್ ಕಾರ್ಡ್~ ಪ್ರವೇಶ ಪಡೆದಿದ್ದ ಪ್ರೇರಣಾ ಭಾಂಬ್ರಿ ಮೊದಲ ಸುತ್ತಿನಲ್ಲಿ ಸೋಲು ಕಂಡಿದ್ದರು.ಭಾರತದ ಭರವಸೆ ಎನಿಸಿದ್ದ ಅಂಕಿತಾ ರೈನಾ, ನಿಧಿ ಚಿಲುಮುಲ ಹಾಗೂ ರಿಷಿಕಾ ಸುಂಕರ ಸಹ ಮೊದಲ ಪಂದ್ಯದಲ್ಲಿಯೇ ನಿರಾಸೆ ಮೂಡಿಸಿದ್ದರು. ಆದ್ದರಿಂದ ಎಲ್ಲರ ನಿರೀಕ್ಷೆ ಕೈರಾ ಮೇಲಿತ್ತು. ಅದನ್ನು ಅವರು ಸಮರ್ಥವಾಗಿ ನಿಭಾಯಿಸಿದರು.ಆ್ಯಂಡ್ರೆಯಾ ಕೊಚ್ ಬೆನ್ವೆನುಟೊ 6-2, 6-4ರಲ್ಲಿ ಸ್ಫೂರ್ತಿ ಮೇಲೂ, ಕೊರಿಯಾದ ಸುಂಗ್ ಹೀ ಹೇನ್ 6-3, 6-7, 7-5ರಲ್ಲಿ ಭಾರತದ ಶರ್ಮದಾ ಬಾಲು ವಿರುದ್ಧವೂ ಗೆಲುವು ಸಾಧಿಸಿದರು.ಇತರ ಪಂದ್ಯಗಳಲ್ಲಿ ಥಾಯ್ಲೆಂಡ್‌ನ ನುಂಗನಾದ್ ವಾನ್‌ಸುಕ್ 7-6, 6-1ರಲ್ಲಿ ತಮ್ಮ ದೇಶದವರಾದ ವಾರುಣ್ಯ ಮೇಲೂ, ಸರ್ಬಿಯಾದ ಜೊವಾನಾ ಜಸ್ಕಿಸ್ 6-3, 6-2ರಲ್ಲಿ ಜರ್ಮನಿಯ ಮೈಕೆಲಾ ಫ್ರಾಲಿಸ್ಕಾ ವಿರುದ್ಧವೂ, ಇಸ್ರೇಲ್‌ನ ಕೆರಾನ್ ಶಿಲೊಮೊ 6-4, 7-6ರಲ್ಲಿ ಫಾತ್ಮಾ ಅಲಿ ನಭಾನಿ ಮೇಲೂ ಜಯ ಸಾಧಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು.ಪ್ರೇರಣಾ-ಅಶ್ವರ್ಯಗೆ ನಿರಾಸೆ: ಭಾರತದ ಪ್ರೇರಣಾ ಭಾಂಬ್ರಿ ಹಾಗೂ ಅಶ್ವರ್ಯ ಶ್ರೀವಾತ್ಸವ ಜೋಡಿ ಇದೇ ಟೂರ್ನಿಯ ಡಬಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡಿತು. ಸರ್ಬಿಯಾದ ತಮರಾ ಕಾರ್ವಿಕ್ ಮತ್ತು ಭಾರತದ ರಿಷಿಕಾ ಸುಂಕರ 6-1, 6-0ರಲ್ಲಿ ಪ್ರೇರಣಾ-ಅಶ್ವರ್ಯ ಎದುರು ಗೆಲುವು ಸಾಧಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.