ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆ ಬಂದಾಗ ಈ ಹುಡುಗ ನೆನಪಾಗುತ್ತಾನೆ. ಜೀವನದಲ್ಲಿ ಎಂದೂ ಮರೆಯಲಾಗದ ಇವನ ಹೆಸರು, ಊರು ಯಾವುದೆಂದು ನಾನು ಹೇಳುವುದಿಲ್ಲ. ಇದು ಬಹಳ ಆಕಸ್ಮಿಕವಾಗಿ ನಡೆದ ಘಟನೆ. ನಾನು ವಿಶೇಷ ಜಾಗೃತದಳದ ಸದಸ್ಯನಾಗಿ ಬೇರೆ ಜಿಲ್ಲೆಗೆ ಹೋಗಿದ್ದೆ. ಪರೀಕ್ಷೆ ಸಮಯದಲ್ಲಿ ಕಾಪಿ ಆಗದಂತೆ ತಡೆಯುವುದು, ಪರೀಕ್ಷಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳ ಜೇಬುಗಳನ್ನು ಪರೀಕ್ಷೆ ಮಾಡುವುದು ನಮಗೆ ವಹಿಸಲಾಗಿದ್ದ ಕೆಲಸ. ಅದು ಬಹಳ ದೊಡ್ಡ ಜಿಲ್ಲೆಯಾದ ಕಾರಣ ಬೆಳ್ಳಂಬೆಳಿಗ್ಗೆ ಎದ್ದು ನಮ್ಮ ಅಧಿಕಾರಿಗಳ ಜೊತೆ ಹೋಗುತ್ತಿದ್ದೆ.

ಪರೀಕ್ಷೆ ಬರೆಯುತ್ತಿದ್ದವರ ವರ್ತನೆಯಲ್ಲಿ ಅನುಮಾನ ಹುಟ್ಟಿಸುವಂಥದ್ದೇನಾದರೂ ಕಂಡರೆ ಅವರ ಜೇಬು, ಪರ್ಸು, ಇತ್ಯಾದಿಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದೆ. ನನ್ನ ಜೊತೆ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಉಪನ್ಯಾಸಕರು ಇದ್ದರು. ಪರೀಕ್ಷೆ ಬರೆಯುವ ಮಕ್ಕಳಿಗೆ ತೊಂದರೆಯಾಗದಂತೆ ಬಹಳ ಎಚ್ಚರಿಕೆಯಿಂದ ತಪಾಸಣೆ ಮಾಡುತ್ತಿದ್ದೆವು. ಹುಡುಗರ ಪರ್ಸ್ ತೆಗೆದು ನೋಡುವಾಗ ಅದರಲ್ಲಿ ನಾನಾ ದೇವರ ಫೋಟೊಗಳು, ಅವರವರ ಪ್ರಿಯತಮೆಯ ಚಿತ್ರಗಳು ಸಾಧಾರಣವಾಗಿ ಇದ್ದೇ ಇರುತ್ತಿದ್ದವು.

ಅಪ್ಪ ಅಮ್ಮನ ಫೋಟೊ ಇಟ್ಟುಕೊಳ್ಳುವ ಮಕ್ಕಳನ್ನು ನಾನು ಈ ಹಂತದಲ್ಲಿ ನೋಡಿದ್ದು ಬಹಳ ಕಡಿಮೆ. ಜೊತೆಗೆ ಆಸ್ಪತ್ರೆ ಚೀಟಿ, ಬಸ್ ಪಾಸ್, ಲವ್ ಲೆಟರ್ ಇಂಥವೇ ಸಿಗುತ್ತಿದ್ದವು. ಇವುಗಳಲ್ಲಿ ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಅನುಕೂಲ ಕಲ್ಪಿಸುವ ಯಾವುದಾದರೂ ಸರಕು ಸಾಮಾಗ್ರಿ ಇದೆಯಾ ಎಂದು ಹುಡುಕಾಡುತ್ತಿದ್ದೆವು. ಸಿಕ್ಕವರನ್ನು ಹಿಡಿದು ತಂದು ನಮ್ಮ ಹಿರಿಯ ಅಧಿಕಾರಿಗಳಿಗೆ ಒಪ್ಪಿಸಿ, ಮುಂದಿನ ವಿಚಾರಣೆಯನ್ನು ನೋಡುತ್ತಾ ಕೂರುವುದು ನಮ್ಮ ದಿನಚರಿಯಾಗಿತ್ತು.

