ಚೆನ್ನೈ (ಪಿಟಿಐ/ಐಎಎನ್ಎಸ್): ಭಾರತ ಹಾಗೂ ಲಂಕಾ ನಡುವೆ 1987ರಲ್ಲಿ ಆದ ರಾಜೀವ್ ಗಾಂಧಿ-ಜಯವರ್ಧನೆ ಒಪ್ಪಂದ ಜಾರಿಗೆ ಕ್ರಮ ತೆಗೆದುಕೊಳ್ಳುವಂತೆ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭಾನುವಾರ ಪತ್ರ ಬರೆದಿದ್ದಾರೆ.

ಲಂಕಾದಲ್ಲಿ ಜತಿಕಾ ಹೆಲಾ ಉರುಮಯಾ ನೇತೃತ್ವದ ತೀವ್ರಗಾಮಿ ಗುಂಪು ಈ ಒಪ್ಪಂದ ರದ್ದುಗೊಳಿಸಲು ಪ್ರಯತ್ನಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಕರುಣಾನಿಧಿ, ದ್ವೀಪ ರಾಷ್ಟ್ರದಲ್ಲಿ ತಮಿಳರ ಹಕ್ಕುಗಳನ್ನು ರಕ್ಷಿಸಲು ಮಧ್ಯಪ್ರವೇಶಿಸಬೇಕೆಂದು ಪ್ರಧಾನಿಯವರನ್ನು ಒತ್ತಾಯಿಸಿದ್ದಾರೆ.

`ಶ್ರೀಲಂಕಾ ಸಂವಿಧಾನದ 13ನೇ ತಿದ್ದುಪಡಿ ರದ್ದುಪಡಿಸಲು ತೀವ್ರವಾದಿ ಗುಂಪು ಪ್ರಯತ್ನಿಸುತ್ತಿದೆ. ಇದು ಲಂಕಾ ಹಾಗೂ ಭಾರತದ ನಡುವಿನ ಒಪ್ಪಂದದ ಮೇಲೆ ನೇರ ಪರಿಣಾಮ ಬೀರುತ್ತದೆ. ತಮಿಳು ಪ್ರಾಬಲ್ಯದ ಉತ್ತರ ಪ್ರಾಂತ್ಯದಲ್ಲಿ ನಡೆಯಲಿರುವ ಚುನಾವಣೆ ರದ್ದುಪಡಿಸುವುದಕ್ಕೂ ಈ ಗುಂಪು ಹುನ್ನಾರ ನಡೆಸುತ್ತಿದೆ. ಇಂತಹ ಗಂಭೀರ ಸನ್ನಿವೇಶನದಲ್ಲಿ ಭಾರತ ಕೈಕಟ್ಟಿ ಕೂರುವಂತಿಲ್ಲ' ಎಂದಿದ್ದಾರೆ.

ಈ ಒಪ್ಪಂದದಲ್ಲಿ ಶ್ರೀಲಂಕಾ ಸರ್ಕಾರ ತಮಿಳು ಭಾಷಿಕರು ಹೆಚ್ಚಿರುವ ಪ್ರದೇಶಗಳಿಗೆ ಸ್ವಾಯತ್ತತೆ ನೀಡು ವುದಾಗಿ ಭರವಸೆ ನೀಡಿತ್ತು.
ಭಾರತದಲ್ಲಿ ಲಂಕಾ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದನ್ನೂ ಪತ್ರದಲ್ಲಿ ಪ್ರಸ್ತಾಪಿಸಿರುವ ಕರುಣಾನಿಧಿ, `ಇದರಿಂದಾಗಿ ನಮ್ಮ ಸಂಪನ್ಮೂಲ ಬರಿದಾಗುತ್ತಿದೆ. ಸುಮಾರು 2.25 ಲಕ್ಷ ಮಂದಿ ತಾಯ್ನಾಡಿಗೆ ಮರಳಲು ಕಾಯುತ್ತಿದ್ದಾರೆ' ಎಂದಿದ್ದಾರೆ.

ತರಬೇತಿಗೆ ಜಯಾ ಕಿಡಿ: ಶ್ರೀಲಂಕಾ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡುವ ವಿಷಯದಲ್ಲಿ ಕೇಂದ್ರವು ಸಂವೇದನೆ ಕಳೆದುಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಜಯಲಲಿತಾ, `ತಮಿಳರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕೊನೆಗಾಣಿಸಲು ಶ್ರೀಲಂಕಾ ಸಮಾಧಾನಕರ ಕ್ರಮ ತೆಗೆದುಕೊಳ್ಳಬೇಕು. ಆ ಬಳಿಕವಷ್ಟೇ ಲಂಕಾ ರಕ್ಷಣಾ ಸಿಬ್ಬಂದಿಗೆ ತರಬೇತಿ ನೀಡಬೇಕು' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.