ಮಸ್ತ್ ಮಸ್ತ್ ಹುಡುಗಿ (ಈಗ ಇಬ್ಬರು ಮಕ್ಕಳ ಮುದ್ದಿನ ಆಂಟಿ) ಕಳೆದ ವಾರ ಬೆಂಗಳೂರಿಗೆ ಬಂದಿದ್ದರು. ನಾಯಕ ನಟಿಯಾಗಿದ್ದಾಗ ಇದ್ದ ತುಂಟತನ ಹಾಗೂ ಕಣ್ಣನಲ್ಲಿನ ಕೋಲ್ಮಿಂಚು ಈಗಲೂ ಹಾಗೆಯೇ ಇದೆ. ಆಭರಣದಂತೆಯೇ ಇದ್ದ ಗಾ ಹಸಿರು ಬಣ್ಣದ ಉಡುಗೆ ಧರಿಸಿ, ಕೊರಳ ತುಂಬಾ ರತ್ನಾಭರಣಗಳನ್ನು ತೊಟ್ಟು, ಮೊಗದ ತುಂಬಾ ನಗೆಯಾಭರಣದ ಬೆಳಕು ಮೂಡಿಸುತ್ತಾ ಬೆಂಗಳೂರಿಗರ ಎದುರು ಬಂದು ನಿಂತರು.

`ದ ಆರ್ಟ್ ಆಫ್ ಜ್ಯುಯಲರಿ~ ಹಾಗೂ ಬೆಂಗಳೂರು ಆಭರಣ ಮಾರಾಟಗಾರರ ಸಂಘಟನೆಯು ಏ. 6ರಿಂದ 9ರವರೆಗೆ ಜಂಟಿಯಾಗಿ ಆಯೋಜಿಸುತ್ತಿರುವ ಭಾರತದ ಅತ್ಯುತ್ತಮ ಆಭರಣಗಳ ಪ್ರದರ್ಶನದ ಎರಡನೇ ಆವೃತ್ತಿಗೆ ರವೀನಾ ಟಂಡನ್ ಪ್ರಚಾರ ರಾಯಭಾರಿ. ಅವರು `ಮೆಟ್ರೊ~ದೊಂದಿಗೆ ಮಾತನಾಡಿದರು.

ಆಭರಣಗಳ ಪ್ರದರ್ಶನ ಮೇಳಕ್ಕೆ ರಾಯಭಾರಿಯಾಗಿದ್ದು ಹೇಗೆನಿಸುತ್ತಿದೆ?
ನಿಜಕ್ಕೂ ಈ ಜವಾಬ್ದಾರಿ ನನ್ನನ್ನು ಸಾಕಷ್ಟು ಎತ್ತರಕ್ಕೆ ಏರಿಸಿದೆ. ಇಡೀ ಭಾರತದಲ್ಲಿ ವಿವಿಧ ಬಗೆಯ ಆಭರಣಗಳು ಒಂದೇ ಮಳಿಗೆಯಲ್ಲಿ ಲಭ್ಯವಿರುವ ಇಂಥ ಮೇಳ ಎಲ್ಲಾ ಮಹಿಳೆಯರಿಗೂ ಉಪಯುಕ್ತ. ಇದರ ರಾಯಭಾರಿಯಾಗಿಸುವ ಮೂಲಕ ನನ್ನ ಮೆಚ್ಚಿನ ಊರಿಗೆ ಮತ್ತೆ ಕರೆತಂದಿದ್ದಕ್ಕೆ ನನಗೆ ಬಹಳ ಸಂತೋಷವಾಗಿದೆ.

ಭಾರೀ ಆಭರಣಗಳನ್ನು ತೊಡುವುದು ನಿಮಗಿಷ್ಟವೇ?
ಭಾರತದ ಇತಿಹಾಸದಲ್ಲಿ ಮಹಿಳೆ ಕನಿಷ್ಠ ಒಂದಿಷ್ಟು ಆಭರಣಗಳನ್ನು ತೊಡಬೇಕು ಎಂದು ಪುರಾಣಗಳಲ್ಲೇ ಹೇಳಲಾಗಿದೆ. ಅದರಂತೆ ಆಭರಣ ಪ್ರತಿ ನಾರಿಯ ಅವಿಭಾಜ್ಯ ಅಂಗ. ಹೀಗಿರುವಾಗ ತುಸುವೇ ಆಭರಣಗಳನ್ನು ನಾನು ಸದಾ ತೊಟ್ಟರೂ ಭಾರೀ ಆಭರಣಗಳನ್ನು ತೊಡುವ ಇಂಥ ಅವಕಾಶ ನನ್ನ ಅದೃಷ್ಟವೆಂದೇ ಭಾವಿಸಿದ್ದೇನೆ.