ಒಂದು ದಿನ ಗಣಿತ ವಿಷಯದ ಪರೀಕ್ಷೆ ನಡೀತಿತ್ತು. ಸಾಕಷ್ಟು ದೊಡ್ಡ ಖಾಸಗಿ ಕಾಲೇಜದು. ತಪಾಸಣೆ ಮಾಡುವಾಗ ಕಾಪಿಚೀಟಿ ತಂದಿದ್ದ ಇಬ್ಬರು ಹುಡುಗರು ಸಿಕ್ಕಿಬಿದ್ದರು. ನಾನು ಮೊದಲು ಹಿಡಿದು ತಂದ ಹುಡುಗ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಗೈಡಿನಿಂದ ಹರಿದ ಪ್ರಶ್ನೋತ್ತರಗಳ ಹಾಳೆಗಳನ್ನು ಬಹು ಜತನದಿಂದ ತುರುಕಿಕೊಂಡಿದ್ದ. ಹೀಗೆ ಸಿಕ್ಕಿಬಿದ್ದವರು ಡಿಬಾರ್ ಆಗುವ ಭಯದಲ್ಲಿ ಗೋಗರೆಯುತ್ತಾರೆ, ಕ್ಷಮೆ ಕೇಳುತ್ತಾರೆ ಇಲ್ಲವೆ ಸಣ್ಣಗೆ ಧಮಕಿಯನ್ನಾದರೂ ಹಾಕುತ್ತಾರೆ.

ಆದರೆ, ಇವನನ್ನು ನೋಡಿದರೆ ಸಿಕ್ಕಾಪಟ್ಟೆ ನಿರಾಳನಾಗಿದ್ದಾನೆ. ತಾನು ಕಾಪಿ ಹೊಡೆಯುತ್ತಾ ಸಿಕ್ಕಿಹಾಕಿಕೊಂಡ ಬಗ್ಗೆ ಅವನಿಗೆ ಲವಲೇಶದ ಭಯವಾಗಲಿ, ಸಣ್ಣ ಪಶ್ಚಾತ್ತಾಪವಾಗಲಿ, ಇಲ್ಲ. ಸದ್ಯ! ಮುಂದೆ ಪರೀಕ್ಷೆ ಬರೆಯುವುದು ತಪ್ಪಿತಲ್ಲ ಎಂಬ ಸಂತೋಷದಲ್ಲಿ ಇದ್ದಂತೆ ಕಂಡಿತು. ನಾನು ಇನ್ನೂ ಕೈ ಹಾಕಿ ತಡಕಾಡಲು ಸಾಧ್ಯವಾಗದ ಜಾಗದಲ್ಲೆಲ್ಲಾ ಅವನು ಅವಿತಿಟ್ಟಿದ್ದ ಮತ್ತಷ್ಟೂ ಚೀಟಿಗಳನ್ನು ಅವನೇ ತೆಗೆದು ಗೌರವದಿಂದ ನನಗೆ ಕೊಟ್ಟ ರೀತಿ ‘ನಿನಗೆ ನೆಟ್ಟಗೆ ಹುಡುಕೋದಕ್ಕೂ ಬರೋದಿಲ್ಲವಲ್ಲೋ ಮಂಕು ದಿಣ್ಣೆ’ ಎನ್ನುವಂತಿತ್ತು. ಅವನ ನಿರಾಳತನಕ್ಕೆ ನಾನು ಸೋತು ಸುಸ್ತಾಗಿ, ಬೆವತು ಹೋಗಿದ್ದೆ. ‘ಬ್ಯಾಡಬ್ಯಾಂಡದ್ರೂ ಸೈನ್ಸ್ ಕೊಡಿಸ್ತಾರೆ ಬಡ್ಡೀ ಮಕ್ಕಳು’ ಎಂದು ಯಾರಿಗೋ ಗೊಣಗುತ್ತಲೇ ಅವನು ಬೈದುಕೊಂಡ.

