ಸೋಮವಾರ, ಜೂನ್ 21, 2021
20 °C

ಒಳಗಣ್ಣು ಕಂಡ ವೈವಿಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಳಗಣ್ಣು ಏನನ್ನೇ ಗ್ರಹಿಸಿದರೂ ಅದು ವಿಶಿಷ್ಟವಾಗಿರುತ್ತದೆ ಎಂಬುದಕ್ಕೆ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇದೀಗ ಆರಂಭವಾಗಿರುವ ಚಿತ್ರಕಲೆ ಮತ್ತು ಇನ್‌ಸ್ಟಾಲೇಶನ್‌ಗಳ ಪ್ರದರ್ಶನವೇ ಸಾಕ್ಷಿ. ಇವು ಬಿ.ಪಿ. ಕಾರ್ತಿಕ್‌ ಮತ್ತು ಸೀಮಾ ದುವಾ ಅವರ ಕಲಾಕೃತಿಗಳು.ಇನ್‌ಸ್ಟಾಲೇಶನ್‌ ಕಲೆಯಲ್ಲಿ ಪರಿಣತಿ ಪಡೆದಿರುವ ಸೀಮಾ ದುವಾ, ಮನುಷ್ಯನ ಭಾವಾತಿರೇಕಗಳನ್ನು ತಮ್ಮ ಕಲಾಕೃತಿಗಳಲ್ಲಿ ದಾಖಲಿಸಿದ್ದಾರೆ. ಕುಂಚದಲ್ಲಿ ಬಣ್ಣಗಳ ಬೀಸುಗಳಿಂದ ಕಲಾಕೃತಿಗಳನ್ನು ರಚಿಸುವುದಕ್ಕೂ ಲೋಹಗಳನ್ನು ಮೌಲ್ಡ್‌ ಮಾಡಿ ತಯಾರಿಸುವ ಇನ್‌ಸ್ಟಾಲೇಶನ್‌ ಕಲೆಗೂ ಅಜಗಜಾಂತರ. ಆದರೆ ಈ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ ಸೀಮಾ ದುವಾ. ಈ ಬಾರಿಯ ಪ್ರದರ್ಶನದಲ್ಲಿ ಹೆಣ್ಣು ಗಂಡಿನ ಸಮ್ಮಿಲನವನ್ನು ವಸ್ತುವಾಗಿಟ್ಟುಕೊಂಡು ಮಾಡಿರುವ ಪ್ರತಿಮೆಗಳು ಆಕರ್ಷಕವಾಗಿವೆ.ಮತ್ತೊಬ್ಬ ಕಲಾವಿದ ಬಿ.ಪಿ. ಕಾರ್ತಿಕ್‌ ಅವರನ್ನು ಬಹುತೇಕ ಕಲಾವಿದರಂತೆ ಬುದ್ಧನ ಬದುಕು ಮತ್ತು ಭಾವ ಸೆಳೆದಿರುವಂತಿದೆ. ಮಹಾವೀರ ಬುದ್ಧನಾಗುವುದಕ್ಕೂ ಮೊದಲು ಅಡವಿಯಲ್ಲಿ ವಾಸಿಸುವುದು, ಅವನ ಸುತ್ತಮುತ್ತ ಆನೆ, ಜಿಂಕೆ, ನವಿಲು ಮುಂತಾದ ಸಾಧುಪ್ರಾಣಿಗಳು ಮೇಳೈಸಿರುವಂತೆ ಕಾರ್ತಿಕ್‌ ಕಲ್ಪಿಸಿಕೊಂಡಿದ್ದಾರೆ. ಆದರೆ ಕಲಾಕೃತಿಗಳಲ್ಲಿ ಅವರು ಮೂಡಿಸಿರುವ ಕಾಡು ಮತ್ತು ಅಲ್ಲಿನ ಬದುಕಿನ ವಿವರಗಳು ಅವರು ವಸ್ತುಗಳನ್ನು ಪರಿಭಾವಿಸುವ ರೀತಿಗೆ ಕನ್ನಡಿ.ದಟ್ಟವಾದ ಮೋಡಗಳ ಮರೆಯಿಂದ ಒಮ್ಮೆಲೇ ಗೋಚರಿಸುವ ಸೂರ್ಯನನ್ನು ಬುದ್ಧನೂ ಆನಂದದಿಂದ ದಿಟ್ಟಿಸುವ ಬಗೆ, ಆ ಬೆಳಕಿನಿಂದ ಬೆಳಗಿದ ಗಿಡಮರಗಳು, ಬೇರು, ಸುತ್ತಲ ವಾತಾವರಣ ಅದ್ಭುತವಾಗಿ ಮೂಡಿಬಂದಿದೆ.ಇಂದು ಆರಂಭ

‘ಇನ್ನರ್‌ ವಿಷನ್‌’ ಎಂಬ ಈ ಪ್ರದರ್ಶನಕ್ಕೆ ಮಾ.24ರ ಸೋಮವಾರ ಮಧ್ಯಾಹ್ನ 12.30ಕ್ಕೆ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಚಾಲನೆ ನೀಡುತ್ತಾರೆ. ಕಲಾ ವಿಮರ್ಶಕ ಎಂ.ಎಚ್.ಕೃಷ್ಣಯ್ಯ ಹಾಗೂ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಎಸ್.ಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ.ಇದೇ ಸಂದರ್ಭದಲ್ಲಿ, ಐದು ವರ್ಷದ ಕಲಾವಿದೆ ಗೌತಮಿ ಅವರು ಚಿತ್ರಕಲಾ ಪ್ರಾತ್ಯಕ್ಷಿಕೆಯನ್ನೂ ನಡೆಸಿಕೊಡಲಿದ್ದಾರೆ.

ಮಾ. 30ರವರೆಗೂ ಪ್ರದರ್ಶನ ಬೆಳಿಗ್ಗೆ 10ರಿಂದ ರಾತ್ರಿ 7ವರೆಗೂ ತೆರೆದಿರುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.