ಸರಳವಾಗಿದ್ದರೂ ಕಣ್ಮನ ಸೆಳೆಯುವ ಆಭರಣ ನನಗಿಷ್ಟ. ನಾನು ವರ್ಷಕ್ಕೊಮ್ಮೆ ಮಾತ್ರ ಆಭರಣಗಳನ್ನು ಖರೀದಿಸುವ ಪರಿಪಾಠವಿಟ್ಟುಕೊಂಡಿದ್ದೇನೆ. ಅಂಥ ಸಂದರ್ಭದಲ್ಲಿ ಯಾವುದು ನನ್ನ ಮನಕ್ಕೊಪ್ಪುತ್ತದೆಯೋ ಅಂಥದ್ದನ್ನೇ ಖರೀದಿಸುತ್ತೇನೆ.

ನಟಿಯಾಗಿ ಹಾಗೂ ಈಗ ಅಮ್ಮನಾಗಿ ನಿಮ್ಮಲ್ಲಿ ಏನು ಬದಲಾವಣೆಯಾಗಿದೆ?
ಆಗ ಸೆಲೆಬ್ರೆಟಿಯಾಗಿ ಚೆಲ್ಲುಚೆಲ್ಲಾಗಿದ್ದರೂ ನಡೆಯುತ್ತಿತ್ತು. ಆದರೆ ತಾಯ್ತನ ನನಗೆ ಸಾಕಷ್ಟು ಜವಾಬ್ದಾರಿಗಳನ್ನು ಕಲಿಸಿದೆ. ಸಹನೆ, ಕರುಣೆ, ಪ್ರೀತಿ, ಮಕ್ಕಳ ಕುರಿತು ಕಾಳಜಿಯನ್ನು ಕಲಿಸಿದೆ.

ಹೀಗಾಗಿ ಆಗಿನದ್ದಕ್ಕೂ ಈಗಿನ ಪರಿಸ್ಥಿತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ತಾಯಿಯಾಗಿ ನನ್ನ ಈ ಸ್ಥಾನವೇ ನನಗಿಷ್ಟ. (ರವೀನಾ 1995ರಲ್ಲಿ ಪೂಜಾ ಹಾಗೂ ಛಾಯಾ ಎಂಬಿಬ್ಬರು ಹೆಣ್ಣುಮಕ್ಕಳನ್ನು ದತ್ತು ಪಡೆದುಕೊಂಡಿದ್ದರು. ನಂತರ 2005ರಲ್ಲಿ ಅವರಿಗೆ ರಷಾ ಎಂಬ ಮಗಳು ಜನಿಸಿದಳು. 2007ರಲ್ಲಿ ರಣಭೀರ್ ಎಂಬ ಮಗ ಹುಟ್ಟಿದ)

ಮುಂದಿನ ಯೋಜನೆಗಳೇನು?
ಎರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಕಿರುತೆರೆಯಲ್ಲಿ ಕಾರ್ಯಕ್ರಮವೊಂದರ ನಿರೂಪಕಿಯಾಗಿಯೂ ಕಾಣಿಸಿಕೊಳ್ಳಲಿದ್ದೇನೆ.

ಕನ್ನಡಕ್ಕೆ ಮತ್ತೊಮ್ಮೆ ಬರುವ ಇರಾದೆ ಇದೆಯೇ?
ಖಂಡಿತ, ಏಕಿಲ್ಲ. ಒಳ್ಳೆಯ ಪಾತ್ರ ಒದಗಿ ಬಂದಲ್ಲಿ ಕನ್ನಡದಲ್ಲಿ ಮತ್ತೊಮ್ಮೆ ನಟಿಸಲು ನಾನು ಸಿದ್ಧ. ಕನ್ನಡದಲ್ಲಿ ನಟಿಸಿದ ಒಂದು ಚಿತ್ರದಲ್ಲಿ (ಉಪೇಂದ್ರ) ನನಗೆ ಒಳ್ಳೆಯ ಅನುಭವವಾಯಿತು.

ಬೆಂಗಳೂರು ಹಾಗೂ ನಿಮ್ಮ ನಡುವಿನ ಸಂಬಂಧ?
ಕೆಲವು ಹಿಂದಿ ಚಿತ್ರಗಳಿಗಾಗಿ ನಾನು ಬೆಂಗಳೂರು ಹಾಗೂ ಕರ್ನಾಟಕದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. `ಉಪೇಂದ್ರ~ ಚಿತ್ರಕ್ಕಾಗಿ ನಾನು ಮಂಗಳೂರಿನಲ್ಲಿ ಕಳೆದ ಕ್ಷಣಗಳು ಅವಿಸ್ಮರಣೀಯ. ಮಂಗಳೂರಿನಂಥ ರಮಣೀಯ ತಾಣ ನನಗೆ ಸಾಕಷ್ಟು ಮುದನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.