ಇನ್ನೊಬ್ಬ ಹುಡುಗನನ್ನು ನನ್ನ ಜೊತೆಯಲ್ಲಿದ್ದ ಜಾಗೃತದಳದ ಸದಸ್ಯರು ಹಿಡಿದುತಂದಿದ್ದರು. ಅವನ ಶರ್ಟಿನ ಮೇಲಿನ ಜೇಬಿನಲ್ಲೇ ನೀಟಾಗಿ ಬರೆದುಕೊಂಡ ಗಣಿತದ ಸೂತ್ರಗಳು, ಉತ್ತರಗಳು ಇದ್ದವು. ಆ ಹುಡುಗ ಸಂಪೂರ್ಣ ಹೆದರಿಹೋಗಿದ್ದ. ‘ಸಾರ್ ನಾನು ದಿನಾ ಓದಿ ಪ್ರಾಕ್ಟೀಸ್ ಮಾಡೋಕ್ಕಂತ ರೆಡಿ ಮಾಡಿ ಇಟ್ಟಿದ್ದ ಟಿಪ್ಪಣಿಗಳಿವು. ನಾನು ಕಾಪಿ ಹೊಡೆಯೋಕ್ಕಂತ ಇವನ್ನು ರೆಡಿ ಮಾಡಿಕೊಂಡಿದ್ದಲ್ಲ.

ನಾನು ಅಂಥ ಹುಡುಗನೇ ಅಲ್ಲ. ಪ್ರಾಮಿಸ್, ಯಾರಿಗಾದ್ರೂ ಕೇಳಿ. ಬೆಳಿಗ್ಗೆ ಗಡಿಬಿಡಿಯಲ್ಲಿ ಈ ಶರ್ಟ್ ಹಾಕಿಕೊಂಡು ಬಂದಿದ್ದೀನಿ ಅದರಲ್ಲಿ ಮಿಸ್ಸಾಗಿ ಈ ಚೀಟಿ ಬಂದುಬಿಟ್ಟಿದೆ. ನಾನೂ ಸರಿಯಾಗಿ ನೋಡಿಕೊಂಡಿಲ್ಲ. ತಪ್ಪಾಗಿ ಹೋಗಿದೆ’ ಎಂದು ಹೇಳುತ್ತಾ ದುಃಖ ತುಂಬಿಕೊಂಡು ಅಳತೊಡಗಿದ. ಅವನು ಸುಳ್ಳು ಹೇಳುತ್ತಿದ್ದಾನೆ ಎಂದು ನನಗೂ ಅನ್ನಿಸಲಿಲ್ಲ. ಆದರೆ, ಆ ಚೀಟಿಗಳಲ್ಲಿ ವಿಷಯಕ್ಕೂ ಉತ್ತರ ಪತ್ರಿಕೆಗೂ ತಾಳೆಯಾಗುತ್ತಿತ್ತು. ಗಣಿತದ ಉಪನ್ಯಾಸಕರನ್ನು ಕರೆದು ‘ಟ್ಯಾಲಿ ಮಾಡಿ ನೋಡ್ರಿ’ ಎಂದಾಗ ಅವರೂ ಕಾಪಿ ಆಗಿದೆ ಎಂದು ದೃಢೀಕರಿಸಿದರು. ಆಗ ಆ ಕಾಲೇಜಿನ ಪ್ರಾಂಶುಪಾಲರ ಪಿತ್ತ ಕೆರಳಿ ಹೋಯಿತು.

ಸಿಕ್ಕಿಬಿದ್ದ ಹುಡುಗರ ಕಡೆ ತಿರುಗಿ ‘ನಮ್ಮ ಸಂಸ್ಥೆಯ ಮಾನ ಮರ್ಯಾದೆ ದಾರೀಲಿ ಹೋಗೋರ ಮುಂದೆ ತೆಗೆದು ಬಿಟ್ಟಿರಲ್ಲೋ? ನಮ್ಮ ಸಂಸ್ಥೆಯ ಗೌರವ ಮಣ್ಣು ಪಾಲು ಮಾಡಿಬಿಟ್ಟಿರಲ್ಲೋ’ ಎಂದು ಬೈಯುತ್ತಾ, ಹಾಗೇ ಒಮ್ಮೊಮ್ಮೆ ನಮ್ಮ ಕಡೆಗೂ ತಿರುಗುತ್ತಿದ್ದರು. ಆಗ ನಾನು ‘ಓಹೋ ಈತ ಬೈಗುಳಾನ ನಮಗೂ ಹುಡುಗರಿಗೂ ಬೈಟೂ ಮಾಡ್ತಾ ಇದ್ದಾನೆ ಸಾರ್’ ಎಂದು ನನ್ನ ಸಹ ಸದಸ್ಯರಿಗೆ ಹೇಳಿಕೊಂಡು ಎದ್ದು ನಿಂತೆ.

