ಒಂದು ಕಣ್ಣು ದಾನ

ಸೋಮವಾರ, ಮೇ 20, 2019
30 °C

ಒಂದು ಕಣ್ಣು ದಾನ

Published:
Updated:

ನವದೆಹಲಿ (ಪಿಟಿಐ): ಅಪಘಾತದಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದ ಪಟೌಡಿ ಅವರಿಗೆ ಕೊನೆಯವರೆಗೆ ಇದ್ದದ್ದು ಒಂದೇ ಕಣ್ಣು. ಅವರು ಮೃತರಾಗುವ ಮುನ್ನವೇ ತಮ್ಮ ಆ ಒಂದು ಕಣ್ಣನ್ನು ದಾನ ಮಾಡಿದ್ದರು.ಕಣ್ಣು ಇಲ್ಲದಿದ್ದರೆ ಎದುರಾಗುವ ಕಷ್ಟವನ್ನು ಅರಿತಿದ್ದ `ಟೈಗರ್~ ತಮ್ಮ ಒಂದು ಅಕ್ಷಿಯೂ ವ್ಯರ್ಥವಾಗಬಾರದೆಂದು ಬಯಸ್ಸಿದ್ದರು. ಆದ್ದರಿಂದಲೇ ಕಣ್ಣು ದಾನ ಮಾಡುವ ಪ್ರಮಾಣ ಪತ್ರವನ್ನು ಬರೆದುಕೊಟ್ಟಿದ್ದರು.ಗುರುವಾರ ಅವರು ಮೃತರಾದ ನಂತರ ಎಡಗಣ್ಣನ್ನು ಇಲ್ಲಿನ `ವೇಣು ಐ ಇನ್‌ಸ್ಟಿಟ್ಯೂಟ್~ಗೆ ನೀಡಲಾಯಿತು. 2001ರಿಂದ ಈಚೆಗೆ ಪಟೌಡಿ ಇದೇ ಸಂಸ್ಥೆಯ ಮೂಲಕ ನೇತೃದಾನ ಕುರಿತು ಜಾಗೃತಿ ಆದೋಲನ ನಡೆಸುತ್ತಾ ಬಂದಿದ್ದರು.ಈ ಸಂಸ್ಥೆಯಿಂದ ಪಟೌಡಿ ನಗರದಲ್ಲಿ ಪ್ರತಿ ತಿಂಗಳು ನೇತೃ ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗುತ್ತಿತ್ತು. 1991ರಿಂದ ಇಲ್ಲಿಯವರೆಗೆ ಸುಮಾರು 500 ಜನರಿಗೆ ದೃಷ್ಟಿ ಸಿಕ್ಕಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry