ಭಾನುವಾರ, ಜನವರಿ 19, 2020
23 °C

ಒತ್ತಡದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ: ಜಯಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹಲವು ಯೋಜ­ನೆ­ಗಳನ್ನು ತಡೆಹಿಡಿದ ದೂರು­ಗಳ ಹಿನ್ನೆ­ಲೆ­ಯಲ್ಲಿ ಪರಿಸರ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿರುವ ವದಂತಿಯನ್ನು ಕಾಂಗ್ರೆಸ್‌ ರಾಜ್ಯಸಭಾ ಸದಸ್ಯೆ ಜಯಂತಿ ನಟರಾಜನ್‌ ತಳ್ಳಿಹಾಕಿದ್ದಾರೆ.ಶನಿವಾರ ಸಚಿವ ಸ್ಥಾನಕ್ಕೆ ರಾಜೀ­ನಾಮೆ ನೀಡಿದ ಬಗ್ಗೆ ಭಾನುವಾರ ಇಲ್ಲಿ ಸುದ್ದಿ­ಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ತಾವು ಯಾವುದೇ ಯೋಜನೆ­ ತಡೆಹಿಡಿದಿಲ್ಲ’ ಎಂದು ಸ್ಪಷ್ಟ­ಪಡಿಸಿದರು.ಬರುವ ಲೋಕಸಭಾ ಚುನಾವಣೆ­ಗೆ ಪಕ್ಷದ ಪರ ಕೆಲಸ ಮಾಡಲು ತಾವು ಸ್ವ­ಇಚ್ಛೆಯಿಂದಲೇ ಸಚಿವ ಸ್ಥಾನಕ್ಕೆ ರಾಜೀ­ನಾಮೆ ನೀಡಿ, ಅಂಗೀಕರಿಸಲು ಪ್ರಧಾನಿಗೆ ಕೋರಿದ್ದಾಗಿ ಅವರು ತಿಳಿಸಿದರು.ತಮ್ಮ ಕಾರ್ಯನಿರ್ವಹಣೆ ಕುರಿತು ಪ್ರಧಾ­ನಿಯೇ ಪ್ರಶಂಸೆ ಮಾಡಿದ್ದಾರೆ ಎಂದ ಅವರು, ‘ಉತ್ತರಾ­ಖಂಡ­ದಂ­ತಹ ದುರಂತವನ್ನು ತಪ್ಪಿಸಲು ಇನ್ನು ಮುಂದೆ ಅಭಿವೃದ್ಧಿ ಯೋಜ­ನೆ­ಗಳಿಗೆ ಅನುಮತಿ ನೀಡುವಾಗ, ಪರಿ­ಸರ ಸಂರಕ್ಷಣೆಯನ್ನೂ ಗಮನದಲ್ಲಿ­ಟ್ಟು ಎಚ್ಚರಿಕೆಯ ಹೆಜ್ಜೆ ಇಡ­ಬೇಕು’ ಎಂದು ಹೇಳಿದರು.ಸಚಿವರ ಅಚ್ಚರಿಯ ರಾಜೀನಾ­ಮೆಗೆ ಪಕ್ಷದ ಕೆಲಸ ಕಾರ­ಣವೇ ಅಥವಾ ಅವರ ಸಚಿವಾ­ಲಯ ವಿವಿಧ ಯೋಜನೆ­ಗಳಿಗೆ ಪರಿಸರ ಪ್ರಮಾ­ಣ­­ಪತ್ರ ನೀಡದೆ ತಡೆ­ಯೊಡ್ಡಿದ್ದರ ವಿರುದ್ಧ ಉದ್ಯಮ ವಲಯ ದೂರು ನೀಡಿ­ರುವುದು ಕಾರ­ಣವೇ ಎಂಬ ಪ್ರಶ್ನೆ ಎದ್ದಿದೆ.ಈ ವದಂ­ತಿಗೆ ಪೂರಕ­ ಎಂಬಂತೆ, ಎಫ್‌ಐಸಿಸಿ ಸಭೆ­ಯಲ್ಲಿ  ಭಾಗ­ವಹಿಸಿದ ಕಾಂಗ್ರೆಸ್‌ ಉಪಾ­ಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಉದ್ಯ­ಮಿ­ಗಳು ದೂರು ನೀಡಿದ್ದಾರೆ. ರಾಹುಲ್‌ ಸಹ ಯಾವುದೇ ನಿರ್ಧಾರ ಕೈಗೊ­ಳ್ಳ­ಬಹುದಾದ ಪರಿಸರ ಸಚಿವರು ಅಥವಾ ಮುಖ್ಯ­ಮಂತ್ರಿಗಳು ನಿರಂಕುಶ ಆಡಳಿತದ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗಿ­ರುವುದನ್ನು ಟೀಕಿಸಿದ್ದರು.

ಪ್ರತಿಕ್ರಿಯಿಸಿ (+)