ಸರಿ, ಇನ್ನೇನೂ ಮಾಡುವಂತಿರಲಿಲ್ಲ. ಇಬ್ಬರನ್ನೂ ಡಿಬಾರ್ ಮಾಡುವ ತೀರ್ಮಾನವಾಯಿತು. ನಾನು ಮೊದಲು ಹಿಡಿದಿದ್ದ ಹುಡುಗ ಬಹಳ ಸಂತೋಷದಿಂದ ಥ್ಯಾಂಕ್ಸ್ ಹೇಳಿ ಹೊರಟುಹೋದ. ಅವನಿಗೆ ಜೈಲಿನಿಂದ ಬಿಡುಗಡೆಯಾದಷ್ಟು ಸಂತೋಷವಾಗಿತ್ತು. ಆದರೆ, ಮತ್ತೊಬ್ಬ ಹುಡುಗನ ಅಳು ಇನ್ನೂ ನಿಂತಿರಲಿಲ್ಲ. ಅವನು ಬಹಳ ಸೂಕ್ಷ್ಮ ಸ್ವಭಾವದವನಂತೆ ಕಂಡ. ಅವನ ಸ್ಥಿತಿ ನೋಡಿ ನನ್ನ ಕರುಳೂ ಚುರುಕ್ ಎನ್ನುತ್ತಿತ್ತು.

ನೋಡಲು ಚೆನ್ನಾಗಿದ್ದ ಅವನ ಮುಖದಲ್ಲಿ ಓದುವ ಒಬ್ಬ ಸಭ್ಯ ಹುಡುಗನ ಎಲ್ಲಾ ಲಕ್ಷಣಗಳೂ ಇದ್ದವು. ನಾನು ಅವನ ಹೆಗಲ ಮೇಲೆ ಕೈಯಿಟ್ಟು ತಲೆ ಸವರಿದೆ. ಕಣ್ಣೀರು ಒರೆಸಿ, ನೋಡು ಮಗು ‘ನೀನು ನೋಡೋಕೆ ಒಳ್ಳೇಯವನ ಥರಾನೆ ಕಾಣ್ತೀಯ. ಆಮೇಲೆ, ನೀನು ಹೇಳ್ತಾ ಇರೋದು ಕೂಡ ಸತ್ಯಾನೆ ಇರಬಹುದು. ಆದರೆ ಇವತ್ತಿನ ಪರಿಸ್ಥಿತಿ ನಿನಗೆ ಸಂಪೂರ್ಣ ವಿರುದ್ಧವಾಗಿದೆ. ಪರೀಕ್ಷೆಗೆ ಬರೋ ಹುಡುಗನಾದ ನೀನು ಜೇಬಲ್ಲಿ ಏನಿದೆ ಏನಿಲ್ಲ ಅನ್ನೊದನ್ನೂ ಚೆಕ್ ಮಾಡ್ಕೊಂಡು ಬರಬೇಕಾಗಿತ್ತು. ಇಲ್ಲಿಗೆ ಬಂದ ಮೇಲೂ ಕಾಲೇಜಿನ ಪ್ರಿನ್ಸಿಪಾಲರು, ಜಾಗೃತದಳದವರು, ನಿಮ್ಮ ರೂಮ್ ಸೂಪರ್ವೈಸರ್ ಜೇಬುಗಳನ್ನು ಒಮ್ಮೆ ನೋಡ್ಕೊಳಿ ಅಂತ ಹೇಳಿದಾಗ ನೀನು ಚೆಕ್ ಮಾಡ್ಕೊಂಡಿದ್ರೆ ಈ ರಗಳೇನೆ ಇರ್ತಿರ್ಲಿಲ್ಲ. ನಿನ್ನ ಅವಸರದ ಸ್ವಭಾವದಿಂದ ಇಷ್ಟೆಲ್ಲಾ ಆಗಿ ಹೋಯಿತು.

