ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರ ದೇಶದಲ್ಲಿನ ಎಲೆಕ್ಟ್ರಾನಿಕ್ಸ್ ಕ್ಷೇತ್ರಕ್ಕೆ ಸಂಬಂಧಿಸಿ ನೂತನ `ರಾಷ್ಟ್ರೀಯ ಎಲೆಕ್ಟ್ರಾನಿಕ್ ನೀತಿ~(ಎನ್ಪಿಇ)ಯನ್ನು ಮಾಸಾಂತ್ಯದೊಳಗೆ ಜಾರಿಗೆ ತರಲಿದೆ.

ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಇಲಾಖೆಗೆ `ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ~(ಡಿಇಐಟಿವೈ) ಎಂದು ಮರುನಾಮಕರಣ ಕಾರ್ಯಕ್ರಮದಲ್ಲಿ ಶುಕ್ರವಾರ ಭಾಗವಹಿಸಿದ್ದ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ನೀತಿ ಜಾರಿಗೆ ಬಂದ ನಂತರ ದೇಶದ ಎಲೆಕ್ಟ್ರಾನಿಕ್ ಕ್ಷೇತ್ರಕ್ಕೆ ಹೆಚ್ಚು ಅನುಕೂಲವಾಗಲಿದೆ. ದೇಶದಲ್ಲಿಯೇ ಅಗತ್ಯ ಎಲೆಕ್ಟ್ರಾನಿಕ್ ಪರಿಕರಗಳನ್ನು ತಯಾರಿಸುವ ಉದ್ಯಮಗಳಿಗೆ ಹೆಚ್ಚಿನ ಉತ್ತೇಜನ ದೊರೆಯಲಿದೆ. ಆ ಮೂಲಕ ಈ ಕ್ಷೇತ್ರವೊಂದರಲ್ಲಿಯೇ ದೇಶದಲ್ಲಿ 10 ಸಾವಿರ ಕೋಟಿ ಅಮೆರಿಕನ್ ಡಾಲರ್ (ಇಂದಿನ ಲೆಕ್ಕದಲ್ಲಿ 5.21 ಲಕ್ಷ ಕೋಟಿ ರೂಪಾಯಿ) ಬಂಡವಾಳ ಹೂಡಿಕೆ ಆಗುವ ಮತ್ತು ವಿವಿಧ ಹಂತಗಳಲ್ಲಿ 2.80 ಕೋಟಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

2008-09ರಲ್ಲಿಯೇ ದೇಶದ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ಸ್ ಸಾಮಗ್ರಿಗಳಿಗೆ 4500 ಕೋಟಿ ಡಾಲರ್(2.34 ಲಕ್ಷ ಕೋಟಿ ರೂಪಾಯಿ) ಮೌಲ್ಯದಷ್ಟು ಬೇಡಿಕೆ ಇದ್ದಿತು. ಇದೇ ಗತಿಯಲ್ಲಿ ಮಾರುಕಟ್ಟೆ ಪ್ರಗತಿಯಾದರೆ 2020ರ ವೇಳೆಗೆ 40 ಸಾವಿರ ಕೋಟಿ ಅಮೆರಿಕನ್ ಡಾಲರ್(20.86 ಲಕ್ಷ ಕೋಟಿ ರೂಪಾಯಿ) ವಹಿವಾಟು ನಡೆಯುವ ನಿರೀಕ್ಷೆ ಇದೆ.

`ರಾಷ್ಟ್ರೀಯ ದೂರಸಂಪರ್ಕ ನೀತಿ~ ಮತ್ತು `ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ನೀತಿ~ ಮೇನಲ್ಲಿ ಜಾರಿಗೆ ಬರಲಿವೆ. ಈ ಬಗ್ಗೆ ಸದ್ಯ ಯೋಜನಾ ಆಯೋಗದ ಜತೆ ಚರ್ಚೆ ನಡೆಸಬೇಕಿದೆ.

ಅದಾದ ನಂತರ `ಎನ್ಪಿಇ~ ಕಡತವನ್ನು ತಕ್ಷಣ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದರು.ಯೋಜನಾ ಆಯೋಗ ಮತ್ತು ಡಿಇಐಟಿವೈ ಅಧಿಕಾರಿಗಳ ಸಭೆ ಇದೇ 23ರಂದು ನಡೆಯಲಿದ್ದು, ಹೊಸ ನೀತಿ ಸಂಬಂಧ ಚರ್ಚೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.