ಸೋಮವಾರ, ಜನವರಿ 20, 2020
29 °C

ಐಡಿಯಾ:ವಿಡಿಯೊ ಐಎಸ್‌ಡಿ ಬೂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ವಿದೇಶಗಳಲ್ಲಿ ಇರುವ ಬಂಧುಗಳ ಮುಖ ನೋಡಿಯೇ ಮಾತನಾಡುವುದಕ್ಕೆ ಅವಕಾಶ ನೀಡುವ ಐಡಿಯಾ ಸಂಸ್ಥೆಯ ಪ್ರಥಮ `ವಿಡಿಯೊ ಐಎಸ್‌ಡಿ ಬೂತ್~ ಸೇವೆಯನ್ನು ನಟ ರಮೇಶ್ ಅರವಿಂದ್ ಅವರು ಮಂಗಳವಾರ ಇಲ್ಲಿ  ಉದ್ಘಾಟಿಸಿದರು.`ಐಡಿಯಾ ಸಂಸ್ಥೆ ಇಂತಹ ವಿನೂತನ ಪ್ರಯೋಗದ ಮೂಲಕ 3ಜಿ ತಂತ್ರಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುತ್ತಿದೆ. ತಮ್ಮಲ್ಲಿ 3ಜಿ ಮೊಬೈಲ್ ಸೆಟ್ ಇಲ್ಲದಿದ್ದರೂ ಗ್ರಾಹಕರು ಈ ಬೂತ್‌ಗೆ ಬಂದು ವಿದೇಶದಲ್ಲಿರುವ ತಮ್ಮ ಆಪ್ತರ ಮುಖ ನೋಡುತ್ತ ಮಾತನಾಡುವುದು ಇದೀಗ ಸಾಧ್ಯವಾಗಿದೆ~ ಎಂದು ರಮೇಶ್ ತಿಳಿಸಿದರು.ಇತರೆಡೆ ಶೀಘ್ರ ಬೂತ್‌ಗಳು: ರಾಜ್ಯದ ಇತರೆಡೆ ಶೀಘ್ರವೇ ಇಂತಹ ವಿಡಿಯೊ ಕಾಲಿಂಗ್ ಐಎಸ್‌ಡಿ ಬೂತ್‌ಗಳನ್ನು ತೆರೆಯಲಾಗುವುದು. 2ಜಿ ಸೇವೆಯಲ್ಲಿ `ಐಎಸ್‌ಡಿ~ ಫೋನ್ ಕರೆಗಳು ಬಹಳ ದೊಡ್ಡ ಪ್ರಮಾಣದಲ್ಲಿ ಹೊರ ಹೋಗುವುದರಿಂದ 3ಜಿ ಸೇವೆಗೆ ಉತ್ತಮ ಮಾರುಕಟ್ಟೆ ಇರುವುದನ್ನು ಗಮನಿಸಿ ಈ ಸೇವೆ ಆರಂಭಿಸಲಾಗಿದೆ.ಗಲ್ಫ್ ರಾಷ್ಟ್ರಗಳಲ್ಲಿ ಮಂಗಳೂರು ಸುತ್ತಮುತ್ತಲಿನ ಸಾವಿರಾರು ಮಂದಿ ಇರುವುದರಿಂದ ಮಂಗಳೂರಿನಲ್ಲಿ ಪ್ರಥಮ ಬೂತ್ ತೆರೆಯಲಾಗಿದೆ~ ಎಂದು ಐಡಿಯಾ ಸೆಲ್ಯುಲರ್‌ನ ಕರ್ನಾಟಕ ವಲಯದ ಮುಖ್ಯ ಕಾರ್ಯಾನಿರ್ವಹಣಾ ಅಧಿಕಾರಿ ಶಿವ ಗಣಪತಿ ತಿಳಿಸಿದರು.3ಜಿ ವಿಡಿಯೊ ಸೇವೆ ಬಳಸಿದ್ದಕ್ಕೆ ಸೆಕೆಂಡ್‌ಗೆ 2 ಪೈಸೆಯ ದರ ನಿಗದಿಪಡಿಸಲಾಗಿದೆ. ಅಂದರೆ ನಿಮಿಷಕ್ಕೆ 1.20 ರೂಪಾಯಿ ಮಾತ್ರ ವೆಚ್ಚ ಬೀಳಲಿದೆ. ದೇಶೀಯ ಕರೆಗಳಿಗೆ ಸ್ಥಳೀಯ ಕರೆಗಳ ದರವೇ ಅನ್ವಯವಾಗಲಿದ್ದು, ವಿದೇಶಿ ಕರೆಗಳಿಗೆ ಮಾತ್ರ `ಐಎಸ್‌ಡಿ~ ಕರೆಗಳ ದರ ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಮಂಗಳೂರು ವಲಯ ವ್ಯವಸ್ಥಾಪಕ ಬಿ. ಪ್ರದೀಪ್ ತಿಳಿಸಿದರು. ಮಂಗಳೂರಿನಲ್ಲಿ  ಬಿಜೈಯ ಬಾಳಿಗಾ ಸ್ಟೋರ್ಸ್ ಸಮೀಪದ ಐಡಿಯಾ ಸೇವಾ ಕೇಂದ್ರದ ಬಳಿ ಈ ಬೂತ್ ಸ್ಥಾಪಿಸಲಾಗಿದೆ.

ಪ್ರತಿಕ್ರಿಯಿಸಿ (+)