ನೋಡು ಒಂದು ಸಣ್ಣ ಚೀಟಿ ಕೂಡ ಜೀವನದಲ್ಲಿ ಎಷ್ಟು ಕಷ್ಟ ಕೊಡುತ್ತೆ. ನಿನಗೆ ಮುಂದಿನ ಪರೀಕ್ಷೆಗೆ ಅವಕಾಶ ಸಿಗುತ್ತೆ ಮರಿ. ಆಗ ಮತ್ತೆ ಬರೀವಂತೆ. ಈಗ ಆಗಿದ್ದೆಲ್ಲ ಮರೆತು ಬಿಡು’ ಎಂದು ಸಮಾಧಾನ ಹೇಳಿದೆ. ತನ್ನ ದುಃಖದ ಶಾಕ್ನಿಂದ ಅವನು ತಕ್ಷಣ ಈಚೆಗೆ ಬಾರದಿದ್ದರೂ, ಕೊನೇ ಪಕ್ಷ ತನ್ನ ಅಳುವನ್ನಾದರೂ ನಿಲ್ಲಿಸಿದ. ಅವನ ಗುಳಿ ಬೀಳುವ ಕೆನ್ನೆ ಚಿವುಟಿ ಗುಡ್ ಲಕ್ ನೆಕ್ಸ್ಟ್ ಟೈಮ್ ಎಂದು ಹೇಳಿದೆ. ನನ್ನ ಜೊತೆಗಿದ್ದ ಜಾಗೃತದಳದ ಗೆಳೆಯರೂ ಅವನಿಗೆ ಸಮಾಧಾನ ಹೇಳಿ ವಿಶ್ ಮಾಡಿದರು.

ಮಾರನೆಯ ದಿನ ಭಾನುವಾರ ಪರೀಕ್ಷೆ ಇರಲಿಲ್ಲ. ನಾವೆಲ್ಲಾ ಐಬಿಯಲ್ಲಿ ಹರಟೆ ಹೊಡೀತಾ ಕೂತಿದ್ದೆವು. ನಮ್ಮ ಜೀಪಿನ ಡ್ರೈವರ್ ಓಡೋಡಿ ಬಂದು ಸಾರ್ ನಿನ್ನೆ ಸಂಜೆ ಯಾರೋ ರೈಲಿಗೆ ಸಿಕ್ಕಿದ್ದಾರೆ. ಹಳಿ ಮೇಲೆ ಹೆಣ ಇದೆ. ಪರೀಕ್ಷೆಯಲ್ಲಿ ಡಿಬಾರ್ ಆದ ಹುಡುಗ ಅಂತ ಯಾರೋ ಮಾತಾಡ್ತಾ ಇದ್ದರು ಎಂದು ಒಂದೇ ಉಸಿರಿನಲ್ಲಿ ಹೇಳಿದ. ನನಗೆ ಮೈಮೇಲೆ ಬೆಂಕಿ ಸುರಿದಂತಾಯಿತು. ಜೀಪಿನಲ್ಲಿ ಹೊರಟು ಆ ಜಾಗ ತಲುಪಿದೆವು. ನಿಜವಾಗಿಯೂ ನಾನು ಸಮಾಧಾನ ಹೇಳಿದ ಆ ಸೂಕ್ಷ್ಮ ಮನಸ್ಸಿನ ಹುಡುಗನೇ ಸತ್ತು ಹೋಗಿದ್ದ. ಆಗಲೂ, ಅವನ ಜೇಬಿನಲ್ಲಿ ಮತ್ತೊಂದು ಚೀಟಿಯಿತ್ತು. ಆದರೆ, ಅದು ಪರೀಕ್ಷೆಗೆ ಸಂಬಂಧಿಸಿದ್ದಲ್ಲ. ಅದು ಅವನ ಕೊನೆಯ ಮಾತುಗಳು. ಪ್ರೀತಿಯ ಸಾರ್ಗಳಿಗೆ, ನಮಸ್ಕಾರ...,
ನೀವು ಹೊರಟು ಹೋದ ಮೇಲೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.