ಬೆಂಗಳೂರು: ವಿಶೇಷವಾಗಿ ಸೆಲ್ಫಿಗಳಿಗಾಗಿಯೇ ಹೆಸರಾದ ಒಪೊ ಮೊಬೈಲ್ ಕಂಪೆನಿ ಎಫ್1ಎಸ್ ಮತ್ತೊಂದು ಅತ್ಯಾಧುನಿಕ ಸೆಲ್ಫಿ ಮೊಬೈಲ್ ಅನ್ನು ಬುಧವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೆಹಲಿ ಮತ್ತು ಬೆಂಗಳೂರು ಮಾರುಕಟ್ಟೆಗೆ ಏಕಕಾಲದಲ್ಲಿ ಈ ಮೊಬೈಲ್ ಬಿಡುಗಡೆಯಾಗಿದೆ.

ನಗರದಲ್ಲಿ ನಡೆದ ಸಮಾರಂಭದಲ್ಲಿ ಚೀನಾದ ಸ್ಕೈನೆಟ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಸಾರ್ವಜನಿಕ ಸಂಪರ್ಕಾಧಿಕಾರಿ ಐಮೇ ಲಿಂಗ್ ಅವರು ಎಫ್1ಎಸ್ ಮೊಬೈಲ್ನ್ನು ಬೆಂಗಳೂರು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ಅಮೆರಿಕದ ನಂತರ ಎರಡನೇ ದೊಡ್ಡ ಸ್ಮಾರ್ಟ್ಫೋನ್ ಮಾರುಕಟ್ಟೆಯಾಗಿರುವ ಭಾರತದ ಗ್ರಾಹಕರನ್ನು ಸೆಳೆಯುವುದು ಒಪೊದ ಮೊದಲ ಆದ್ಯತೆಯಾಗಿದೆ. ಸೆಲ್ಫಿ ಹುಚ್ಚಿನ ಯುವ ಜನಾಂಗವನ್ನು ಗುರಿಯಾಗಿಸಿಕೊಂಡು ಎಫ್1ಎಸ್ ವಿನ್ಯಾಸ ಮಾಡಲಾಗಿದೆ ಎಂದು ಲಿಂಗ್ ತಿಳಿಸಿದರು.

ನೊಯಿಡಾ ಬಳಿ ₹100 ಕೋಟಿ ವೆಚ್ಚದಲ್ಲಿ ಒಪೊ ಮೊಬೈಲ್ ತಯಾರಿಕಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದು ಕಾರ್ಯಾರಂಭ ಮಾಡಿದರೆ ಸ್ಥಳೀಯರಿಗೆ ಒಂದು ಸಾವಿರದಷ್ಟು ಉದ್ಯೋಗ ದೊರೆಯಲಿದೆ ಎಂದರು.

ದೇಶದಾದ್ಯಂತ 35 ಸಾವಿರ ಮಾರಾಟ ಮಳಿಗೆ ಮತ್ತು 180 ಕ್ಕೂ ಹೆಚ್ಚು ಮೊಬೈಲ್ ದುರಸ್ತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು. ‘ಚೀನಾ ಮೂಲದ ಒಪೊ, ಜಾಗತಿಕ ಮೊಬೈಲ್ ಕಂಪೆನಿಯಾಗಿದ್ದು 20 ರಾಷ್ಟ್ರಗಳಲ್ಲಿ ಮಾರುಕಟ್ಟೆ ಹೊಂದಿದೆ. ಆನ್ಲೈನ್ ಮೂಲಕ ಗ್ರಾಹಕರನ್ನು ತಲುಪಲು ಮುಂಚೂಣಿ ಇ–ಕಾಮರ್ಸ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿದ್ದೇವೆ’ ಎಂದು ಸ್ಕೈನೆಟ್ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಕರ್ನಾಟಕದ ಉಪಾಧ್ಯಕ್ಷ ರ್್ಯಾಂಬೊ ಗೊಯುವಾನ್ ಝಾರ್ ತಿಳಿಸಿದರು.

ಮೊಬೈಲ್ ವೈಶಿಷ್ಟ್ಯ
16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ, 3ಜಿಬಿ ರ್್ಯಾಮ್, 32 ಜಿ.ಬಿ ರೋಮ್, ಗೊರಿಲ್ಲಾ ಗಾಜು.ಬೆರಳಚ್ಚುಗಳ (ಫಿಂಗರ್ ಪ್ರಿಂಟ್) ಮೂಲಕ ಮೊಬೈಲ್ ಲಾಕ್, ಅನ್ಲಾಕ್ ಮಾಡುವ ಸೌಲಭ್ಯ ಈ 4ಜಿ ಸ್ಮಾರ್ಟ್ಫೋನ್ನ ವಿಶೇಷತೆಯಾಗಿದೆ.

ಐದು ಬೆರಳುಗಳ ಪ್ರತ್ಯೇಕ ಪ್ರಿಂಟ್ ಮೂಲಕ ಸಾಮಾಜಿಕ ಜಾಲತಾಣ, ಸೆಲ್ಫಿ, ಕರೆ, ಎಸ್ಎಂಎಸ್, ಗೇಮ್ಸ್ ಮುಂತಾದ ಅಗತ್ಯ ಕಾರ್ಯವನ್ನು ಮಾತ್ರ ಆಯ್ಕೆ ಮಾಡಿಕೊಳ್ಳವ ಸೌಲಭ್ಯವಿದೆ. ಈ ಮೊಬೈಲ್ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೊದಲು 329 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಐಮೇ ಲಿಂಗ್ ಅವರು ತಿಳಿಸಿದರು.ಎಫ್1ಎಸ್ ಬೆಲೆ: ₹ 17,900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.