ಕನ್ನಡಕಪ್ರೇಮಿ ಅಳಿಲು
ಲಂಡನ್ನ ಮೃಗಾಲಯದಲ್ಲಿರುವ ಬೊಲಿವಿಯನ್ ಅಳಿಲುಗಳಿಗೆ ಚಟವೊಂದು ಅಂಟಿಕೊಂಡಿದೆ. ಅವು ಪ್ರವಾಸಿಗರ ತಂಪು ಕನ್ನಡಗಳನ್ನು ಕಿತ್ತುಕೊಂಡು ಓಡುತ್ತವೆ. ತಮ್ಮ ಕನ್ನಡಕಗಳನ್ನು ಹೇಗಾದರೂ ಮಾಡಿ ವಾಪಸ್ ಪಡೆಯಲು ಪರದಾಡುವ ಪ್ರವಾಸಿಗರ ದಂಡೇ ಅಲ್ಲಿ ನಿತ್ಯವೂ ಕಾಣುತ್ತದೆ. ಬೊಲಿವಿಯನ್ ಅಳಿಲುಗಳ ಬಳಿ ಒಳ್ಳೆಯ `ಸನ್ಗ್ಲಾಸ್~ ಸಂಗ್ರಹವಿದೆ.

ಮೀನಿನ ಕೀಚೈನ್
ಬ್ರೆಜಿಲಿಯನ್ ಆಮೆ ಅಥವಾ ಎರಡು ಸಣ್ಣ ಮೀನುಗಳಿರುವ ಪುಟಾಣಿ ಪ್ಲಾಸ್ಟಿಕ್ ಜಾಡಿ ಇರುವ ಕೀಚೈನ್ಗಳು ಚೀನಾದಲ್ಲಿ ಈಗ ಜನಪ್ರಿಯವಾಗಿವೆ. 7 ಸೆಂ.ಮೀ. ಉದ್ದದ ಬಿಗಿಯಾದ ಪ್ಲಾಸ್ಟಿಕ್ ನಳಿಕೆಯಲ್ಲಿ ಸಣ್ಣ ಸಣ್ಣ ಮೀನುಗಳನ್ನು ಅಥವಾ ಸಣ್ಣ ಬ್ರೆಜಿಲಿಯನ್ ಆಮೆಯನ್ನು ಇರಿಸಲಾಗಿರುತ್ತದೆ. ನೀರಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಕೆಲವು ತಿಂಗಳವರೆಗೆ ಆಮೆ ಅಥವಾ ಮೀನುಗಳು ಬದುಕಬಲ್ಲವು ಎಂದು ಕೀಚೈನ್ ಮಾರಾಟ ಮಾಡುವವರು ಹೇಳುತ್ತಾರೆ.

ಶೌಚಾಲಯದ ಮ್ಯೂಸಿಯಂ
ಜರ್ಮನಿಯ ಮೈಕಲ್ ಬರ್ಗ್ಲರ್ ಶೌಚಾಲಯಕ್ಕೇ ಮೀಸಲಾದ ಮ್ಯೂಸಿಯಂ ಒಂದನ್ನು ಸ್ಥಾಪಿಸಿದ್ದಾರೆ. ವಿಸ್ಬೇಡನ್ನಲ್ಲಿರುವ ಈ ಮ್ಯೂಸಿಯಂನಲ್ಲಿ ವಿವಿಧ ನಮೂನೆಯ `ಕಮೋಡ್~ಗಳು, ವಿಲಕ್ಷಣವೂ ವಿಚಿತ್ರವೂ ಆದ `ಟಾಯ್ಲೆಟ್ ಸೀಟ್~ಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.